H.D.KumaraSwamy: ಕುಟುಂಬದ ಖಾಸಗಿ ವಿಷಯ ಹಂಚಿಕೊಂಡು ಕಣ್ಣೀರು ಹಾಕಿದ ಮಾಜಿ ಸಿಎಂ ಕುಮಾರಸ್ವಾಮಿ
ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳು ಪ್ರಚಾರ ಮಾಡುತ್ತಿವೆ. ಅದರಂತೆಯೇ ಮಾಧ್ಯಮಗಳು ಕೂಡಾ ಪ್ರಸಿದ್ಧ ರಾಜಕಾರಣಿಗಳನ್ನು ಕೂರಿಸಿಕೊಂಡು ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತಿದೆ.ಅದರಂತೆ ನ್ಯೂಸ್ ಫಸ್ಟ್(News First) ವಾರ್ತಾ ವಾಹಿನಿ ಆಯೋಜಿಸಿದ ಪ್ರತಿ ಶನಿವಾರ ಸಂಜೆ 7 ಗಂಟೆಗೆ ‘ನಾನು ಮುಖ್ಯಮಂತ್ರಿ’ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು ಭಾಗವಹಿಸುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಕೂಡಾ ಮೊದಲು ಭಾಗಿಯಾಗಿದ್ದರು. ಇದೀಗ ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ(Kumaraswamy) ಭಾಗಿಯಾಗಿದ್ದಾರೆ.
ಕಾರ್ಯಕ್ರಮದ ನಿರೂಪಕರಾದ ಟಿ.ಎನ್ ಸೀತಾರಾಮ್(T.N Sitaram) ಅವರು ಕೇಳಿದ ಪ್ರಶ್ನೆಗೆ ಕುಮಾರಸ್ವಾಮಿ ಹನಿಗಣ್ಣಾಗಿದ್ದಾರೆ.ಹೌದು ಸೀತಾರಾಮ್ರವರು ಕುಮಾರ್ ಸ್ವಾಮಿಯವರಿಗೆ ಅವರ ತಾಯಿಯ ಆ್ಯಸಿಡ್(Acid) ದಾಳಿಯ ಬಗ್ಗೆ ಕೇಳಿದ್ದಾರೆ.ಅದಕ್ಕೆ ಕುಮಾರಸ್ವಾಮಿ ಅವರು, ಅಂದಿನ ಬಹಳ ಕ್ಷಣ ಬಹಳ ಕಟೋರವಾಗಿತ್ತು ಇಂದಿಗೂ ಅದನ್ನು ನೆನೆಸಿಕೊಳ್ಳಲು ಆಗಲ್ಲ.
ಅಂದು ನಾನು ಧರ್ಮಸ್ಥಳದಲ್ಲಿದೆ.ತಂದೆ ಗೌಡರ ಊರಿನಲ್ಲಿ ಸಣ್ಣದಾದ ಶಿವನ ಗುಡಿಯಿದೆ. ಈಗ ರೇವಣ್ಣ ದೊಡ್ಡ ಮಟ್ಟದಲ್ಲಿ ದೇವಾಲಯ ಕಟ್ಟಿಸಿದ್ದಾರೆ.. ಪ್ರತಿ ವರ್ಷ ನಮ್ಮ ತಾಯಿ ಎಂದಿಗೂ ಅಲ್ಲಿಗೆ ಹೋಗುತ್ತಾರೆ. ಶಿವರಾತ್ರಿ ದಿನ ಅಲ್ಲಿಗೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಅಂದು ನಮ್ಮ ಕುಟುಂಬದವರೇ ಅವರ ಮೇಲೆ ಆ್ಯಸಿಡ್ ದಾಳಿ ಮಾಡಿಸಿದದ್ರು. ಅದರೆ ನಮ್ಮ ತಾಯಿ ದೇವರ ದಯದಿಂದ ಪಾರಾದರು ಎಂದಿದ್ದಾರೆ.
ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ”ಡಾ ಚಂದ್ರಶೇಖರ್, ಮಂಜುನಾಥ್ ಅವರು ತಂದೆ ಬಳಿ ಅವರ ಜೀವ ಉಳಿಯುವುದು ಕಷ್ಟ ಎಂದಿದ್ದರು. ಆದರೆ ಕಂಚಿ ಸ್ವಾಮಿ ಅವರು ಅಂದು ಕಿತ್ತಳೆ ಹಣ್ಣು ಕೊಟ್ಟು ಇದರ ರಸ ಕುಡಿಸಿ ಎಂದು ಕೊಟ್ಟರು. ಅದಾದ ನಂತರ ತಾಯಿ ಚೇತರಿಸಿಕೊಂಡರು ಎಂದಿದ್ದಾರೆ.ನಮ್ಮ ಈಗಲೂ ತಾಯಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ.
