ನಟ ಧನುಷ್ (Actor Dhanush) ಅವರು ವಿಭಿನ್ನ ನಟನೆಯ ಮೂಲಕವೇ ಕಾಲಿವುಡ್ ರಂಗದಲ್ಲಿ ತುಂಬಾ ಫೇಮಸ್ ಆದವರೆನ್ನೆಬಹುದು. ಒಂದಾದ ನಂತರ ಹಿಟ್ ಸಿನೆಮಾದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸಿ ಬಳಿಕ ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಕಾಲಿವುಡ್ ನಲ್ಕಿ ಅವ್ಟ್ ಸ್ಯಾಂಡಿಂಗ್ ಸ್ಥಾನ ಪಡೆದ ನಟ ಇವರೆನ್ನಬಹುದು. ಬಳಿಕ ಸೂಪರ್ ಸ್ಟಾರ್ ರಜನೀಕಾಂತ್ (Rajanikanth) ಅವರ ಹಿರಿಯ ಪುತ್ರಿ ಐಶ್ವರ್ಯಾ (Aishwarya) ಅವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ಇತ್ತೀಚೆಗೆ ಈ ಜೋಡು ಬೇರೆ ಬೇರೆ ಆಗುವ ಮೂಲಕ ಅಭಿಮಾನಿಗಳಿಗೆ ದೊಡ್ಡ ಶಾಖ್ ಸಹ ನೀಡಿದರು.
ಈ ಮೂಲಕ ಈ ಸ್ಟಾರ್ ದಂಪತಿ ಡೈವರ್ಸ್ ಪಡೆದ ಸುದ್ದಿ ವೈರಲ್ ಆಗುತ್ತಿದ್ದಂತೆ ಬಹುತೇಕ ತಾರಾಗಣ ಹಾಗೂ ಸೆಲೆಬ್ರಿಟಿಗಳು ಇವರನ್ನು ಒಂದು ಮಾಡಲು ಪ್ರಯತ್ನ ಪಟ್ಟಿದ್ದಾರೆ. ಈ ಮೂಲಕ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಒಂದಾಗಿ ಬದುಕಿ ಎಂದು ಮನವಿ ಮಾಡಿದ್ದಾರೆ. ಆದರೂ ಈ ಜೋಡಿ ಒಂದಾಗುವ ಲಕ್ಷಣ ಕಂಡು ಬರದೇ ಇದೀಗ ನಟ ಧನುಷ್ ಅವರು ಮರುವಿವಾಹ ವಾಗುತ್ತಾರೆ ಎಂಬ ಗಾಳಿ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ.
ಯಾರನ್ನು ಮದುವೆಯಾಗ್ತಾರೆ?
ನಟಿ ಮೀನಾ (Meena). ಅವರನ್ನು ನಟ ಧನುಷ್ ವಿವಾಹವಾಗ್ತಾರೆ ಎಂಬ ಮಾಹಿತಿ ಸದ್ಯ ವೈರಲ್ ಆಗುತ್ತಿದೆ. ಈ ಮೂಲನ ಮೀನಾ ಪತಿ ವಿದ್ಯಾಸಾಗರ್ ಅವರು ನಿಧನ ಹೊಂದಿದ್ದು ಇವರನ್ನು ಮರುವಿವಾಹ ವಾಗುವ ನಿರ್ಣಯಕ್ಕೆ ಬಂದಿದ್ದಾರೆ ಎಂದು ಮಾಹಿತಿ ಯೊಂದು ಹೊರಬಿದ್ದಿದೆ. ಈ ಮಾಹಿತಿಯನ್ನು ನೀಡಿದ್ದು ಮತ್ಯಾರು ಅಲ್ಲ ನಟ, ಪತ್ರಕರ್ತರಾದ ಬೈಲ್ವಾನ್ ರಂಗನಾಥನ್ (Bayilvan Ranganathan) ಅವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಯೂಟ್ಯೂಬರ್ ಮೊದಲಿಂದಲೂ ಗಾಸಿಪ್ ನ್ಯೂಸ್ ಹರಿದಾಡಿಸುವಲ್ಲಿ ಫೇಮಸ್ ಆಗಿದ್ದು ಈಗ ಇದು ಕೂಡ ಅಂತಹದ್ದೆ ಒಂದು ಸುದ್ದಿ ಅಷ್ಟೇ ಎನ್ನಲಾಗುತ್ತಿದೆ. ಈ ಹಿಂದೆ ಇದೇ ಯೂಟ್ಯೂಬರ್ ಅನೇಕ ನಟ ನಟಿಯರಿಗೆ ಇರುವ ಅಕ್ರಮ ವ್ಯವಹಾರದ ಬಗ್ಗೆ ತಿಳಿಸಿದ್ದು ಆ ನಟ ನಟಿಯರು ಈತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ ಮತ್ತು ಸೆಲೆಬ್ರಿಟಿಗಳು ಸಮಾಜಿಕ ಜಾಲತಾಣದಲ್ಲಿ ಇವರ ವಿರುದ್ಧ ಕಿಡಿಕಾರಿದ್ದಾರೆ. ಒಟ್ಟಾರೆಯಾಗಿ ಹಬ್ಬಿರುವ ಈ ವದಂತಿ ಸತ್ಯ ಅಥವಾ ಸುಳ್ಳೆಂಬುದು ಇನ್ನು ಖಾತರಿಯಾಗದೇ ಈ ಬಗ್ಗೆ ನಟ ಧನುಷ್ ಮುಂದಿನ ದಿನದಲ್ಲಿ ಪ್ರತಿಕ್ರಿಯೆ ನೀಡಬಹುದೇ ಎಂದು ಕಾದು ನೋಡಬೇಕು.