ತೆಲುಗು (Telugu) ಚಿತ್ರರಂಗದ ಕ್ಯೂಟ್ ಕಪಲ್ ಗಳಾಗಿದ್ದ ನಾಗಚೈತನ್ಯ (Naga Chaitanya) ಹಾಗೂ ಸಮಂತಾ (Samanta) ಇದೀಗ ಬೇರೆ ಬೇರೆಯಾಗಿದ್ದಾರೆ. ಈ ಹಿಂದೆ ಈ ಜೋಡಿಗಳು ತೆರೆಯ ಮೇಲೆ ಸಹ ಸಾಕಷ್ಟು ಹಿಟ್ ಚಿತ್ರಗಳನ್ನು (Hit Movies) ನೀಡಿ ಜನರ ಪ್ರೀತಿಯನ್ನು ಗಳಿಸಿದರು. ಅಷ್ಟು ಮಾತ್ರವಲ್ಲದೇ ಕೆಲ ದಿನಗಳ ಕಾಲ ನಾಗಚೈತನ್ಯ ಅವರ ಸಿನಿಮಾಗಳು ಅಷ್ಟಾಗಿ ಯಶಸ್ಸು (Success) ಕೂಡ ಕಾಣುತ್ತಿರಲಿಲ್ಲ. ಆದರೆ ಮಾತ್ರ ಸಮಂತಾ ಜೊತೆಗೆ ಮಾಡಿದ ಸಿನಿಮಾಗಳೆಲ್ಲಾ ಕೂಡ ಅತ್ಯುತ್ತಮ ಪ್ರದರ್ಶನ ಪಡೆದು ನಾಗಚೈತನ್ಯ ಅವರ ಕಂಬ್ಯಾಕ್ (Comeback) ಎಂದೇ ಹೆಸರು ಪಡೆದುಕೊಳ್ಳಿತಿತ್ತು ಎಂದರೆ ನೀವು ನಂಬಲೇಬೇಕು. ಈ ರೀತಿಯಾಗಿ ಹೀಗೆ ಸಮಂತಾ ಅವರು ನಾಗ್ ಅವರ ಬೆನ್ನೆಲುಬಾಗಿ ನಿಂತು ಪ್ರತಿ ಹಂತದಲ್ಲೂ ಕೂಡ ಇವರಿಗೆ ಸಾಥ್ ನೀಡುತ್ತಿದ್ದರು.
ಇನ್ನು ಈ ಹಿಂದೆ ಇವರಿಬ್ಬರ ವಿಚ್ಛೇದನಕ್ಕೂ (Divorce) ಮುಂಚೆ ನಾಗಚೈತನ್ಯ ಅವರನ್ನು ಹುಡುಕಿಕೊಂಡು ಒಂದು ವೆಬ್ ಸಿರೀಸ್ (Web Series)ಕಥೆ ಬಂದಿತ್ತು ಆದರೆ ಅದು ನೆಗಟಿವ್ ಶೇಡ್ ಆಗಿದ್ದರಿಂದ ನಾಗ್ ಅವರು ಈ ಕಥೆಯನ್ನು ತಿರಸ್ಕರಿಸಿದ್ದರು. ಆದರೆ ಮಾತ್ರ ಸಮಂತಾ ಅವರಿಗೆ ಕಥೆ ತುಂಬಾ ಇಷ್ಟ ಅದುದ್ದರಿಂದ ನಾಗ ಚೈತನ್ಯ ರವರನ್ನು ಸಮಂತಾ ಒಪ್ಪಿಸಿ ಸಹಿ ಮಾಡಿಸಿದ್ದರು. ಆದರೆ ನಂತರ ಇವರಿಬ್ಬರ ಸಂಬಂಧ ಹಲಸಿಸ ಕಾರಣ ನಾಗ ಚೈತನ್ಯ ಅವರು ಈ ವೆಬ್ ಸಿರೀಸ್ ವಿಚಾರದಲ್ಲಿ ಯಾವ ನಿರ್ಧಾರ ತೆಗೆದುಕೊಂಡಿರು ಗೊತ್ತಾ?
