Karnataka Times
Trending Stories, Viral News, Gossips & Everything in Kannada

R Chandru: ಅಲ್ಲು ಅರ್ಜುನ್ ಅವಮಾನ ಮಾಡಿದ್ದು ನಿಜಾನ ಕ್ಲಾರಿಟಿ ಕೊಟ್ಟ ಆರ್ ಚಂದ್ರು

Advertisement

ಉಪೇಂದ್ರ (Upendra) ನಟನೆಯ ಕಬ್ಜ ಸಿನಿಮಾ ಅದ್ದೂರಿಯಾಗಿ ಮೂಡಿ ಬಂದಿದೆ, ಸಿನಿಮಾ ನೋಡಿ ಅಭಿಮಾನಿಗಳು ವಾವ್ ಅಂದಿದ್ದಾರೆ, ಇದೀಗ ಕಬ್ಜ ಚಿತ್ರ ತಂಡ ಸಕ್ಸಸ್ ಮೀಟ್ ನ‌ ಖುಷಿಯಲ್ಲಿದೆ, ರಿಯಲ್ ಸ್ಟಾರ್ ಉಪೇಂದ್ರ ಈ ಚಿತ್ರದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ. ಮುಂದೇ ಡಾನ್ ಆಗೋದೇ ಕಥೆ. ಭೂಗತ ಲೋಕವನ್ನ ಆಳೋ ದೊರೆ ಆಗೋದು ಇಡೀ ಸಿನಿಮಾದ ಕಥೆ ಯಾಗಿದೆ. ಇದೀಗ ಆರ್‌ ಚಂದ್ರು ಮತ್ತು ‌ಅಲ್ಲು ಅರ್ಜುನ್ (Allu Arjun). ವಿಚಾರವಾಗಿ ಚರ್ಚೆ ನಡೆಯುತ್ತಿದೆ, ಕಬ್ಜ ಸಿನಿಮಾ 4 ಸಾವಿರ ಪರದೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಮೊದಲ ದಿನ ಬರೋಬ್ಬರಿ 54 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಎರಡನೇ ದಿನಕ್ಕೆ 100 ಕೋಟಿಯಾಗಿದೆ ಎಂಬ ಮಾಹಿತಿ‌ ಕೂಡ ಲಭ್ಯವಾಗಿದೆ, ಕಬ್ಜ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ ಎನ್ನಬಹುದು.

ಕ್ಲಾರಿಟಿ ಕೊಟ್ಟ R Chandru:

ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿದ್ದ ಕಬ್ಜ ತೆರೆಗೆ ಬಂದಿದೆ, ಇದೀಗ ಕುತೂಹಲಕ್ಕೆ ತೆರೆ ಬಿದ್ದಿದೆ. ಆರ್.ಚಂದ್ರು (R Chandru) ಕಬ್ಜ ಮೂಲಕ ಬಿಗ್ ಬಜೆಟ್, ಪ್ಯಾನ್ ಇಂಡಿಯಾ ಸಿನಿಮಾ (Pan India Cinema) ಮಾಡಲು ಹೊರಟಾಗ ಹಲವರು ವ್ಯಕ್ತಿಗಳು ಅನುಮಾಸಿದ್ದರು, ಆದರೆ ಅದೆಲ್ಲವನ್ನೂ ಮೀರಿ ಈಗ ಆರ್.ಚಂದ್ರು ಯಶಸ್ವಿಯಾಗಿದ್ದಾರೆ,ಕನ್ನಡದ ನಿರ್ದೇಶಕನ ಎಂದು ಯಾರೋ ಒಬ್ಬ ನನ್ನನ್ನು ತಿರಸ್ಕರಿಸಿದ್ದಾರೆ. ಅದನ್ನು ಕೇಳಿದಾಗ ನೋವಾಗಿತ್ತು, ಆ ನೋವನ್ನು ಹೋಗಲಾಡಿಸಲು ನನಗೆ ಸಹಾಯ ಮಾಡಿದವರು ಕೆಜಿಎಫ್ (KGF) ತಂಡದವರು. ಆಗಲೇ ನಾನು ನಿರ್ಧರಿಸಿದ್ದು, ಜನರು ಏನೇ ಹೇಳಿದರೂ ಕೇಳಬಾರದೆಂದು ಆರ್.ಚಂದ್ರು ಇತ್ತೀಚೆಗೆ ನಡೆದ ಕಬ್ಜಾ ಸಕ್ಸಸ್ ಮೀಟ್‌ನಲ್ಲಿ ಹೇಳಿದ್ದಾರೆ, ಈ ವಿಚಾರವನ್ನು ಅಲ್ಲು ಅರ್ಜುನ್ (Allu Arjun) ಹೋಗಿ ಆ ನಿರ್ದೆಶಕರ ಬಳಿ ಹೋಗಿ ಹೇಳಲಿ ಎಂದು ಹೇಳಿದೆ, ಅಲು ಅರ್ಜುನ್ (Allu Arjun) ನನಗೆ ಏನೂ ಅಂದಿಲ್ಲ ಎಂದು ಕ್ಲಾರಿಟಿ ನೀಡಿದ್ದಾರೆ.

Allu Arjun ಜೊತೆ ಸಿನಿಮಾ ಮಾಡುವ ಆಸೆ ಇತ್ತು:

ನನಗೆ ಅಲ್ಲು ಅರ್ಜುನ್​ (Allu Arjun) ಜೊತೆ ಸಿನಿಮಾ ಮಾಡುವ ಆಸೆಯಿತ್ತು ತೆಲುಗು ಸಿನಿಮಾ (Telugu Movie) ಹಿಟ್ ಆದ ಬಳಿಕ ಒಬ್ಬ ನಿರ್ಮಾಪಕರಿಗೆ ಈ ವಿಷಯ ಹೇಳಿದೆ. ಅವರು ಯಾರು ಕನ್ನಡದ ನಿರ್ದೇಶಕರಾ? ಎಂದು ಹೇಳಿಬಿಟ್ಟರು, ನನ್ನ ಕತೆಯನ್ನೂ ಅವರು ಕೇಳಲಿಲ್ಲ. ಅದು ನನಗೆ ಬಹಳ ಬೇಸರ ತರಿಸಿದೆ ಅಂದರು,ಇದಕ್ಕೆ ಸಾಕ್ಷಿಯಾಗಿ ಕನ್ನಡ ಇಂಡಸ್ಟ್ರಿ ಯಲ್ಲಿ ಫ್ಯಾನ್ ಇಂಡಿಯಾ‌ ಸಿನಿಮಾಗಳು ಬರ್ತಾನೆ ಇವೆ, ಕೆಜಿಎಫ್ ಬಗ್ಗೆ ಮೆಚ್ಚಲೆ ಬೇಕು. ಕಬ್ಜ ಕೂಡ ಹಾಗೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎನ್ನಬಹುದು.

Leave A Reply

Your email address will not be published.