ನಮಸ್ಕಾರ ದೇವ್ರು ಎಂದು ಯೂಟ್ಯೂಬ್‌ನಲ್ಲಿ ವಿಡಿಯೋ(Video) ಆರಂಭಿಸುವ ಡಾ.ಬ್ರೋ (Dr Bro) ಎಲ್ಲರಿಗೂ ಗೊತ್ತು, ವಿದೇಶಗಳಿಗೂ ತನ್ನ ಪ್ರಾಣದ ಲೆಕ್ಕವಿಲ್ಲದೆ ಪ್ರಯಾಣ ಮಾಡ್ತಾರೆ, ಇವರ ನಿಜವಾದ ಹೆಸರು ಗಗನ್ ಶ್ರೀನಿವಾಸ್ (Gagan Srinivas) ಈತನ ಭಾಷೆ ಪಕ್ಕಾ ಲೋಕಲ್ ಅನ್ನೋದು ವಿಶೇಷ.
ಎಕ್ಸ್‌ಪ್ರೆಶನ್ ನ ತೋರಿಕೆ ಇಲ್ಲ, ಸರಳ ಭಾಷೆ ಎಲ್ಲವೂ ಕೇಳೋಕೆ ಸಖತ್ ಮಜಾ ಕೊಡುತ್ತೆ. ಕನ್ನಡಿಗರಿಗೆ ಜಗತ್ತು ತೋರಿಸಬೇಕು ಅಂತ ಪ್ಲಾನ್ ಮಾಡಿಕೊಂಡಿರೋ ಈ ಹುಡುಗ ರಷ್ಯಾ, ಪಾಕಿಸ್ತಾನ್, ದುಬೈ, ಪಾಕಿಸ್ತಾನ ಹೀಗೆ ಹಲವಾರು ದೇಶಗಳಿಗೆ ಸುತ್ತಾಡಿದ್ದಾನೆ.
ನೈಜ ಕಟೆಂಟ್ ಆಪ್ಲೋಡ್ ಮಾಡುವ ಡಾ.ಬ್ರೋ
ಕನ್ನಡದಲ್ಲಿ ಸೂಕ್ತ ವಿಚಾರಗಳ ಬಗ್ಗೆ ಕಂಟೆಂಟ್ ಹಾಕುವ ಜನಪ್ರಿಯ ಯೂಟ್ಯೂಬರ್ ಎಂದರೆ ಅದು ಡಾ ಬ್ರೋ , ಬಹಳ ವರ್ಷಗಳಿಂದಲೂ ಯೂಟ್ಯೂಬ್ ವಿಡಿಯೋಗಳನ್ನು ಮಾಡುತ್ತಿರುವ ಡಾ ಬ್ರೋ ಗೆ ಭಾರಿ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಡಾ. ಬ್ರೋ ಅವರು ಭರತನಾಟ್ಯ ಡ್ಯಾನ್ಸ್ ರ್ ಕೂಡ, ಭರತನಾಟ್ಯವನ್ನು ಕಲಿತು ಭರತನಾಟ್ಯದ ಗುರುವು ಕೂಡ ಆದರು.ಡಾ. ಬ್ರೋ ಅವರಿಗೆ ಚಿಕ್ಕ ವಯಸ್ಸಿನಿಂದಲೇ ವಿಡಿಯೋ ಗ್ರಾಫಿ ಹುಚ್ಚು, ಆದ್ದರಿಂದ ಕೇವಲ 18 ರಿಂದ 19 ವರ್ಷ ಇದ್ದಾಗಲೇ ತಮ್ಮ ಯುಟ್ಯೂಬ್ ಚಾನೆಲ್ ಶುರು ಮಾಡುತ್ತಾರೆ.
