Keerthy Suresh: ನಾನಿ ಜೊತೆ ವಿಚಿತ್ರ ಆಟ ಆಡಿದ ಕೀರ್ತಿ ಸುರೇಶ್, ಕ್ಯೂಟ್ ವಿಡಿಯೋ

Advertisement
ಕ್ಯೂಟ್ ಎಕ್ಸ್ಪ್ರೇಶನ್ ಮುದ್ದಾದ ಅಭಿನಯದ ಮೂಲಕ ನಟಿ ಕೀರ್ತಿ ಸುರೇಶ್ (Keerthy Suresh) ಅವರು ಇತ್ತೀಚೆಗೆ ಅಭಿನಯಿಸುತ್ತಿರುವುದು ಕೆಲವೇ ಸಿನೆಮಾವಾದರೂ ಅವರಿಗೆ ಅಭಿಮಾನಿಗಳು ಮಾತ್ರ ಅಪಾರ ಸಂಖ್ಯೆಯಲ್ಲಿದ್ದಾರೆ ಎನ್ನಬಹುದು. ಅದೆ ರೀತಿ ಇತ್ತೀಚೆಗೆ ಅವರು ನಾನಿ (Nani) ಅವರ ಜೊತೆ ಹೊಸ ಸಿನೆಮಾ ಮಾಡುತ್ತಿದ್ದು ಅದರ ಹಾಡಿನ ಶೂಟಿಂಗ್ ವೇಳೆ ನಡೆದ ಫನ್ನಿ ಇವೆಂಟ್ ಕಾರ್ಯಕ್ರಮದಲ್ಲಿ ವೈರಲ್ ಆದ ವೀಡಿಯೋ ಒಂದು ಈಗ ಸಿಕ್ಕಾಪಟ್ಟೆ ಫೇಮಸ್ ಆಗಿದೆ.
ಆಟದಲ್ಲಿ ವಿನ್:
ಖಾಸಗಿ ಯೂಟ್ಯೂಬ್ ಚಾನೆಲ್ ನವರು ಒಂದು ವೀಡಿಯೋವನ್ನು ಅಪ್ಲೋಡ್ ಮಾಡಿದ್ದು ಅದರಲ್ಲಿ ಕೀರ್ತಿ (Keerthy Suresh) ನಾನಿ (Nani), ರಾಣ (Rana) ಅವರಿಗೆ ಗೇಮ್ ಚಾಲೆಂಜ್ ನೀಡಿದ್ದರು. ಆಗ ಅದರಲ್ಲಿ ರಾಣ ಮತ್ತು ನಾನಿ ಗೇಮ್ ಆಡದೆ ಸೋಲುತ್ತಾರೆ. ಅಷ್ಟಕ್ಕೂ ಈ ಗೇಮ್ ಏನೆಂದರೆ ಒಂದು ಬಾಟಲಿಯ ಜ್ಯೂಸ್ ಅನ್ನು ಕೈಯ ಸಹಾಯವಿಲ್ಲದೆ ಕಂಪ್ಲೀಟ್ ಆಗಿ ಕುಡಿಯುವುದು. ಈ ಮೂಲಕ ಜ್ಯೂಸ್ ನ್ನು ಕುಡಿದು ಕೀರ್ತಿ ಚಾಲೆಂಜ್ ಮೀರಿಸಿದ್ದಾರೆ, ಈ ಮೂಲಕ ಶೂಟಿಂಗ್ ಸೆಟ್ಟಿನವರು ಹಾಗೂ ಉಳಿದವರು ಚಪ್ಪಾಳೆ ತಟ್ಟಿದ್ದಾರೆ.
ಒಟ್ಟಾರೆಯಾಗಿ ಕೀರ್ತಿ ಅವರು ಮುಂದಿನ ದಸರಾ (Dasara) ಸಿನೆಮಾಕ್ಕೆ ಫುಲ್ ಸೆಟ್ ಏರಲು ರೆಡಿಯಾಗಿದೆ, ಫ್ಯಾನ್ ಇಂಡಿಯಾ ಮಟ್ಟದಲ್ಲಿ ಕೀರ್ತಿ ಸುರೇಶ್ ಅವರಿಗೆ ಹಾಗೂ ನಾನಿ ಅವರಿಗೂ ಹೆಸರು ತಂದುಕೊಡಲಿದೆ ಎಂಬ ನಿರೀಕ್ಷೆ ಹೆಚ್ಚಾಗಿದೆ ಎನ್ನಬಹುದು. ಅದೇ ರೀತಿ ಕೀರ್ತಿ ಸುರೇಶ್ ಅವರಿಗೆ ಈಗ ಕೆಲವು ಸಿನೆಮಾ ಆಫರ್ ಬಂದಿದ್ದು ಸದ್ಯ ಅವರ ಗಮನವೆಲ್ಲ ದಸರಾ ಸಿನೆಮಾದಲ್ಲಿದೆ ಎನ್ನಬಹುದು. ಅಷ್ಟೆ ಅಲ್ಲದೆ ದಸರಾ ಸಿನಿಮಾದಲ್ಲಿ ತಮ್ಮೊಂದಿಗೆ ಕೆಲಸ ಮಾಡಿದ 130 ಜನರಿಗೆ ತಲಾ ಹತ್ತು ಗ್ರಾಂ ಚಿನ್ನದ ನಾಣ್ಯಗಳನ್ನು ಕೊಡುವ ಮೂಲಕ ಯುಗಾದಿ ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ, ಸಿನಿಮಾದ ಕೊನೆಯ ದಿನದ ಶೂಟಿಂಗ್ ನಲ್ಲಿ ಸೆಟ್ ನಲ್ಲಿದ್ದ ಅವರು ಒಳ್ಳೆಯ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು. ಈ ಕಾರಣಕ್ಕಾಗಿ ಎಲ್ಲರಿಗೂ ಚಿನ್ನದ ಉಡುಗೊರೆ ನೀಡಿದ್ದಾರೆ.