Ravindhar Mahalakshmi: ವೈರಲ್ ಆಗಿದ್ದ ರವಿಂದರ್ ಹಾಗೂ ಮಹಾಲಕ್ಷ್ಮಿ ಬದುಕಲ್ಲಿ ಮಹತ್ವದ ತಿರುವು, ಇಲ್ಲಿದೆ ಹೇಳಿಕೆ
ರವೀಂದರ್ (Raveendar)ಅವರನ್ನು ಮದುವೆಯಾಗುವ (Marriage) ಮೊದಲು ಮಹಾಲಕ್ಷ್ಮಿ (Mahalakshmi) ಯವರು ಅನಿಲ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದರು. ಆದರೆ ಮಾಜಿ ಪತಿ ಅನಿಲ್ (Anil) ತನಗೆ ಹೊಡೆದು ಚಿತ್ರಹಿಂಸೆ ನೀಡಿದ್ದಾನೆ ಎಂದು ಮಹಾಲಕ್ಷ್ಮಿ ಆರೋಪಿಸಿದ್ದು ಅನಿಲ್ ಮಹಾಲಕ್ಷ್ಮಿ ದಂಪತಿಗೆ ಓರ್ವ ಮಗ (Son) ಕೂಡ ಇದ್ದಾನೆ. ತನ್ನ ಮೊದಲ ಪತಿ ಅನಿಲ್ಗೆ ಅಕ್ರಮ ಸಂಬಂಧವಿದ್ದು (Relationship) ತನಗೆ ಕಿರುಕುಳ ನೀಡ್ತಿದ್ದಾರೆ ಎಂದು ಮಹಾಲಕ್ಷ್ಮಿ ಆರೋಪಿಸಿದ್ದರು. 2019ರಲ್ಲಿ ನಟಿ ಮೊದಲ ಮದುವೆಯನ್ನು ಮುರಿದುಕೊಳ್ಳಲು ಇದೇ ಕಾರಣವಾಗಿದ್ದು ಮತ್ತೊಂದೆಡೆ ನಟ ಈಶ್ವರ್ ರಘುನಾಥ್ (Eshwarr Raghnath) ಜೊತೆ ಮಹಾಲಕ್ಷ್ಮಿಗೆ ಅನೈತಿಕ ಸಂಬಂಧವಿದೆ ಎಂದು ಅನಿಲ್ ಆರೋಪಿಸಿದರು. ಆದರೆ ಮಹಾಲಕ್ಷ್ಮಿ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದು ನಂತರ ವಿಚ್ಛೇದನಕ್ಕೆ (Divorce) ಅರ್ಜಿ ಸಲ್ಲಿಸಿದರು.
ನಿಮ್ಮ ಜೊತೆ ಇರಲು ನನಗೆ ಯಾವುದೇ ತೊಂದರೆ ಇಲ್ಲ. ನೀವು ಕಳೆದ 10 ವರ್ಷಗಳಿಂದ ನನ್ನೊಂದಿಗಿದ್ದು ಈ ಎಲ್ಲ ಸಮಸ್ಯೆಗಳನ್ನು ಬದಿಗಿಟ್ಟು ಮತ್ತೆ ನೆಮ್ಮದಿಯಿಂದ ಬಾಳಬೇಕು ಎಂದು ಅನಿಲ್ ಹೇಳಿದರು. ಆದರೆ ನಟಿ ಮೊದಲು ತನ್ನ ಗಂಡನ ಮಾತನ್ನು ಕೇಳದೇ ಮನೆಬಿಟ್ಟು ಹೋಗಿದ್ದು
ಇಷ್ಟೆಲ್ಲಾ ವಿವಾದಗಳ ನಡುವೆಯೂ ರವೀಂದರ್ ರವರನ್ನು ಮಹಾಲಕ್ಷ್ಮಿ ಮದುವೆಯಾದರು. ನಟಿ ತನ್ನ 10 ವರ್ಷಗಳ ಸುದೀರ್ಘ ದಾಂಪತ್ಯ ಕೊನೆಗೊಳಿದರಯ. ವಿಚ್ಛೇದನ ಪಡೆದ ಬಳಿಕ ಮಹಾಲಕ್ಷ್ಮಿ ರವೀಂದರ್ ಜೊತೆ ಪ್ರೀತಿಯಲ್ಲಿ ಬಿದ್ದರು. ಆದರೆ ಇದೀಗ ಮಹಾಲಕ್ಷ್ಮಿ-ರವೀಂದರ್ ಜೋಡಿಗೆ ಏನಾಯ್ತು? ಎಂದು ಪ್ರಶ್ನೆ ಮೂಡಿದ್ದು ನೋವುಗಳಿಲ್ಲದೆ ಜೀವನವಿಲ್ಲ ಅಂತಿದ್ದಾರೆ ರವೀಂದರ್..
