Actor Ram Charan: ಸಾಮಾನ್ಯ ಡ್ರೈವರ್ ಮಗ ಯಶ್ ಹೀರೋ ಆಗಿದ್ದಕ್ಕೆ ನಟ ರಾಮ್ ಚರಣ್ ಹೇಳಿದ್ದೇ ಬೇರೆ
ಸದ್ಯ ಇಂಡಿಯಾ ಟುಡೇ (India Today) ಕಾನ್ಕ್ಲೇವ್‌ನಲ್ಲಿ ತೆಲುಗು ನಟ ರಾಮ್ ಚರಣ್ ತೇಜಾ (Ram Charan Teja) ಮಾತನಾಡಿದ್ದು ಯಾವುದೇ ರೀತಿಯಾ ಅಳುಕಿಲ್ಲದೇ ಓಪನ್ ಆಗಿಯೇ ಮಾತನಾಡಿದ್ದಾರೆ. ಟ್ಯಾಲೆಂಟ್ ಸ್ಪೀಕ್ಸ್ ಅಂತಲೇ ಸಾರಿ ಸಾರಿ ಹೇಳಿಕೊಂಡಿದ್ದು ಹೀಗೆ ಹೇಳೋಕೆ ಕಾರಣ ಕೂಡ ಇದೆ.
ಇಂಡಿಯಾ ಟುಡೇ ಕಾನ್ಕ್ಲೇವ್‌ನಲ್ಲಿ ರಾಜದೀಪ್ ಸರ್ದೇಸಾಯಿ (Rajadeep Sardesai) ಅವರು ರಾಮ್ ಚರಣ್ ತೇಜಾ ಅವರಿಗೆ ಒಂದು ಪ್ರಶ್ನೆ ಕೇಳುತ್ತಾರೆ.
ಜನ ಮೆಚ್ಚಿದರೇ ಜನ ಒಪ್ಪಿಕೊಂಡ್ರೆ ನೀವು ಸೂಪರ್ ಸ್ಟಾರ್ ಆಗ್ತೀರಿ ಅಲ್ವೇ ಅನ್ನೋದೇ ರಾಜದೀಪ್ ಸರ್ದೇಸಾಯಿ ಅವರ ಪ್ರಶ್ನೆ ಆಗಿತ್ತು.
ರಾಜದೀಪ್ ಸರ್ದೇಸಾಯಿ ಪ್ರಶ್ನೆಗೆ ಉತ್ತರಿಸಿದ ರಾಮ್ ಚರಣ್ ತೇಜಾ ಪ್ರತಿಭೆ ಮಾತನಾಡುತ್ತದೆ. ಯಶ್ (Yash) ಟ್ಯಾಲೆಂಟೆಡ್ ಆಗಿದ್ದಾರೆ. ಅವರ ಪ್ರತಿಭೆ ಮಾತನಾಡಿದೆ ಎಂದು ರಾಮ್ ಚರಣ್ ಉದಾಹರಣೆಯಾಗಿ ಯಶ್ ರವರ ಹೆಸರು ತೆಗೆದುಕೊಂಡಿದ್ದಾರೆ. ಇನ್ಕುಪ್ರತಿಭೆ ಇದ್ರೆ ಮಾತ್ರ ಸ್ಟಾರ್‌ಗಿರಿ ಇರುತ್ತದೆ. ಇಲ್ಲವಾದ್ರೆ ಏನೂ ಇಲ್ಲ ಅನ್ನೋದೇ ರಾಮ್ ಚರಣ್ ತೇಜಾ ಅವರ ಮಾತಿನ ತಾತ್ಪರ್ಯ ಆಗಿದೆ ಅಂತಲೇ ಹೇಳಬಹುದು
ತದನಂತರ ಯಶ್ ರವರ ಜೊತೆ ರಾಮ್ ಚರಣ್ ರವರನ್ನು ತಾಳೆ ಹಾಕಿ ಅವರಿಗೆ ಪ್ರಶ್ನೆ ಕೇಳಿ ಉತ್ತರ ತರಿಸುವ ಪ್ರಯತ್ನ ಮಾಡಲಾಗಿದ್ದು ಅದಕ್ಕೆ ನಟ ರಾಮಚರಣ್ ಕಡೆಯಿಂದ ಸಿಕ್ಕ ಉತ್ತರ ಮಾತ್ರ ಬಹಳ ಶ್ಲಾಘನೀಯವಾಗಿತ್ತು ಎನ್ನಬಹುದು. ಹೌದು ಸ್ಟಾರ್ ಗಿರಿ ಬಗ್ಗೆ ಮಾತನಾಡುತ್ತಾ ಮೆಗಾಸ್ಟಾರ್ ಚಿರಂಜೀವಿ (Chiranjeevi) ಪುತ್ರ ನೀವು.
