Jr NTR: ಇನ್ಮೇಲೆ ಯಾವುದೇ ಸಿನೆಮಾ ಮಾಡಲ್ಲ, ಜೂನಿಯರ್ NTR ಹೇಳಿದ್ದೇ ಬೇರೆ

Advertisement
ಆರ್ ಆರ್ ಆರ್ (RRR) ಸಿನಿಮಾದ ಬಳಿಕ ಜೂನಿಯರ್ ಎನ್ ಟಿ ಆರ್ (J NTR) ರವರ ಮುಂದಿನ ಸಿನಿಮಾ ಬಗ್ಗೆ ಅಭಿಮಾನಿಗಳು ಕಾತುರರಾಗಿದ್ದಾರೆ. ಆದರೆ ಒಂದು ವರ್ಷ ಕಾದರೂ ಸಿನಿಮಾ ಚಿತ್ರೀಕರಣದ (Film Shooting) ಬಗ್ಗೆ ಯಾವುದೇ ರೀತಿಯ ಅಪ್ಡೇಟ್ ಸಿಗದೇ ಇರುವ ಕಾರಣ ಸಹಜವಾಗಿ ಅವರ ಅಭಿಮಾನಿಗಳು (Fans) ಬೇಸರಗೊಂಡಿದ್ದಾರೆ. ಇನ್ಮು ಅಷ್ಟಕ್ಕೆ ಸುಮ್ಮನಾದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಈ ಬಗ್ಗೆ ಪ್ರಶ್ನೆ ಮಾಡುತ್ತಲೇ ಇದ್ದು ಪದೇ ಪದೇ ಪ್ರಶ್ನೆ ಎದುರಾಗುತ್ತಿದ್ದ ಕಾರಣ ಜೂ.ಎನ್ ಟಿ ಆರ್ ರವರು ಇದೀಗ ಸಿಟ್ಟಾಗಿದ್ದಾರೆ.
ಹೌದ ಇತ್ತೀಚಿಗಷ್ಟೆ ಪ್ರಿ ರಿಲೀಸ್ (Pre Release) ಈವೆಂಟ್ ಒಂದಕ್ಕೆ ಗೆಸ್ಟ್ ಆಗಿ ಎಂಟ್ರಿ ಕೊಟ್ಟಿದ್ದ ಜೂ.ಎನ್ ಟಿ ಆರ್ ರವರನ್ನು ಮತ್ತೆ ಇದೇ ಪ್ರಶ್ನೆ ಮಾಡಲಾಗಿದೆ. ಇನ್ನು ಇದರಿಂದಾಗಿ ಸಿಟ್ಟಾದ ಜೂ.ಎನ್ ಟಿ ಆರ್ ರವರು ನೀವು ಹೀಗೆ ನನಗೆ ಅಪ್‌ಡೇಟ್‌ಗಾಗಿ ಕೇಳುತ್ತಿದ್ರೆ ನಾನು ಸಿನಿಮಾ ಮಾಡುತ್ತಿಲ್ಲ ಎಂದು ಹೇಳುತ್ತೇನೆ. ನೀವು ಮತ್ತೆ ಮತ್ತೆ ಅದನ್ನೇ ಕೇಳಿದ್ರೆ ನಾನು ಸಿನಿಮಾ ಮಾಡುವುದನ್ನೇ ನಿಲ್ಲಿಸುತ್ತೇನೆ ಎಂದು ಬಹಳ ಗರಂ ಆದರು.
ಇನ್ನು ಮತ್ತೆ ಮಾತು ಮುಂದುವರೆಸಿದ ನಟ ಜೂ.ಎನ್ ಟಿ ಆರ್ ರವರು ನಾನು ಸಿನಿಮಾ ಮಾಡುವುದನ್ನು ನಿಲ್ಲಿಸಲ್ಲ ಎನ್ನುವುದು ನನಗೂ ಗೊತ್ತು ಹಾಗೆ ಆಗುವುದಕ್ಕೆ ನೀವು ಬಿಡುವುದೂ ಇಲ್ಲ. ಆದರೆ ಪದೇಪದೇ ಅಪ್ಡೇಟ್ ಕೇಳಬೇಡಿ. ಶೀಘ್ರದಲ್ಲೇ ಶೂಟಿಂಗ್ ಶುರುವಾಗುತ್ತದೆ ಎಂದು ಜೂ.ಎನ್ ಟಿ ಆರ್ ರವರು ಹೇಳಿದ್ದಾರೆ.
ಜೂನಿಯರ್ ಎನ್ಟಿಆರ್ ಅವರು ಕಳೆದ ಒಂದು ವರ್ಷದಿಂದ ಆರ್ಆರ್ಆರ್ ಯಶಸ್ಸನ್ನು ಎಂಜಾಯ್ ಮಾಡುತ್ತಿದ್ದು ಆರ್ ಆರ್ ಆರ್(RRR) ನಂತರ ಮತ್ತೆ ತೆರೆಮೇಲೆ ಬಂದಿಲ್ಲ. ಮುಂದಿನ ಸಿನಿಮಾಗಾಗಿ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಜೂ.ಎನ್ ಟಿ ಆರ್ 30ನೇ ಸಿನಿಮಾಗೆ ನಾಯಕಿ ಯಾರಾಗ್ತಾರೆ ಎನ್ನುವ ಕುತೂಹಲ ಕೂಡ ಹೆಚ್ಚಾಗಿತದ್ದು ಇತ್ತೀಚಿಗಷ್ಟೆ ನಾಯಕಿ ಆಯ್ಕೆ ಮಾಡುವ ಮೂಲಕ ಅಭಿಮಾನಿಗಳ ಕುತೂಹಲಕ್ಕೆ ಬ್ರೇಕ್ ಹಾಕಿದ್ದರು.
ಸದ್ಯ ಇದೀಗ ಆರ್ ಆರ್ ಆರ್ ಪ್ರಮೋಷನ್ ಸೆಲೆಬ್ರೇಷನ್ ಮುಗಿಸಿರುವ ಜೂ.ಎನ್ ಟಿ ಆರ್ ಮುಂದಿನ ಸಿನಿಮಾದಲ್ಲಿ ಸಂಪೂರ್ಣವಾಗಿ ತೊಡಿಸಿಕೊಳ್ಳಲಿದ್ದಾರೆ. ಹೌದು ಸದ್ಯದಲ್ಲೇ ಶೂಟಿಂಗ್ ಪ್ರಾರಂಭಿಸಲಿದ್ದು ಮತ್ತೆ ಅವರನ್ನು ತೆರೆಮೇಲೆ ನೋಡಲು ಇನ್ನೂ ಸ್ವಲ್ಪ ಸಮಯ ಕಾಯಲೇ ಬೇಕು.
ಇನ್ನು ಜೂ.ಎನ್ ಟಿ ಆರ್ RRR ಚಿತ್ರದ ಬಳಿಕ 30ನೇ ಸಿನಿಮಾ ಘೋಷಿಸಿದ್ದು ಖ್ಯಾತ ನಿರ್ದೇಶಕ ಕೊರಟಾಲ ಶಿವ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಬಾಲಿವುಡ್ ನಟಿ ಜಾನ್ವಿ ಕಪೂರ್ ಆಯ್ಕೆಯಾಗಿದ್ದಾರೆ. ಈ ಚಿತ್ರ ಘೋಷಣೆ ಆಗಿದ್ದಷ್ಟೇ ಈವರೆಗೆ ಚಿತ್ರದ ಶೂಟಿಂಗ್ ಆರಂಭ ಆಗಿಲ್ಲ ಎನ್ನಲಾಗಿದೆ.