Mayur Patel: ತನಗೆ ಸಿನೆಮಾ ಆಫರ್ ಏಕೆ ಸಿಗುತ್ತಿಲ್ಲ ಎಂದು ಮುಲಾಜಿಲ್ಲದೆ ಹೇಳಿದ ನಟ ಮಯೂರ್ ಪಟೇಲ್
ಬಹು ದೊಡ್ಡ ಗ್ಯಾಪ್ (Long Gap) ಬಳಿಕ ಚಿತ್ರ ನಟ ಮಯೂರ್ ಪಟೇಲ್ (Mayur Patel) ರವರು ರಾಜೀವ್ ಐಎಎಸ್ (Rajeev IAS) ಎಂಬ ಸಿನಿಮಾ (Movie) ಒಂದರಲ್ಲಿ ಒಂದು ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ (Guest Role) ಬಂದರೂ ಸಜ ಅದೊಂದು ಸ್ಪೆಷಲ್ ರೋಲ್ (Special Role) ಆಗಿದೆ ಎನ್ನುತ್ತಾರೆ. ಇನ್ನು ಇದೇ ಸಿನಿಮಾ ಸಲುವಾಗಿ ಸಂದರ್ಶನ (Interview) ಒಂದರಲ್ಲಿ ಭಾಗಿಯಾದ ಇವರು ಸಿನಿಮಾ ರಂಗದಿಂದ ದೂರ ಉಳಿಯಲು ಕಾರಣ ಏನು ಎಂಬದನ್ನ ಬಿಚ್ಚಿಟ್ಟಿದ್ದಾರೆ.
ಅದೊಂದು ಕಾಲದಲ್ಲಿ ನಾನು ಕೈತುಂಬಾ ಅವಕಾಶಗಳನ್ನು ಇಟ್ಟುಕೊಂಡಿದ್ದು ಒಳ್ಳೊಳ್ಳೆ ಸಿನಿಮಾಗಳು ಸಹ ನನಗೆ ಸಾಕಷ್ಟು ಸಿಗುತ್ತಿತ್ತು. ಆದರೆ ಆ ಸಮಯವೆಲ್ಲಾ ಕಳೆದ ಮೇಲೆ ಈಗ ನನ್ನ ಹತ್ತಿರ ಯಾರು ಸಹ ಕಥೆ ಹೇಳಲು ಹುಡುಕಿಕೊಂಡು ಬರುತ್ತಿಲ್ಲ ಏಕೆಂದರೆ ಎಲ್ಲಾ ಕಡೆ ನನ್ನ ಬಗ್ಗೆ ನೆಗೆಟಿವ್ ಆಗಿ ಪಬ್ಲಿಸಿಟಿ ಆಗಿದ್ದು ನನ್ನನ್ನು ನೋಡಬೇಕು ಎಂದರೆ ನನ್ನ ತಂದೆಯನ್ನು ದಾಟಿಕೊಂಡು ಬರಬೇಕು ಎಂದು ಹಲವರು ಅಂದುಕೊಂಡಿದ್ದಾರೆ.
ಇದೇ ನನಗೆ ಮೈನಸ್ ಪಾಯಿಂಟ್ ಆಗಿದ್ದು ಆದರೆ ನನ್ನ ತಂದೆ ಅವರು ಇಂಡಸ್ಟ್ರಿಯಲ್ಲಿ ಇದ್ದರೂ ಕೂಡ ಎಂದು ನನ್ನ ಸಿನಿಮಾ ವಿಚಾರವಾಗಿ ತಲೆ ಹಾಕಿದವರಲ್ಲ. ಹೌದು ನನ್ನ ಪ್ರೊಡ್ಯೂಸರ್ ಗಳನ್ನು(Producers) ಮಾತನಾಡಿಸುತ್ತಿದ್ದರು ಅವರೇನಾದರೂ ಸಲಹೆ ಕೇಳಿದಾಗ ಮಾತ್ರ ಸಿನಿಮಾ ಬಿಡುಗಡವ ವೇಳೆಗೆ ಏನಾದರು ಸಜೆಶನ್ ಕೊಡುತ್ತಿದ್ದರು ಅಷ್ಟೇ ನನಗೆ ಗೊತ್ತಿರೋ ಹಾಗೆ ಮತ್ಯಾವ ವಿಷಯದಲ್ಲಿ ಅವರು ತಲೆ ಹಾಕುತ್ತಿರಲಿಲ್ಲ ಎಂದಿದ್ದಾರೆ ಮಯೂರ್ ಪಾಟೇಲ್.