ನಟಿ ಮಹಾಲಕ್ಷ್ಮಿ ರವರುಪತಿಯ ಜೊತೆಗಿನ ಫೋಟೋಗಳನ್ನು ಹೆಚ್ಚಾಗಿ ಹಂಚಿಕೊಳುತ್ತಾರೆ. ಹೌದು ಪ್ರೀತಿ ವಿಚಾರದಲ್ಲೂ ಮಹಾಲಕ್ಷ್ಮಿ ಅನೇಕ ಬಾರಿ ಸಾಮಾಜಿಕ ಜಾಲತಾಣದಲ್ಲಿ ಪತಿಯನ್ನು ಕೊಂಡಾಡಿದ್ದಾರೆ. ಇದೀಗ ಪತಿ ರವೀಂದರ್ ಪ್ರೀತಿಯ ಪತ್ನಿ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ?
ನಟಿ ಮಹಾಲಕ್ಷ್ಮಿ ನನ್ನ ಮೂರ್ಖತನವನ್ನು ಎಂದಿಗೂ ಒಪ್ಪಿಕೊಳ್ಳಲಿಲ್ಲ.ಹೌದು ಆದರೆ ಪ್ರೀತಿ ಏನನ್ನಾದ್ರೂ ಬದಲಾಯಿಸಬಲ್ಲದು ಎಂದು ಸಾಬೀತುಪಡಿಸಿದ್ದಾಳೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇನ್ಜು ರವೀಂದರ್ ಚಂದ್ರಶೇಖರನ್ ಅವರು ತಮ್ಮ ಪತ್ನಿ ಮಹಾಲಕ್ಷ್ಮಿ ಕುರಿತು ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದುನ ಮುದ್ದಿನ ಮಡದಿಯನ್ನು ರವೀಂದರ್ ಕೊಂಡಾಡಿದ್ದಾರೆ. ನನ್ನ ಜೀವನಕ್ಕೆ ಬಂದು ಬಾಳು ಬೆಳಗಿದಳು ಎಂದು ಬರೆದುಕೊಂಡಿದ್ದಾರೆ.
ಮಹಾಲಕ್ಷ್ಮಿ ರವೀಂದರ್ ದಂಪತಿ ತಮ್ಮ ಮದುವೆಯ ನಂತರ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ವೈಯಕ್ತಿಕ ವಿಚಾರಗಳನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ತಾರೆ. ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಇನ್ಜು ಈ ಸಂದರ್ಭದಲ್ಲಿ ರವೀಂದರ್ ಅವರು ಇತ್ತೀಚೆಗೆ ದೇವಸ್ಥಾನಕ್ಕೆ ಭೇಟಿ ನೀಡಿದ ಫೋಟೋವನ್ನು ಹಂಚಿಕೊಂಡಿದ್ದಾರೆ. ಹೌದು ನೋವುಗಳಿಲ್ಲದ ಜೀವನವಿಲ್ಲ ಹೊಸ ದಾರಿಯಿಲ್ಲದೆ ಜೀವನ ಸಾಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
ಅವಳು ನನ್ನ ಮೂರ್ಖತನವನ್ನು ಎಂದಿಗೂ ಒಪ್ಪಿಕೊಳ್ಳಲಿಲ್ಲ ಆದರೆ ಪ್ರೀತಿಯು ಏನನ್ನಾದರೂ ಬದಲಾಯಿಸಬಲ್ಲದು ಎಂದು ಸಾಬೀತುಪಡಿಸಿದ್ದು ನಾನು ಸಂವೇದನಾಶೀಲನಾಗಿರಲು ಪ್ರಯತ್ನಿಸುತ್ತೇನೆ ಎಂದು ರವೀಂದರ್ ಬರೆದಿದ್ದಾರೆ.