Karnataka Times
Trending Stories, Viral News, Gossips & Everything in Kannada

Dr Vishnuvardhan: ಸಾಹಸಸಿಂಹ ವಿಷ್ಣುವರ್ಧನ್‌ ಈ ಒಂದು ವಿಚಾರಕ್ಕೆ ಮಾತ್ರ ಬಹಳ ಭಯಪಟ್ಟಿದ್ದರು.

ಅಭಿಮಾನಿಗಳ ಪ್ರೀತಿಯ ‘ಯಜಮಾನ’(Yajamana). ಸಾಹಸ ಸಿಂಹ, ಅಭಿನಯ ಭಾರ್ಗವ, ಕೋಟಿಗೊಬ್ಬ, ಕಲಾದೈವ, ಮೈಸೂರು ರತ್ನ ಎಂಬ ಬಿರುದುಗಳಿಂದ ಜನಪ್ರಿಯತೆ ಪಡೆದವರು ಡಾ.ವಿಷ್ಣುವರ್ಧನ್(Vishnuvardhan). ಪ್ರೀತಿಯ ಅಭಿಮಾನಿಗಳಿಂದ ‘ಹೃದಯವಂತ’ ಅಂತಲೇ ಕರೆಯಿಸಿಕೊಂಡವರು ನಮ್ಮ ದಾದ.ಅಭಿನಯದಲ್ಲಿ ವಿಷ್ಣುವರ್ಧನ್ ಅವರನ್ನು ಮೀರಿಸುವರಿಲ್ಲ, ತೆರೆಯ ಮೇಲೆ ಸಕ್ಕತ್ ಖಡಕ್ ಆಗಿ ಮಾಸ್ ಆಗಿ ಕಾಣಿಸಿಕೊಳ್ಳುತ್ತಿದ್ದ ಅವರು ನಿಜ ಜೀವನದಲ್ಲಿ ಬಹಳ ಸೂಕ್ಷ ವ್ಯಕ್ತಿಯಾಗಿದ್ದರು.

Advertisement

ಡಾಕ್ಟರ್ ವಿಷ್ಣುವರ್ಧನ್ ಅವರನ್ನು ಅರ್ಥ ಮಾಡಿಕೊಂಡವರು ಬಹಳ ಕಮ್ಮಿ. ಅವರು ಇತರರೊಂದಿಗೆ ಬೆರೆಯಲು ತುಂಬಾ ಸಮಯ ತೆಗೆದುಕೊಳ್ಳುತ್ತಿದ್ದರಂತೆ. ಹಾಗಂತ ಯಾರನ್ನು ದೂರ ಮಾಡುತ್ತಿರಲಿಲ್ಲ. ಪ್ರತಿಯೊಬ್ಬರನ್ನು ಬಹಳ ವಿಶ್ವಾಸದಿಂದ ಮಾತನಾಡಿಸುತ್ತಿದ್ದರಂತೆ.ಅಭಿಮಾನಿಗಳೆಂದರೆ ಸಾಹಸಸಿಂಹನಿಗೆ ಎಲ್ಲಿಲ್ಲದಂತಹ ಪ್ರೀತಿ ಅಭಿಮಾನವಿತ್ತು. ತಮ್ಮ ಬದುಕಿನಲ್ಲಿ ಏನೇ ಆದರೂ ತನ್ನನ್ನು ಕೈ ಹಿಡಿದ್ದದ್ದು ಅಭಿಮಾನಿಗಳು ಎಂದು ಅವರು ಯಾವಾಗಲೂ ಹೇಳುತ್ತಿದ್ದರು.