ನೀವು ಸಹ ಸ್ಟಾರ್ ಆಗಿದ್ದೀರಾ ಹಾಗೆ ಬಸ್ ಡ್ರೈವರ್ (Bus Driver) ಮಗ ಆಗಿದ್ದ ಯಶ್ ಕೂಡ ಸ್ಟಾರ್ ಆಗಿದ್ದಾರೆ. ಇನ್ನು ಆರು ತಿಂಗಳ ಹಿಂದೆ ಇದೇ ಸಂದರ್ಶನದಲ್ಲಿ ಯಶ್ ಕೂಡ ಪಾಲ್ಗೊಂಡಿದ್ದರು ಈಗ ಆ ಜಾಗದಲ್ಲಿ ನೀವು ಇದ್ದೀರಾ ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದಾಗ ನಟ ರಾಮ್ ಚರಣ್ ರವರು ಹೌದು ನಾನು ಯಶ್ ಅವರು ಪಾಲ್ಗೊಂಡಿದ್ದ ಸಂಚಿಕೆ ನೋಡಿದ್ದೇನೆ ಎಂದಿದ್ದಾರೆ.
ಅವರು ಬಹಳ ಚೆನ್ನಾಗಿ ಮಾತನಾಡುತ್ತಾರೆ ಎಂದ ರಾಮ್ ಚರಣ್ ತೇಜ್ ಈ ವಿಷಯದ ಬಗ್ಗೆ ನಾನು ಹೇಳುವುದು ಇಷ್ಟೇ ಅಂತಿಮವಾಗಿ ಪ್ರತಿಭೆ ಮಾತ್ರ ಮಾತನಾಡುತ್ತದೆ. ಹೌದು ಯಾರು ಯಾವುದೇ ಬ್ಯಾಗ್ರೌಂಡ್ ಇಂದ ಬಂದರು ಅಥವಾ ಅದಿಲ್ಲದೇ ಬಂದರು ಅವರಲ್ಲಿ ಪ್ರತಿಭೆ ಇದ್ದರೆ ಮಾತ್ರ ಅವರು ಬೆಳಗಲು ಸಾಧ್ಯ. ಹೌದು ಅದು ಇಲ್ಲಿ ಸಾಬೀತು ಆಗಿದೆ ಎಂದಿದ್ದು ಈ ಮಾತುಗಳನ್ನು ಎಲ್ಲರೂ ಒಪ್ಪಲೇಬೇಕು. ಹೌದು ಯಾಕೆಂದರೆ ಸಿನಿಮಾ ಬ್ಯಾಗ್ರೌಂಡ್ ಇಂದ ಅಥವಾ ಸ್ಟಾರ್ ಮಕ್ಕಳಾಗಿ ಬಂದ ಕಾರಣಕ್ಕೆ ಮಾತ್ರ ಅವರಿಗಳಿಗೆ ಸುಲಭವಾಗಿ ಮೊದಲ ಅವಕಾಶ ಸಿಗಬಹುದೇ ಹೊರತು ಅವರು ಸಾಧನೆ ಮಾಡಲಾಗದು. ಇಲ್ಲಿ ಟ್ಯಾಲೆಂಟೆ ಎಲ್ಲದಕ್ಕೂ ಮುಖ್ಯ ಎಂದಿದ್ದಾರೆ.