Ashwini Puneeth Rajkumar: ಅಂಗಡಿಯಲ್ಲಿ ಸಿಹಿ ತಿನ್ನುತ್ತಿರುವ ಅಶ್ವಿನಿ, ಕ್ಯೂಟ್ ವಿಡಿಯೋ ವೈರಲ್

Advertisement
ನಮ್ಮ ಕನ್ನಡ ಚಿತ್ರರಂಗದ (KFI) ಪುನೀತ್ ರಾಜ್ ಕುಮಾರ್ (Puneeth Rajkumar) ರವರಿಗೂ ಮತ್ತು ಭೋಜನಕ್ಕೂ ಒಂದು ಅವಿನಾಭಾವ ಸಂಬಂಧವಿತ್ತು ಎನ್ನಬಹುದು. ಅಪ್ಪು ಆಹಾರಪ್ರಿಯ(Food Lover) ಅದರಲ್ಲೂ ಮಾಂಸಹಾರಿ (Non Vej) ಎಂದರೆ ಬಹಳ ಅಚ್ಚುಮೆಚ್ಚು. ನಾನು ತುಂಬಾ ಇಷ್ಟಪಟ್ಟು ಊಟವನ್ನು ಮಾಡುತ್ತೇನೆ. ಅಷ್ಟೇ ವ್ಯಾಯಾಮವನ್ನು ಸಹ ಮಾಡುತ್ತೇನೆ ಹಾಗಾಗಿ ನನ್ನ ದೇಹದ ಬ್ಯಾಲೆನ್ಸ್ (Balance) ಅನ್ನು ನಾನು ಚೆನ್ನಾಗಿ ಕಂಡುಕೊಂಡಿದ್ದೇನೆ ಎಂದು ಸಾಕಷ್ಟು ಭಾರಿ ಅಪ್ಪು ರವರು ಹೇಳುತ್ತಿದ್ದರು.
ಹೌದು ಅಪ್ಪು ರವರು ಬಿಡುವಿನ ವೇಳೆಯಲ್ಲಿ ಬೆಂಗಳೂರಿನಲ್ಲಿ (Banglore) ಇರುವಂತಹ ಬಹುತೇಕ ಹೋಟೆಲ್ ಗಳಲ್ಲಿ (Hotel) ರೆಸ್ಟೋರೆಂಟ್ ಗಳಲ್ಲಿ ಇದೆಲ್ಲದಕ್ಕಿಂತ ಹೆಚ್ಚಾಗಿ ಬೀದಿ ಬದಿಯಲ್ಲಿ ಸಿಗುವಂತಹ ತಿಂಡಿಗಳನ್ನು ಕೂಡ ಹೆಚ್ಚು ತಿನ್ನುತ್ತಿದ್ದರು. ಹೌದು ಅಷ್ಟೇ ಅಲ್ಲದೆ ಅವರು ಚಿತ್ರೀಕರಣದ ವೇಳೆ ಕರ್ನಾಟಕದಾದ್ಯಂತ ಇರುವ ಎಲ್ಲಾ ಪ್ರದೇಶದಲ್ಲಿಯೂ ಕೂಡ ಸಿಗುವ ವಿಶಿಷ್ಟವಾದ ಆಹಾರವನ್ನು (Different Food) ತಿನ್ನುತ್ತಿದ್ದರು. ಅಪ್ಪು ಎಲ್ಲೇ ಹೋದರೂ ಕೂಡ ಅವರಿಗೆ ಇಷ್ಟವಾದ ಊಟ ಮಾಡದೆ ಹಿಂತಿರುಗಿ ಬರುತ್ತಲೇ ಇರಲಿಲ್ಲ. ಹಾಗಾಗಿ ಊಟಕ್ಕೆ ಅವರಿಗೂ ಅವಿನಾಭಾವ ಸಂಬಂಧವಿದೆ.