ಇದು ಇಂದಿಗೇ ಭಾರೀ ಪೇಮಸ್ಸ್ ಆಗಿದೆ. ಡಾಕ್ಟರ್ ಬ್ರೋ ಹುಟ್ಟಿದ್ದು 2000ನೇ ಇಸವಿ ಇವರು ಹುಟ್ಟಿದ್ದು ಬೆಂಗಳೂರಿನಲ್ಲಿ, ಇವರು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರು, ತಂದೆ ಶ್ರೀನಿವಾಸ್ ದೇವಸ್ಥಾನದಲ್ಲಿ ಅರ್ಚಕರಾಗಿದ್ದರು ತಾಯಿ ಪದ್ಮಾವತಿ ಇಂಥ ಡಾಕ್ಟರ್ ಬ್ರೋ ಗೆ ಚಂದನ್ ಎಂಬ ತಮ್ಮ ಕೂಡ ಇದ್ದಾನೆ ಇವರದ್ದು ಮಿಡ್ಲ್ ಕ್ಲಾಸ್ ಫ್ಯಾಮಿಲಿ ಕೂಡ ಆಗಿದೆ
Dr Broಗೆ ಗೋಲ್ಡನ್ ಪ್ಲೇ ಬಟನ್
ಡಾ ಬ್ರೋ ಗೆ ಗೋಲ್ಡನ್ ಪ್ಲೇ ಬಟನ್ ಗಿಪ್ಟ್(Golden Play Button) ದೊರೆತಿದೆ. ಒಂದು ಲಕ್ಷ ಫಾಲೋವರ್ಸ್ ಆಗಿದ್ದಕ್ಕೆ ಸಿಲ್ವರ್ ಬಟನ್ ಕೊಟ್ಟಿದ್ದರು ಈಗ 10 ಲಕ್ಷ ಫಾಲೋವರ್ಸ್ ಆಗಿರುವುದಕ್ಕೆ ಗೋಲ್ಡನ್ ಬಟನ್ ನೀಡಿದ್ದಾರೆ, ಈ ಬಗ್ಗೆ ಮಾತನಾಡಿದ ಡಾ ಬ್ರೋ ನನಗೆ ಬಹುಮಾನ ಪ್ರಶಸ್ತಿಗಳ ಮೇಲೆ ಆಸಕ್ತಿ ಇಲ್ಲ, ಎಂದು ಗಗನ್ ಗೋಲ್ಡನ್ ಬಟನ್ ಓಪನ್ ಮಾಡಿದ್ದಾರೆ.
ಯುಟ್ಯೂಬ್ ಸಿಇಓ(CEO) ಸಹಿ ಮಾಡಿರುವ ರೆಟರ್ ಸಹ ಇದೆ ಎಂದಿದ್ದಾರೆ, ನೀವೂ ಒಂದು ಗುರಿ ಇಟ್ಟುಕೊಂಡು ಒಂದು ಮಿಲಿಯನ್ ಫಾಲೋವರ್ಸ್ ಹೊಂದಿರುವುದಕ್ಕೆ ಈ ಪ್ರಶಸ್ತಿ ಎಂದು ಬರೆದಿದ್ದಾರೆ. ಇನ್ನು ಇಷ್ಟೆಲ್ಲ ಓದಿ ಗಿಪ್ಟ್ ಒಪನ್ ಮಾಡುತ್ತಾರೆ, ಗೋಲ್ಡ್ ಬಟನ್‌ನ ನಿಮ್ಮ ಮುಂದೆ ಓಪನ್ ಮಾಡುತ್ತೀನಿ ಎಂದು ಉಜ್ಜಿ ನೋಡಿದಾಗ ಚಿನ್ನದ ಬಣ್ಣ ಹೋಗಿದ್ದು, ಬಿಳಿ ಲೋಹ ಕಾಣಿಸಿಕೊಂಡಿದೆ. ಲೋಹದ ಮೇಲೆ ಚಿನ್ನದ ಪೇಂಟ್ ಮಾಡಿದ್ದಾರೆ. ಒಂದು ಲಕ್ಷ ಬಂದಾಗ ಕಳುಹಿಸಿದ ಪ್ರಶಸ್ತಿಯನ್ನು ಕೂಡ ಓಪನ್ ಮಾಡಿ ತೋರಿಸಿರುವೆ ಎಂದು ಹೇಳಿದ್ದಾರೆ.