Advertisement

ಇನ್ನು ಯಶಸ್ಸನ್ನು ಕಂಡು ಸಂಭ್ರಮಿಸುವುದು ಹಾಗೂ ಸಿನೆಮಾ ಫ್ಲಾಪ್‌(Flop) ಆದಾಗ ಕುಗ್ಗುವುದನ್ನು ವಿಷ್ಣು ಅಪ್ಪಾಜಿ ಎಂದಿಗೂ ಮಾಡುತ್ತಲೇ ಇರಲಿಲ್ಲ. ಎರಡನ್ನೂ ಕೂಡಾ ಸಮನಾಗಿ ನೋಡಬೇಂಕೆಂದು ಅವರು ಹೇಳುತ್ತಿದ್ದರು. ಯಶಸ್ಸು ಎನ್ನುವುದು ಎಲ್ಲರಿಗೂ ಸಾಮಾನ್ಯ. ಕೆಲವೊಮ್ಮೆ ಸಿಕ್ಕಬಹುದು ಕೆಲವೊಮ್ಮೆ ಸಿಗದೇ ಹೋಗಬಹುದು ಎಂದು ಹೇಳುತ್ತಿದ್ದರು.ವಿಮರ್ಶಗಳು ಏನೇ ಬಂದರೂ ಕೂಡ ನಾನು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಯಾಕೆಂದರೆ ವಿಮರ್ಶೆ ಕೆಟ್ಟದಾಗಿ ಬಂದರು ಸಿನಿಮಾ ಗೆದ್ದಂತಹ ಉದಾಹರಣೆಗಳು ಸಾಕಷ್ಟು ಇವೆ ಎಂದು ನೇರವಾಗಿ ಹೇಳುತ್ತಿದ್ದರು.

Advertisement

ಇನ್ನು ಸಾಕಷ್ಟು ಜನರು ವಿಷ್ಣುವರ್ಧನ್ ಅವರನ್ನು “ಮೂಡಿ” ಎಂದು ಕೂಡಾ ಕರೆಯುತ್ತಿದ್ದರಂತೆ. ಯಾಕೆಂದರೆ ಇವರು ಒಂದು ಕ್ಷಣದಲ್ಲಿ ಯೋಚನೆ ಮಾಡಿದ್ದನು ಮತ್ತೊಂದು ಕ್ಷಣ ಬದಲಿಸುತ್ತಿದ್ದರಂತೆ.ಒಟ್ಟಾರೆ ವಿಷ್ಣುವರ್ಧನ್ ಅವರ ಮನೋಭಾವವನ್ನು ಹಾಗೂ ಸ್ವಭಾವವನ್ನು ಯಾರಿಂದಲೂ ಬಹುಬೇಗ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.ಇಂತಹ ವಿಷ್ಣುವರ್ಧನ್ ವಿಮಾನದಲ್ಲಿ ಪ್ರಯಾಣಿಸುವುದು ಎಂದರೆ ಸಕ್ಕತ್‌ ಭಯ ಕಾಡುತ್ತಿತ್ತಂತೆ. . ಇದನ್ನು ಸ್ವತಃ ವಿಷ್ಣುವರ್ಧನ್ ಅವರೇ ಹಲವಾರು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

Advertisement

ಇನ್ನು ವಿಷ್ಣುವರ್ಧನ್ ಅವರನ್ನು ವಿಮಾನದಲ್ಲಿ ಕರೆದುಕೊಂಡು ಹೋಗುವುದು ಸಿನೆಮಾ ನಿರ್ದೇಶಕರಿಗರ ಸಾಹಸವೇ ಆಗಿತ್ತು.ವಿಮಾನ ಪ್ರಯಣಕ್ಕೆ ವಿಷ್ಣು ಅವರನ್ನು ಒಪ್ಪಿಸಲು ಅವರು ಹರಸಾಹಸವನ್ನೇ ಮಾಡಬೇಕಿತ್ತಂತೆ. ಹೀಗಾಗಿ ವಿಷ್ಣುವರ್ಧನ್ ಅವರ ಅನೇಕ ಸಿನಿಮಾಗಳು ವಿದೇಶಗಳಲ್ಲಿ ಚಿತ್ರೀಕರಣವಾಗಿಲ್ಲ. ಅವರಿಗೆ ವಿದೇಶದ ಚಿತ್ರೀಕರಣಕ್ಕಿಂತ ಭಾರತದಲ್ಲಿ ಶೂಟಿಂಗ್‌ ಮಾಡುವುದು ಬಹಳ ಇಷ್ಟವಾಗುತ್ತಿತ್ತಂತೆ.

Leave A Reply

Your email address will not be published.