Karnataka Times
Trending Stories, Viral News, Gossips & Everything in Kannada

Actor Chethan: ಬಂಧನಕ್ಕೊಳಗಾದ ನಟ ಚೇತನ್, ನಿಜಕ್ಕೂ ಆಗಿದ್ದೇ ಬೇರೆ

Advertisement

ಮೈನಾ (Maina) ಈ ಸಿನೆಮಾದ ಅದ್ಭುತ ಪ್ರತಿಭೆ ಹಾಗೂ ಅಭಿನಯ ತೋರ್ಪಡಿಸಿದ್ದ ನಟ ಚೇತನ್ (Chethan) ಸಹ ನೆನಪಾಗುತ್ತಾರೆ. ನಟ ಚೇತನ್ ನಟಿಸಿದ್ದು ಕೆಲವೇ ಸಿನೆಮಾ ಆದರೂ ಮೈನಾ ಮಾತ್ರ ಬಹುತೇಕ ಅಭಿಮಾನಿಗಳ ಹಾಗೂ ಪ್ರೇಮಿಗಳ ನೆಚ್ಚಿನ ಸಿನೆಮಾ ಎನ್ನಬಹುದು. ಅದೇ ರೀತಿ ಚೇತನ್ ಅವರು ಇತ್ತೀಚಿನ ದಿನಗಳಲ್ಲಿ ಸಿನೆಮಾಕ್ಕಿಂತಲೂ ಹೆಚ್ಚು ಫೇಮಸ್ ಆಗುತ್ತಿರುವುದು ಕಾಂಟ್ರವರ್ಸಿ ಯಿಂದ ಎನ್ನಬಹುದು.

ಮತ್ತೊಂದು ವಿವಾಧದ ಸುಳಿಯಲ್ಲಿ Actor Chethan:

ನಟ ಚೇತನ್ (Chethan) ಅವರು ಮೊದಲಿಂದಲೂ ಹಿಂದೂ ಮುಸ್ಲಿಂ, ಹಿಜಾಬ್, ತಲಾಕ್, ಮಿಟು ಇನ್ನು ಅನೇಕ ವಿಚಾರದಲ್ಲಿ ಬಹಿರಂಗ ಹೇಳಿಕೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಅನೇಕ ಬಾರಿ ಪರಪ್ಪನ ಅಗ್ರಹಾರಕ್ಕೂ ತೆರಳಿದ್ದಾರೆ. ಇದೀಗ ಮತ್ತೆ ಒಂದು ಹೇಳಿಕೆ ನೀಡಿ ಪೊಲೀಸ್ ಅತಿಥಿಯಾಗಿದ್ದಾರೆ. ಇತ್ತೀಚೆಗೆ ಆಗುವ ಕೆಲವು ಬೆಳವಣಿಗೆಗಳ ಬಗ್ಗೆ ಪೋಸ್ಟ್ ಹಾಕಿದ್ದ ನಟ ಚೇತನ್ ಅವರು ಹಿಂದುತ್ವದ ವಿರುದ್ಧ ಕೆಟ್ಟದಾಗಿ ಪೋಸ್ಟ್ ಹಾಕಿದ್ದಾರೆ, ಈ ಮೂಲಕ ಶೇಷಾದ್ರಿ ಪುರ ಪೊಲೀಸ್ ಠಾಣೆಯ ದೂರಿನನ್ವಯ ಅರೆಸ್ಟ್ ಕೂಡ ಆಗಿದ್ದಾರೆ.


ಹಿಂದೂಪರ ಸಂಘಟನೆಗಳು ಒಟ್ಟಾಗಿ ಸೇರಿ ನಟನ ವಿರುದ್ಧ ದೂರನ್ನು ನೀಡಿದ್ದು ಇವರ ಮೇಲೆ ಎಫ್ ಐಆರ್ (FIR) ಸಹ ರಿಜಿಸ್ಟರ್ ಆಗಿದೆ. ಐಪಿಸಿ ಸೆಕ್ಷನ್‌ 295A ಹಾಗೂ 505 Bರಡಿಯಲ್ಲಿ ಪ್ರಕರಣ ದಾಖಲಾಗಿದ್ದು ಸದ್ಯ ಈ ಪ್ರಕರಣದ ಬಗ್ಗೆ ವಿಚಾರಣೆಗೆಂದು ಪೊಲೀಸರು ಇವರನ್ನು ಅರೆಸ್ಟ್ ಮಾಡಿದ್ದಾರೆ.

ಟ್ರೋಲ್ ಆಯ್ತು ಈ ವಿಚಾರ:

ನಟ ಚೇತನ್ (Actor Chethan) ಅರೆಸ್ಟ್ ಆಗುತ್ತಿದ್ದಾರೆಂದು ತಿಳಿಯುತ್ತಲೇ ಈ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ ಮಾತ್ರವಲ್ಲದೆ ಹಿಂದೂಪರ ಸಂಘಟನೆಗಳು ಹಾಗೂ ಚೇತನ್ ವಿರೋಧಿ ಬಣದವದರು ನೆಟ್ಟಿಗರೆಲ್ಲ ಸೇರಿಕೊಂಡು ಸರಿಯಾಗಿ ಬುದ್ಧಿ ಕಲಿಸಿ, ವಿದೇಶಕ್ಕೆ ಅಟ್ಟಿ ಇವರನ್ನ ಎಂದೆಲ್ಲ ಕಮೆಂಟ್ ಮಾಡುತ್ತಿದ್ದಾರೆ.

Leave A Reply

Your email address will not be published.