ಹೌದು ಇದೇ ಕಾರಣದಿಂದಾಗಿಯೇ ಅಪ್ಪು ಅವರ ಪುಣ್ಯಸ್ಮರಣೆ ಯಂದು ಬೆಂಗಳೂರಿನಲ್ಲಿ ಯಾವೆಲ್ಲಾ ಹೋಟೆಲ್ ಗಳಲ್ಲಿ ಅಪ್ಪು ಇಷ್ಟಪಟ್ಟು ಊಟ ತಿಂಡಿ ಸವಿಯುತ್ತಿದ್ದರೋ ಅದನ್ನು ತರಿಸಿ ಎಡೆಗೆ ಇಟ್ಟು ಪೂಜೆ ಮಾಡಲಾಯಿತು. ಹೌದು ಮಲ್ಲೇಶ್ವರಂ ನಲ್ಲಿ ಇರುವ ಶ್ರೀಸಾಯಿ ರಾಮ್ಸ್ ಚಾಟ್ಸ್ ಅಂಡ್ ಜ್ಯೂಸ್ ಸೆಂಟರ್ ನಾ ಟಿಕ್ಕಿ ಪುರಿ ಮತ್ತು ಆಲೂ ದಹಿ ಪೂರಿ ಚಾಟ್ಸ್ ಅಂದರೆ ಅಪ್ಪುಗೆ ಬಹಳ ಇಷ್ಟ. ಅದರಲ್ಲೂ ದಾವಣೆಗೆರೆ ಬೆಣ್ಣೆ ದೋಸೆ ಎಂದರೆ ಬಹಳ ಅಚ್ಚುಮೆಚ್ಚು. ದಾವಣಗೆರೆಗೆ ಹೋದಾಗಲೆಲ್ಲಾ ಮಿಸ್ ಮಾಡದೇ ದೋಸೆ ತಿನ್ನುತ್ತಿದ್ದರು. ಇನ್ನೂ ಹುಬ್ಬಳಿ ಧಾರವಾಡ ಕಡೆಗೆ ಚಿತ್ರೀಕರಣಗಕ್ಕೆ ಹೋದಾಗಲೆಲ್ಲಾ ಕೂಡ ಅಲ್ಲಿನ ಜೋಳದ ರೊಟ್ಟಿಯ ಊಟ ಮಿರ್ಚಿ ಗಿರ್ಮಿಟ್ ಅಪ್ಪುಗೆ ಅಚ್ಚು ಮೆಚ್ಚು ಇದನ್ನು ಕೂಡ ಮಿಸ್ ಮಾಡುತ್ತಿರಲಿಲ್ಲ.
ಇನ್ನು ಬೆಂಗಳೂರಿನ ಬಸವೇಶ್ವರ ಖಾನಾವಳಿಗೆ ಕೂಡ ಭೇಟಿ ಮಾಡಿ ಜೋಳದ ರೊಟ್ಟಿ ಊಟವನ್ನು ಸವಿದಿದ್ದರು.ಇನ್ನೂ ಅಪ್ಪು ಮೈಸೂರಿಗೆ ಬಂದಾಗಲೆಲ್ಲ ಹನುಮಂತು ಪಲಾವ್ ಮೈಲಾರಿ ಹೋಟೆಲ್ ಗೆ ಹೋಗಿ ಮಟನ್ ಪಲಾವ್ ದೋಸೆಯ ರುಚಿ ಸವಿಯುತ್ತಿದ್ದರು. ಹೀಗೆ ತಿಂಡಿ ಬಗ್ಗೆ ಹೇಳುತ್ತಾ ಹೋದರೆ ಅಪ್ಪು ಅವರ .ಗುಣಗಾನ ಮುಗಿಯುವುದೇ ಇಲ್ಲ ಎನ್ನಬಹುದು .
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಜಿಮ್ನಲ್ಲಿ ಎಷ್ಟು ವರ್ಕೌಟ್ ಮಾಡುತ್ತಿದ್ದರೋ ಅದರಂತೆ ಮಾಂಸಹಾರ ವನ್ನು ಕೂಡ ಹೆಚ್ಚು ತಿನ್ನುತಿದ್ದರು. ಹಲವಾರು ಸಂದರ್ಶನಗಳಲ್ಲಿ ಪುನೀತ್ ರಾಜಕುಮಾರ್ ಅವರೇ ಹೇಳಿಕೊಂಡಂತೆ ಅವರಿಗೆ ಸಸ್ಯಹಾರಿ ಗಿಂತ ಮಾಂಸಹಾರಿ ಅಂದರೆ ಬಹಳ ಅಚ್ಚುಮೆಚ್ಚು. ಸದ್ಯ ಈಗೇಕೆ ಈ ವಿಚಾರದ ಜೊತೆ ಮಾತಕಥೆ ಅಂತೀರ ಕಾಣವಿದೆ. ಇತ್ತೀಚೆಗಷ್ಟೇ ಅಶ್ವಿನಿ ಪುನೀತ್ ರಾಜ್ ಕುಮಾರ್ ರವರು ಸ್ವೀಟ್ ಅಂಗಡಿ ಓಪನಿಂಗ್ ಗೆ ಹೋಗಿದ್ದು ಅಲ್ಲಿ ಅವರು ಸಿಹಿ ತಿನ್ನುವುದನ್ನು ನೋಡುತ್ತಿದ್ದರೆ ನಿಜಕ್ಕೂ ಅಪ್ಪು ನೆನಪಾಗುತ್ತಾರೆ. ಸದ್ಯ ಈ ವಿಡಿಯೋ ವೇರಲ್ ಆಗುತ್ತಿದೆ.