Puneeth Rajkumar: ಅಂದುಕೊಂಡಂತೆ ಆಗಿದ್ದರೆ ಅಣ್ಣಾವ್ರ ಈ ಸಿನೆಮಾವನ್ನು ರಿಮೇಕ್ ಮಾಡಿ ನಟಿಸುತ್ತಿದ್ದರು ಅಪ್ಪು.

Advertisement
ಡಾ..ರಾಜ್‌ಕುಮಾರ್(Dr Rajkumar) ಕನ್ನಡದ ಮೇರು ನಟ, ನಟಸಾರ್ವಭೌಮ ಎಂದು ಬಿರುದು ಹೊಂದಿದ್ದ ರಾಜ್ ಕುಮಾರ್ ಯಾವ ಪಾತ್ರವನ್ನಾದರೂ ಅದ್ಬುತವಾಗಿ ಮಾಡುತ್ತಿದ್ದರು. ಡಾ..ರಾಜ್‌ಕುಮಾರ್ ಮಾಡಿದ ಪಾತ್ರವನ್ನು ಅನುಕರಣೆ ಮಾಡುವುದಾಗಲಿ ಅದನ್ನು ರೇಮೇಕ್(Remake) ಮಾಡುವುದಾಗಿಲಿ ನಿಜವಾಗಲೂ ಕಷ್ಟಸಾಧ್ಯ . ಏಕೆಂದರೆ ರಾಜ್ ಕುಮಾರ್ ರೀತಿ ನಟನೆ ಮಾಡುವುದು ಯಾವುದೇ ಮೇರು ಕಲಾವಿದನಿಂದಲೂ ಸಾಧ್ಯವಿಲ್ಲ.
ಆದರೆ ಡಾ..ರಾಜ್ ಕುಮಾರ್ ರವರು ಅಭಿನಯಿಸಿದ್ದ ಬೇಡರ ಕಣ್ಣಪ್ಪ ಸಿನೆಮಾವನ್ನು ಶಿವಣ್ಣ ರೀಮೇಕ್ ಮಾಡಿದ್ದರು, ರಾಜ್ ಕುಮಾರ್ ರಂತೆಯೇ ಶಿವಣ್ಣನ ಅಭಿಯವನ್ನು ಕೂಡಾ ರಾಜ್ಯದ ಜನರು ಮೆಚ್ಚಿಕೊಂಡರು.ಹೀಗಾಗಿಯೇ ರಾಜಣ್ಣ ನ ಬ್ಲಾಕ್ ಫಾಸ್ಟರ್(Block Buster) ಸಿನೆಮಾವಾದ ಸಂಪತ್ತಿಗೆ ಸವಾಲ್ ಸಿನೆಮಾವನ್ನು ಕೂಡಾ ರೀಮೇಕ್ ಮಾಡುವ ಎಂಬ ಆಸೆ ಉದಯ್ ಶಂಕರ್ ಅವರಿಗೆ ಹುಟ್ಟಿತಂತೆ.ಈ ಕುರಿತಂತೆ ಶಿವರಾಜ್ ಕುಮಾರ್(ShivaRajkumar) ಅವರ ನಟನೆಯಲ್ಲಿ ಈ ಸಿನೆಮಾವನ್ನು ರಿಮೇಕ್ ಮಾಡೋಣ ಎಂದಾಗ ಡಾ.. ರಾಜ್ ಕುಮಾರ್ ಅವರು ನನ್ನ ಪಾತ್ರವನ್ನು ನನ್ನ ಮಗ ಮಾಡಬಹುದು ಆದರೆ ವಜ್ರಮುನಿ ಮಾಡಿರುವಂತಹ ಪಾತ್ರವನ್ನು ಯಾರು ಮಾಡುತ್ತಾರೆ ಎಂದರಂತೆ .
ಅದು ಉದಯ್ ಶಂಕರ್(Uday Shankar) ಅವರಿಗೆ ಸರಿ ಎನಿಸಿ ಅವರು ಸುಮನಾಗಿಬಿಟ್ಟರಂತೆ. ಸಂಪತ್ತಿಗೆ ಸವಾಲ್ ಸಿನಿಮಾ ರೀಮೇಕ್ ಮಾಡುವುದು ಬೇಡ ಎಂದು ಅಣ್ಣವರು ಹೇಳಿದ್ದರಂತೆ.ರಾಜ್ ಕುಮಾರ್ ಅವರ ನಸಿನೆಮಾವನ್ನಿ ರಿಮೇಕ್ ಮಾಡಿದರೆ ಈಗಲೂ ಕೂಡಾ ಸೂಪರ್ ಹಿಟ್ ಆಗಿ ಹೊರಹೊಮ್ಮುತ್ತದೆ. ಏಕೆಂದರೆ ಅವರ ಕಥ ಹಂದರವೇ ಬಹಳ ಸುಂದರವಾಗಿರುತ್ತದೆ.ಮತ್ತೊಂದು ಪ್ರಮುಖವಾದ ವಿಷಯವೆಂದರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Puneeth Rajkumar) ಅವರಿಗೆ ತಂದೆಯ ಆ ಒಂದು ಸಿನೆಮಾವನ್ನು ರೀಮೇಕ್ ಮಾಡಿ ನಟಿಸಬೇಕೆಂದು ತುಂಬಾ ಆಸೆ ಇತ್ತಂತೆ.
ಹೌದು ಅಣ್ಣಾವ್ರ ಹಾಗೂ ಜೂಲಿ ಲಕ್ಷ್ಮಿ(Juli Lakshmi) ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದಿದ “ನಾ ನಿನ್ನ ಮರೆಯಲಾರೆ”(Na Ninna Mareyalare) ಸಿನಿಮಾ ವನ್ನು ರೀಮೇಕ್ ಮಾಡಬೇಕೆಂಬುದು ಅಪ್ಪುವಿನ ಆಸೆಯಾಗಿತ್ತು. ಕನ್ನಡ ಸಿನಿಮಾರಂಗದ ಅತ್ಯದ್ಭುತ ಲವ್ ಸ್ಟೋರಿಯಲ್ಲಿ ನಾ ನಿನ್ನ ಮರೆಯಲಾರೆ ಕೂಡಾ ಒಂದು. ಆದರೆ ಈ ಸಿನೆಮಾ ಕನಸು ಈಡೇರುವ ಮೊದಲೇ ವಿಧಿ ಅಪ್ಪುವನ್ನು ನಮ್ಮಿಂದ ದೂರ ಮಾಡಿತು. ಪುನೀತ್ ರಾಜಕುಮಾರ್ ಅವರ ಕನಸು ಕನಸಾಗಿಯೇ ಉಳಿಯಿತು. ಪುನೀತ್ ರಾಜಕುಮಾರ್ ಅವರ ವರ್ಷನ್ ನಲ್ಲಿ ನಾ ನಿನ್ನ ಮರೆಯಲಾರೆ ಸಿನೆಮಾವನ್ನು ನೋಡುವ ನಮ್ಮ ಭಾಗ್ಯ ಕೂಡಾ ನಮ್ಮಿಂದ ದೂರವಾಯಿತು.