ಆದರೆ ಈ ರೀತಿಯಾದ ಒಂದು ತಪ್ಪು ಕಲ್ಪನೆ ಆಗ ಎಲ್ಲರ ತಲೆಯಲ್ಲಿ ತುಂಬಿದ್ದು ಹಾಗಾಗಿ ಹೆಚ್ಚಿನ ಜನರು ನನ್ನ ಹತ್ತಿರ ಬರಲೇ ಇಲ್ಲ ಹಾಗೂ ಇನ್ನೊಂದು ಏನೆಂದರೆ ನಾನು ತುಂಬಾ ಸಂಭಾವನೆ ಡಿಮ್ಯಾಂಡ್ ಮಾಡುತ್ತೇನೆ ಎಂದು ಸಹ ಸುಳ್ಳು ಸುದ್ದಿ ಹಬ್ಬಿಸಿದ್ದರು. ಇದರ ಜೊತೆಗೆ ನನಗೆ ತುಂಬಾ ಅಟಿಟ್ಯೂಡ್ ಇದೆ ಎಂದು ಹಲವರು ಮಾತನಾಡಿಕೊಂಡಿದ್ದಾರೆ.ಆದರೆ ಈವರೆಗೆ ನನಗೆ ಆಟಿಟ್ಯೂಡ್ ಸ್ಪೆಲ್ಲಿಂಗ್ ಸಹ ಗೊತ್ತಿಲ್ಲ.
ನಾನು ಎಲ್ಲರೊಳಗೆ ಒಬ್ಬನಾಗಿ ಇರಲು ಆಸೆಪಡುತ್ತಿದ್ದವನಾಗಿದ್ದು ಇಂದಿಗೂ ನನ್ನ ತಂದೆ ಮತ್ತು ಹೆಂಡತಿ ಕೂಡ ಸ್ವಲ್ಪ ಆದರೂ ಆಟಿಟ್ಯೂಡ್(Atitude) ಇಟ್ಕೋಬೇಕು ಎಂದು ಸಲಹೆ ಕೊಡುತ್ತಾರೆ. ನನಗೆ ಅದು ಬರುವುದೇ ಇಲ್ಲ. ಆದರೂ ಕೂಡ ನನ್ನ ಬಗ್ಗೆ ಕೆಲವರು ಹೀಗೆಲ್ಲಾ ಹಬ್ಬಿಸಿದ ಕಾರಣ ಈಗ ಅವಕಾಶಗಳಿಲ್ಲದ ರೀತಿ ಆಗಿ ಹೋಗಿದೆ. ಈ ಕಾರಣದಿಂದಾಗಿ ಸಿನಿಮಾಗಳಲ್ಲಿ ನಾನು ಕಾಣಿಸಿಕೊಳ್ಳುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ನನಗೆ ತುಂಬಾ ಆಟಿಟ್ಯೂಡ್ ಎಂದು ಸುಳ್ಳು ಹಬ್ಬಿಸಿ ಬಿಟ್ಟಿದ್ದಾರೆ ಹಾಗಾಗಿ ಸಿನಿಮಾ ಆಫರ್ ಸಿಗುತ್ತಾ ಇಲ್ಲ ಎಂದು ಸಂದರ್ಶನದಲ್ಲಿ ನೋವು ಹಂಚಿಕೊಂಡಿದ್ದಾರೆ ನಟ ಮಯೂರ್ ಪಟೇಲ್