ನಟಿ ಸಮಂತಾ ಅವರ ಒತ್ತಾಯದ ಮೇಲೆ ದೊತ್ ಎಂಬ ವೆಬ್ ಸಿರೀಸ್ ಗೆ ಸಹಿ ಹಾಕಿದ್ದ ನಾಗ ಚೈತನ್ಯ ರವರು ನಂತರ ಇವರಿಬ್ಬರ ಮುನಿಸಿನ ಕಾರಣದಿಂದ ಈ ವೆಬ್ ಸಿರೀಸ್ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಅಭಿಮಾನಿಗಳು ಕಾಯುತ್ತ ಕುಳಿತಿದ್ದರು. ಸದ್ಯ ಕೆಲವು ಕಾರಣಗಳಿಂದ ದೂರ ಇಟ್ಟಿದ್ದ ಈ ದೂತ್ ವೆಬ್ ಸಿರೀಸ್ ಚಿತ್ರೀಕರಣ ಈಗಾಗಲೇ ಮುಗಿದಿದ್ದು ಈ ವೆಬ್ ಸಿರೀಸ್ ಅನ್ನು ಮನಂ ಚಿತ್ರದ ನಿರ್ದೇಶಕ ವಿಕ್ರಂ ಕೆ ಕುಮಾರ್ ನಿರ್ದೇಶನ ಮಾಡಿದ್ದಾರೆ. ಹೌದು ಅತಿ ಶೀಘ್ರದಲ್ಲಿ ಈ ದೊತ್ ವೆಬ್ ಸಿರೀಸ್ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ ಪಡೆದು ನಾಗ ಚೈತನ್ಯ ಅಭಿಮಾನಿಗಳಿಗೆ ಮನೋರಂಜನೆ ನೀಡಲಿದೆ ಎನ್ನಬಹುದು.
ಸದ್ಯ ಸೌತ್ ಬ್ಯೂಟಿ ಕ್ವೀನ್ ಸಮಂತಾ (ಇದೀಗ ಪಡ್ಡೆಹುಡುಗರ ನಿದ್ದೆಕಡಿಸುವ ಅವತಾರದಲ್ಲಿ ಹಾಟ್ ಫೋಟೋಶೂಟ್ ಮಾಡಿಸಿದ್ದಾರೆ. ಶಾಕುಂತಲಂ (Shakuntalam) ಸಿನಿಮಾ ಪ್ರಚಾರ ಕಾರ್ಯದ ಮಧ್ಯೆ ಸ್ಯಾಮ್ ನಯಾ ಲುಕ್ ಈಗ ಸದ್ದು ಮಾಡ್ತಿದೆ.ಮೈಯೋಸಿಟಿಸ್ ಕಾಯಿಲೆ ಬಳಲುತ್ತಿರುವ ನಟಿ ಸಮಂತಾಗೆ ಬ್ಯೂಟಿ ಮಾಸಿದೆ ಎಂದೆಲ್ಲಾ ಇತ್ತೀಚಿಗೆ ಕಿಡಿಗೇಡಿಗಳು ಕಾಮೆಂಟ್ ಮಾಡಿದ್ದರು. ಸದ್ಯ ನೆಗೆಟಿವ್ ಮಾತನಾಡುವವರಿಗೆ ಸಮಂತಾ ತನ್ನ ಹೊಸ ಫೋಟೋಶೂಟ್‌ನಿಂದ (Photoshoot) ತಿರುಗೇಟು ನೀಡಿದ್ದಾರೆ. ಮೊದಲಿನಂತೆ ಸೂಪರ್ ಕೂಲ್ ಆಗಿ ಕ್ಯಾಮೆರಾ ಕಣ್ಣಿಗೆ ಸಮಂತಾ ಪೋಸ್ ನೀಡಿದ್ದಾರೆ.
ಹೌದು ಮಾಡ್ರನ್ ಡ್ರೆಸ್‌ನಲ್ಲಿ ಸಮಂತಾ ಚೆಂದದೊಂದು ಫೋಟೋಶೂಟ್ ಮಾಡಿಸಿದ್ದು ಮಸ್ತ್ ಆಗಿ ಕ್ಯಾಮೆರಾಗೆ ಕಣ್ಣಿಗೆ ಪೋಸ್ ನೀಡಿದ್ದಾರೆ. ಬ್ಲ್ಯಾಕ್ ಆ್ಯಂಡ್ ವೈಟ್ ಶೇಡ್‌ನಲ್ಲಿರುವ ಫೋಟೋಗಳನ್ನ ನಟಿ ಹಂಚಿಕೊಂಡಿದ್ದಾರೆ.