Kirik Keerthi: ದೂರಾದ ಪತ್ನಿ ಅರ್ಪಿತಾಗೆ ಕಿರಿಕ್ ಕೀರ್ತಿ ಏನೆಲ್ಲಾ ಮಾಡಿದ್ದರು ಗೊತ್ತಾ? ಕೊನೆಗು ಸತ್ಯ ಹೊರಕ್ಕೆ
ಮಾಜಿ ಬಿಗ್‌ಬಾಸ್(Bigg Boss) ಸ್ಪರ್ಧಿ ಕಿರಿಕ್ ಕೀರ್ತಿ (Kirik Keerthi) ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ (Social Media) ನಡೀತಿದೆ. ಕೆಲ ದಿನಗಳ ಹಿಂದೆ ಕೀರ್ತಿ ವೈಯಕ್ತಿಕ ಜೀವನದಲ್ಲಿ ನಡೆದ ಕೆಲ ಘಟನೆಗಳಿಂದ ಡಿಪ್ರೆಷನ್‌ಗೆ (Depression) ಹೋಗಿದ್ದಾಗಿ ಹೇಳಿಕೊಂಡಿದ್ದರು. ಹೌದು ಒಂದು ಹಂತದಲ್ಲಿ ಪತ್ರ ಬರೆದಿಟ್ಟು ಜಗತ್ತಿಗೆ ವಿದಾಯ ಹೇಳು ಹೊರಟ್ಟಿದ್ದೆ ಎಂದು ಬರೆದುಕೊಂಡಿದ್ದರು. ಇದೆಲ್ಲರದರ ನಡುವೆ ಇದೀಗ ಕಿರೀಕ್ ಕೀರ್ತಿ ಹಾಗು ಪತ್ನಿ ಅರ್ಪಿತಾ (Arpitha) ರವರ ಲವ್ ಸ್ಟೋರಿ (Love Story) ವೈರಲ್ ಆಗುತ್ತಿದೆ.45 ದಿನಗಳ ಉಪವಾಸ, ಅರ್ಪಿತ ಹೆಸರಿನ ಟ್ಯಾಟೂ ಹೀಗೆ ಇವರ ಲವ್ ಸ್ಟೋರಿ ಕೇಳಿದರೆ ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತದೆ.
ಅರ್ಪಿತಾ ರವರು ಮೊದಲ ಬಾರಿಗೆ ಕಾಲೇಜಿನಲ್ಲಿ ಕೀರ್ತಿಯವರನ್ನ ನೋಡುತ್ತಾರೆ. ಹೌದು ಬಾಲಕಿಯರ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ ಅರ್ಪಿತಾ ರವರ ಕಾಲೇಜಿಗೆ ಕಾರ್ಯಕ್ರಮ ನೀಡಲು ಕೀರ್ತಿ ಬಂದಿದ್ದರು. ಇಲ್ಲಿ ಇಬ್ಬರು ಪರಿಚಯವಾಗಿದ್ದು ನಂತರ ಉತ್ತಮ ಸ್ನೇಹಿತರಾಗುತ್ತಾರೆ. ದಿನಕಳೆದಂತೆ ಪರಸ್ಪರ ಬಾಂಧವ್ಯ ಬೆಸಗಿಕೊಂಡಿದ್ದು ಈ ಸ್ನೇಹ ಪ್ರೀತಿಯಾಗಿ ತಿರುಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಆದರೆ ಅರ್ಪಿತಾ ರವರ ಮನೆಯಲ್ಲಿ ಪೋಷಕರು ಇವರ ಪ್ರೀತಿಗೆ ಒಪ್ಪಿಗೆ ನೀಡದ ಕಾರಣ ದಾಂಪತ್ಯ ಜೀವನಕ್ಕೆ ಕಾಲಿಡಲು ಸಾಕಷ್ಟು ಹೋರಾಡಬೇಕಾಯಿತು. ಇನ್ನು ಮದುವೆಯ ಸಮಯದಲ್ಲಿ ಜೀವನದ ಅಂಗು ತೊರೆದು ನಾವಿಬ್ಬರು ಒಂದಾದೇವು ಎಂದು ಕಾರ್ಯಕ್ರಮವೊಂದರಲ್ಲಿ ಅರ್ಪಿತಾ ಹೇಳಿಕೊಂಡಿದ್ದರು.
