Rashmika Mandanna: ಸಿನಿಜೀವನದ ಮಹತ್ವದ ನಿರ್ಧಾರ ತಿಳಿಸಿದ ಪುಷ್ಪಾ ಬೆಡಗಿ ರಶ್ಮಿಕಾ ಮಂದಣ್ಣ

Advertisement
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಈಗ ಏನು ಮಾಡಿದರೂ ಗಾಸಿಪ್ ವಿಚಾರದಿಂದ ಹೊರಬರುತ್ತಿಲ್ಲ ಎನ್ನಬಹುದು. ಅದೇ ರೀತಿ ರಶ್ಮಿಕಾ ಅವರು ಇತ್ತೀಚೆಗೆ ನಟಿಸಿದ್ಧ ಸಿನೆಮಾಗಳ ಪೈಕಿ ಕೆಲವೊಂದು ಹಿಟ್ ಆದರೆ ಇನ್ನು ಬಹುತೇಕ ಸಿನೆಮಾಗಳು ಫ್ಲಾಪ್ ಲೀಸ್ಟ್ ಸೇರಿಕೊಂಡಿತು. ಹಿಟ್ ಆದ ಸಿನೆಮಾ ಸಾಲಿನಲ್ಲಿ ಕಾಣುವಾಗ ಪುಷ್ಪ (Pushpa) ಯಾವಾಗಲೂ ಎವರ್ ಗ್ರೀನ್ ಮೂವಿ ಎನ್ನಬಹುದು.
ಫೆಮಸ್ಸ್ ಆದ ಸ್ಟೆಪ್:
ನಟಿ ರಶ್ಮಿಕಾ ಮಂದಣ್ಣ ಅವರು ಪುಷ್ಪ ಸಿನೆಮಾ ಒಪ್ಪಿಕೊಂಡಾಗ ಆಗ ಅದರ ಮೇಲೆ ಆಕೆಗೆ ನಿರೀಕ್ಷೆ ಸಹ ಹೆಚ್ಚಾಗಿತ್ತು. ಅದೇ ರೀತಿ ಆ ಸಿನೆಮಾ ಕೂಡ ಸೂಪರ್ ಹಿಟ್ ಆಗಿತ್ತು. ಅದರಲ್ಲು ಶ್ರೀ ವಲ್ಲಿ (Srivalli) ಪಾತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ತುಂಬಾ ವಿಭಿನ್ನವಾಗಿ ಕಂಡರು ಮಾತ್ರವಲ್ಲದೇ ಅವರ ಸಾಮಿ ಸಾಮಿ ಹಾಡಿನ ನೃತ್ಯ ತುಂಬಾ ಫೇಮಸ್ ಸ್ಟೆಪ್ ಕೂಡ ಆಯಿತು. ಅದಾದ ಬಳಿಕ ರಶ್ಮಿಕಾ ಅವರು ಬೇರೆ ಸಿನೆಮಾ ಪ್ರಮೋಶನ್ ಹೋದರು ಮೇಡಂ ಪ್ಲೀಸ್ ಸಾಮಿ (Sami) ಸ್ಟೆಪ್ ಹಾಕುವಂತೆ ಕೇಳುತ್ತಿದ್ದಾರೆ. ಆದರೆ ಈಗ ಮಾತ್ರ ರಶ್ಮಿಕಾ ನಾನು ಆ ಸ್ಟೆಪ್ ಹಾಕೊಲ್ಲ ಎಂದು ಖ್ಯಾತೆ ತೆಗೆಯುತ್ತಿದ್ದಾರೆ.
ಯಾಕೆ ವಲ್ಲೆ ಅಂತಿದ್ದಾರೆ:
ನಟಿ ರಶ್ಮಿಕಾ ಅವರು ಇತ್ತೀಚೆಗೆ ಮುಂಬೈನ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡಾಗ ಅಲ್ಲಿ ಅವರ ಅಭಿಮಾನಿಗಳು ಸ್ಟೆಪ್ ಹಾಕಲು ಕೇಳಿದ್ದಾರೆ ಆದರೆ ಈ ಸ್ಟೆಪ್ ಹಾಕಲು ಆಗೊಲ್ಲ ಅನ್ನೊಕು ಕಾರಣ ಇದೆ. ನಂಗೆ ಈಗಾಗಲೇ ಈ ನೃತ್ಯ ಮಾಡಿ ಸಾಕಾಗಿದೆ. ಮುಂದಿನ ದಿನದಲ್ಲಿ ನಂಗೆ ವಯಸ್ಸಾದರೆ ಇದು ಬೆನ್ನು ನೋವು ಬರುವ ಸಾಧ್ಯತೆ ಇದೆ. ಹಾಗಾಗಿ ನಾನು ಈ ಸ್ಟೆಪ್ ಹಾಕೊಲ್ಲ ಈ ಟ್ರೆಂಡ್ ಈಗ ಬದಲಾಗಬೇಕು. ಪ್ರತಿ ಬಾರಿ ಒಂದೆ ಸ್ಟೆಪ್ ಬೇಡ, ಹಸತನವನ್ನು ಮೈಗೂಡಿಸೋಣ ಎಂದಿದ್ದಾರೆ. ಈ ಮೂಲಕ ತನ್ನ ಹಾಡಿನ ಸ್ಟೆಪ್ ಅನ್ನೆ ಹಾಕಲು ವಲ್ಲೆ ಅಂದದ್ದು ಎಲ್ಲೆಡೆ ಚರ್ಚೆಯಾಗುವ ವಿಚಾರವಾಗಿದೆ.