ಪ್ರತಿ ದಿನ ದೇವರ ಪೂಜೆ ಮಾಡುತ್ತಾರೆ. ಎಷ್ಟೇ ಕಷ್ಟವಾದರು ದೇವರ ಕೋಣೆ ಬಿಟ್ಟು ಹೊರಗೆ ಬರಲ್ಲ. 4-5 ಗಂಟೆ ದೇವರ ಧ್ಯಾನ ಮಾಡುತ್ತಾರೆ ಧ್ಯಾನ ಹಬ್ಬದ ವೇಳೆ ಒಂದು ತೊಟ್ಟು ನೀರು ಕೂಡ ಕುಡಿಯಲ್ಲ. ಅಂತಹ ಕಷ್ಟ ಕಾಲದಲ್ಲಿಯೂ ಅವರು ಉಳಿದಿದ್ರೆ ಅದು ದೈವಭಕ್ತಿಯಿಂದ ಮಾತ್ರ. ಅಂದು ಚಿಕಿತ್ಸೆಗಿಂತ ಹೆಚ್ಚಾಗಿ ದೇವರು ಅವರು ಉಳಿಸಿದ್ದಾರೆ ಎಂದಿದ್ದಾರೆ.ಅಂದು ನಾವು ಪಟ್ಟ ಕಷ್ಟ ಯಾವ ಶತ್ರುವಿಗೂ ಬೇಡ. ಹೆತ್ತ ತಾಯಿಯನ್ನು ಕಳೆದುಕೊಂಡ ಮೇಲೆ ಎಷ್ಟು ಸಂಪಾಸಿದರೆ ಏನು ಪ್ರಯೋಜನ ..ನಮ್ಮ ತಾಯಿ ಯಾರಿಗೂ ನೋವು ಮಾಡಿದವರಲ್ಲ. ರಾಜಕೀಯದ ಬಗ್ಗೆ ಅವರಿಗೆ ಗೊತ್ತಿಲ್ಲ..
ಹೀಗೆ ಮಾತು ಮುಂದುವರಿಸುತ್ತಾ, ”ಅವತ್ತಿನ ಸಂದರ್ಭ ಯಾವ ಶತ್ರುವಿಗೂ ಬರಬಾರದು ಅಂದ್ಕೊತ್ತೀವಿ. ಯಾಕಂದ್ರೆ ತಾಯಿ ಎಂಬ ವಸ್ತು ಕಳೆದುಕೊಂಡ್ರು ಬಿಟ್ರೆ ಏನು ಸಂಪಾದನೆ ಮಾಡಿ ಬದುಕಿದ್ದೇನು ಉಪಯೋಗ. ಅಂತಹ ಘಟನೆ ಆಗಬಾರದಿತ್ತು. ಅದರಲ್ಲೂ ಸಹ ಜೀವನದಲ್ಲಿ ಅವರು ಯಾರಿಗೂ ನೋವು ಕೊಟ್ಟವರಲ್ಲ. ರಾಜಕೀಯದಲ್ಲಿ ಇನ್ವಾಲ್ ಆದವರಲ್ಲ. ಮನೆಮುಂದೆ ಬಂದವರ ಕಷ್ಟಕ್ಕೆ ಸ್ಪಂದಿಸಿ ಅವರ ಕಷ್ಟದಲ್ಲಿ ಭಾಗಿಯಾಗುತ್ತಿದ್ದರು. ಹಳ್ಳಿಯಿಂದ ಪಟ್ಟಣಕ್ಕೆ ಓದಲಿಕ್ಕೆ ಬಂದವರಿಗೆ ವಾರದನ್ನ ಎಂದು ಊಟ ಕೊಡುತ್ತಿದ್ದರು.ಅಂತಹವರ ಜೀವನದಲ್ಲಿ ಈ ರೀತಿಯ ಘಟನೆ ಆಗಬಾರದಿತ್ತು ಎಂದು ಹೇಳಿದ್ದಾರೆ.