ಕೀರ್ತಿ ಹಾಗೂ ನನ್ನ ವಿಷಯ ಮನೆಯವರೆಗೆ ತಿಳಿದಾಗ ಬ್ರೈನ್ ವಾಷ್ ಮಾಡಲು ಮುಂದಾಗಿದ್ದರು. ಮದುವೆಯಾಗಿ 10 ವರುಷ ಕಳೆದರು ಈ ಘಟನೆ ನೆನಪಿಸಿಕೊಂಡರೆ ಭಯವಾಗುತ್ತದೆ ಎಂದಿದ್ದರು ಅರ್ಪಿತಾ. ಆ ಸಮಯದಲ್ಲಿ ಸುಮಾರು 45 ದಿನಗಳ ಕಾಲ ಕೀರ್ತಿಯನ್ನು ಸಂಪರ್ಕಿಸಲು ಆಗಿರಲಿಲ್ಲ ಎಂದಿದ್ದ ಅರ್ಪಿತಾ ನನ್ನ ಮನೆಯಿಂದ ಹೊರ ಬಿಡುತ್ತಲೇ ಇರಲಿಲ್ಲ. ಆದರೆ ಕೀರ್ತಿ ಮೇಲಿನ ಪ್ರೀತಿ ಮನೆಯವರ ಮೇಲೆ ಹೋರಾಡುವಂತೆ ಮಾಡಿ ಬಿಟ್ಟಿತ್ತು. ಸುಮಾರು 45 ದಿನಗಳ ಕಾಲ ಕೇವಲ ಮೊಸರನ್ನ ಸೇವಿಸಿದ್ದೆ ಎಂದು ಅರ್ಪಿತಾ ಕಣ್ಣೀರು ಹಾಕಿದ್ದರು. ಇನ್ನು ಪ್ರೀತಿ ಮಾಡುತ್ತಿದ್ದ ಸಮಯದಲ್ಲಿ ಅರ್ಪಿತಾ ರವರ ಹೆಸರನ್ನ ಕೀರ್ತಿ ಟ್ಯಾಟೂ ಕೂಡ ಹಾಕಿಸಿಕೊಂಡಿದ್ದರು.
ಸುಮಾರು 60 ದಿನಗಳ ನಂತರ ಅರ್ಪಿತಾ ರವರ ಮನೆಯವರು ಮದುವೆಗೆ ಒಪ್ಪಿಗೆ ನೀಡಿದ್ದು ಅಂತಿಮವಾಗಿ ಪ್ರೇಮಿಗಳಿಬ್ಬರು ಒಳ್ಳೆಯ ದಿನ ನೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಕೀರ್ತಿ ಭವಿಷ್ಯದಲ್ಲಿ ಏನಾದರು ಸಾಧಿಸುತ್ತಾರೆ ಎಂದು ತಿಳಿದು ನಾನು ಮದುವೆಯಾದೆ ಎಂದು ಅರ್ಪಿತಾ ಹೇಳುದ್ದು ಪ್ರೀತಿಸುವ ಸಂಧರ್ಭದಲ್ಲಿ ಮದುವೆ ವಿಚಾರವಾಗಿ ನಾವು ಇಷ್ಟೊಂದು ಟೀಕೆಗಳನ್ನು ಎದರಿಸುತ್ತೇವೆ ಎಂದು ತಿಳಿದಿರಲಿಲ್ಲ ಎಂದೂ ಕೂಡ ಹೇಳಿದ್ದರು. ಇನ್ನು ಒಂದು ವೇದಿಕೆಯಲ್ಲಿ ಕೀರ್ತಿಯವರೇ ಮೊದಲು ಪ್ರಪೋಸ್ ಮಾಡಿದ್ದು ಎಂದು ಅರ್ಪಿತಾ ಹೇಳಿಕೊಂಡಿದ್ದರು. ಹೀಗೆ ಇಷ್ಟೊಂದು ಹೋರಾಡಿ ಮದುವೆಯಾದ ಈ ಜೋಡಿಯ ಜೀವನದಲ್ಲಿ ಇದೀಗ ಬಿನ್ನಾಭಿಪ್ರಾಯ ಮೂಡಿದೆ ಎಂದರೆ ನಿಜಕ್ಕೂ ಬೇಸರದ ವಿಷಯ ಎನ್ನಬಹುದು.