Karnataka Times
Trending Stories, Viral News, Gossips & Everything in Kannada

Anushka Shetty: ಈ ಕನ್ನಡಿಗನೇ ನನ್ನ ಮೊದಲ ಕ್ರಶ್ ಎಂದ ಅನುಷ್ಕಾ ಶೆಟ್ಟಿ

Advertisement

ಭಾರತದ ಸೂಪರ್ ಹಿಟ್ ಸಿನಿಮಾ ಬಾಹುಬಲಿಯ (Bahubali) ದೇವಸೇನಾ (Devasena) ಪಾತ್ರ ಮಾಡಿದ ಅನುಷ್ಕಾ ಶೆಟ್ಟಿ (Anushka Shetty) ದಕ್ಷಿಣದ ಪ್ರಸಿದ್ಧ ನಟಿ ಎನ್ನಬಹುದು. ಇನ್ನು ಬಹುಭಾಷಾ ನಟಿಗೆ ಈಗಾಗಲೇ 41 ವರುಷವಾಗಿದೆ. ನಟಿ ಖ್ಯಾತ ನಟ ಪ್ರಭಾಸ್ (Prabhas) ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತುಗಳು ಬಹಳ ವರುಷಗಳಿಂದ ಕೇಳಿ ಬರುತ್ತಿವೆ. ಇನ್ನು ಇಬ್ಬರೂ ಕೂಡ ಪರಸ್ಪರ ಆತ್ಮೀಯ ಸ್ನೇಹಿತರಾಗಿದ್ದು (Friends) ಇಬ್ಬರೂ ಇನ್ನೂ ಮದುವೆಯಾಗಿಲ್ಲ.

ಆದರೆ ಅನುಷ್ಕಾ ಶೆಟ್ಟಿಯ ಕ್ರಶ್ (Crush) ಪ್ರಭಾಸ್ ಅಲ್ಲ ಖ್ಯಾತ ಕ್ರಿಕೆಟಿಗ (Cricketer) ಎಂಬುದು ನಿಮಗೆ ಗೊತ್ತಾ? ಈ ವಿಚಾರವನ್ನು ಅವರೇ ಇದೀಗ ರಿವೀಲ್ ಮಾಡಿದ್ದಾರೆ. ಹೌದು ಅನುಷ್ಕಾ ಶೆಟ್ಟಿಯವರು ಸಂದರ್ಶನವೊಂದರಲ್ಲಿ (Interview) ತನಗೆ ಕ್ರಿಕೆಟಿಗನ ಮೇಲೆ ಕ್ರಶ್ ಇದೆ ಎಂದು ಬಹಿರಂಗಪಡಿಸಿದ್ದು ಹೀಗಿರುವಾಗ ಬಾಹುಬಲಿ ನಟಿಗೆ ಯಾರ ಮೇಲೆ ಮನಸಾಗಿದೆ ಎಂದು ತಿಳಿಯಲು ಅವರ ಅಭಿಮಾನಿಗಳಲ್ಲೂ ಕೂಡ ಕುತೂಹಲ ಹೆಚ್ಚಾಗಿದೆ ಎನ್ನಬಹುದು.

ನಟಿಗೆ ಯಾರ ಮೇಲೆ ಕ್ರಶ್ ಆಗಿದೆ ಗೊತ್ತೇ?

ಅವರು ಸಿಕ್ಕಿದರೆ ಖಂಡಿತ ಮದುವೆಯಾಗುತ್ತಾರಂತೆ. ಹೌದು ನಟಿ ಇದನ್ನು ರಿವೀಲ್ ಮಾಡಿದ್ದು ಇದೀಗ ಈ ವಿಚಾರ ಸುದ್ದಿಯಾಗಿದೆ. ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ (MS Dhoni) ಅಥವಾ ವಿರಾಟ್ ಕೊಹ್ಲಿಯನ್ನು (Virat Kohli) ಅನುಷ್ಕಾ ತನ್ನ ಕ್ರಶ್ ಎಂದು ಪರಿಗಣಿಸುತ್ತಾರೆ ಎಂದು ನೀವು ಯೋಚಿಸುತ್ತಿದ್ದರೆ ಅದು ಖಂಡಿತ ತಪ್ಪು. ವಾಸ್ತವವಾಗಿ ಅವರು ಬೇರೆ ಯಾರೂ ಅಲ್ಲ ನಮ್ಮ ಭಾರತೀಯ ಕ್ರಿಕೆಟ್ ತಂಡದಲ್ಲಿದ್ದ ಹಾಗೂ ಈ ಕೋಚ್ ಆಗಿರುವ ರಾಹುಲ್ ದ್ರಾವಿಡ್ (Rahul Dravid) ಅವರು. ರಾಹುಲ್ ದ್ರಾವಿಡ್ ಅವರು ಅನುಷ್ಕಾ ಶೆಟ್ಟಿ ಅವರ ಕ್ರಶ್ ಅಂತೆ.

ಹೌದು ರಾಹುಲ್ ದ್ರಾವಿಡ್ ನನ್ನ ನೆಚ್ಚಿನ ಕ್ರಿಕೆಟಿಗ. ನಾನು ಬೆಳೆಯುತ್ತಿರುವಾಗಿನಿಂದ ಅವರು ನನ್ನ ಕ್ರಶ್. ಒಂದು ಕಾಲದಲ್ಲಿ ನಾನು ಕೂಡ ಅವರ ಮೇಲೆ ಪ್ರೀತಿಯಲ್ಲಿ ಬಿದ್ದಿದ್ದೆ ಎಂದಿದ್ದಾರೆ. ಅಂದಹಾಗೆ ಕ್ರಿಕೆಟಿಗನೊಬ್ಬನ ಮೇಲೆ ನಟಿಗೆ ಕ್ರಶ್ ಆಗುತ್ತಿರುವುದು ಇದೇ ಮೊದಲಲ್ಲ. ಅನುಷ್ಕಾ ಮುಂಚೆಯೇ ಅನೇಕ ನಟಿಯರು ಸುಂದರ ಕ್ರಿಕೆಟರ್ಸ್ ಬಗ್ಗೆ ತಮ್ಮ ಒಲವು ವ್ಯಕ್ತಪಡಿಸಿದ್ದರು. ಇನ್ನು ಅನುಷ್ಕಾ ಹಾಗೂ ಪ್ರಭಾಸ್ ಬಾಹುಬಲಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಾಗಿನಿಂದ ಅವರ ಡೇಟಿಂಗ್ ವದಂತಿಗಳು ಹೆಚ್ಚಾಗಿವೆ. ಹೌದು ಆದರೆ ಇಬ್ಬರೂ ಸ್ಟಾರ್‌ಗಳು ತಾವು ಒಳ್ಳೆಯ ಸ್ನೇಹಿತರು ಎಂದು ಸ್ಪಷ್ಟಪಡಿಸಿದ್ದು ಸದ್ಯ ಅನುಷ್ಕಾ ಶರ್ಮಾ ವಿವಾಹದ ಬಗ್ಗೆ ಸಾಕಷ್ಟು ಕುತೂಹಲ ಇದೆ. ಅವರು ಯಾಗಾಗ ಯಾರನ್ನು ಮದುವೆಯಾಗುತ್ತಾರೆ ಎಂಬುದು ಬಹಳಷ್ಟು ಅಭಿಮಾನಿಗಳು ಕಾಯುತ್ತಿದ್ದಾರೆ.

Leave A Reply

Your email address will not be published.