Roopesh Shetty And Sanya Iyer: ತಮ್ಮಿಬ್ಬರ ನಡುವಿನ ಅಸಲಿ ಸಂಬಂಧದ ಬಗ್ಗೆ ತಿಳಿಸಿದ ರೂಪೇಶ್ ಶೆಟ್ಟಿ ಹಾಗೂ ಸಾನ್ಯ ಅಯ್ಯರ್
ಸದ್ಯ ಇತ್ತೀಚೆಗಷ್ಟೇ ನಡೆದ ಒಂದು ಸಂದರ್ಶನದಲ್ಲಿ (Interview) ರೂಪೇಶ್ ಶೆಟ್ಟಿಯವರಿಗೆ (Roopesh Shetty) ಸಾನಿಯಾ (Sanya Iyer) ಅವರ ಬಗ್ಗೆ ಪ್ರಶ್ನೆ ಕೇಳಲಾಗಿದ್ದು ಇದಕ್ಕೆ ಉತ್ತರಿಸಿದ ರೂಪೇಶ್ ಶೆಟ್ಟಿ ಅವರು ನಾನು ಫ್ರೆಂಡ್ಸ್ ಗಳಿಗೆ (Friends) ಬಹಳ ಬೆಲೆ ಕೊಡುತ್ತೇನೆ. ಹೌದು ನಾನು ಮತ್ತು ಸಾನಿಯಾ ಒಳ್ಳೆಯ ಫ್ರೆಂಡ್ಸ್ ಅಷ್ಟೇ.
ಹೌದು ನಾನು ಇನ್ನು ಮದುವೆಯ (Marriage) ಬಗ್ಗೆ ಯಾವುದೇ ಆಲೋಚನೆ ಮಾಡಿಲ್ಲ. ಇದೀಗ ಬಿಗ್ ಬಾಸ್ (Bigg Boss) ಸೀಸನ್ ಗೆದ್ದಿದ್ದೇನೆ. ಇನ್ನು ಇದೇ ಸಕ್ಸಸ್ ನಿಂದ ಸಾಕಷ್ಟು ಕೆಲಸಗಳನ್ನು ಮಾಡುವ ಆಸೆ ಇಟ್ಟುಕೊಂಡಿದ್ದು ಸದ್ಯ ಮದುವೆಯ ಬಗ್ಗೆ ನನಗೆ ಯಾವುದೇ ಆಲೋಚನೆ ಇಲ್ಲ ಎಂದಿದ್ದಾರೆ. ಸದ್ಯ ಈ ವಿಷಯ ಸಾಮಾಜಿಕ ಜಾಲತಾಣಲ್ಲಿ (Social Media) ವೈರಲ್ ಆಗುತ್ತದೆ.
ಬಿಗ್ ಬಾಸ್ ಸೀಸನ್ 9ರಲ್ಲಿ (Bigg Boss Season 9) ರೂಪೇಶ್ ಶೆಟ್ಟಿ ಕಪ್ ಗೆದ್ದು ಮನೆಯಿಂದ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಇನ್ಜು ಸೀಸನ್ 9ರಲ್ಲಿ ಕ್ಯೂಟ್ ಲವ್ ಸ್ಟೋರಿ ಕೂಡ ಇತ್ತು. ಬಿಗ್ ಬಾಸ್ ಒಟಿಟಿಯಿಂದ (Bigg Boss OTT) ಶುರುವಾದ ಸಾನ್ಯಾ ಐಯ್ಯರ್ ಹಾಗೂ ರೂಪೇಶ್ ಶೆಟ್ಟಿ ಲವ್ಸ್ಟೋರಿ ಬಿಗ್ಬಾಸ್ ಮನೆಗೂ ಬಂದು ಸಖತ್ ಸುದ್ದಿ ಮಾಡಿತ್ತು.ಮನೆಯಿಂದ ಹೊರಬಂದ ಮೇಲೂ ಕೂಡ ಇವರು ಸಖತ್ ಕ್ಯೂಟ್ ಆಗಿ ಜೊತೆಯಾಗಿದ್ದಾರೆ. ಸಾನ್ಯಾ ಹಾಗೂ ರೂಪೇಶ್ ನಡುವಿನ ವಯಸ್ಸಿನ ಅಂತರ ನೋಡುವುದಾದರೆ 21 ಸೆಪ್ಟೆಂಬರ್ 1998ರಲ್ಲಿ ಹುಟ್ಟಿದ ಸಾನ್ಯಾ ಐಯ್ಯರ್ ವಯಸ್ಸು ಈಗ 24 ವರ್ಷ. 14 ಆಗಸ್ಟ್ 1990ರಲ್ಲಿ ಹುಟ್ಟಿದ ನಟ ರೂಪೇಶ್ ಶೆಟ್ಟಿಗೆ ಈಗ ವಯಸ್ಸು 32.
ಇನ್ನು ಈ ಜೋಡಿಯ ವಯಸ್ಸಿನ ಅಂತರ 8 ವರ್ಷ. ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಇಬ್ಬರಿಗೂ ಪರ್ಫೆಕ್ಟ್ ಮ್ಯಾರೇಜ್ ಏಜ್ ಅಂತಿದ್ದಾರೆ ಅವರ ಅಭಿಮಾನಿಗಳು.ಇನ್ನು ಬಿಗ್ ಬಾಸ್ ವಿನ್ನರ್ ನಟ ರೂಪೇಶ್ ಶೆಟ್ಟಿ ಅಭಿನಯದ ಮಂಕು ಭಾಯ್ ಫಾಕ್ಸಿ ರಾಣಿ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಹಾಗಾಗಿ ಸದ್ಯ ಅವರು ಸಿನಿಮಾ ಸಂಬಂಧ ಬ್ಯುಸಿ ಇರಲಿದ್ದಾರೆ. ಇನ್ಜು ಸಾನ್ಯಾ ಹಾಗೂ ರೂಪೇಶ್ ಬಿಗ್ ಬಾಸ್ ಮನೆಯಲ್ಲಿ ತುಂಬಾ ಕ್ಲೋಸ್ ಆಗಿದ್ದರು. ಇವರಿಬ್ಬರ ಜೋಡಿಯನ್ನು ಪ್ರೇಕ್ಷಕರು ಕೂಡಾ ಮೆಚ್ಚಿಕೊಂಡಿದ್ದರು.ಇನ್ನುಬಸಾನ್ಯ ಅಯ್ಯರ್ ಬಿಗ್ಬಾಸ್ ಮನೆಯಿಂದ ಎಲಿಮಿನೇಟ್ ಆದಾಗ ರೂಪೇಶ್ ಶೆಟ್ಟಿ ಚಿಕ್ಕಮಕ್ಕಳಂತೆ ಅತ್ತಿದ್ದರು. ಆ ಸಂದರ್ಭದಲ್ಲಿ ಪ್ರೇಕ್ಷಕರು ಕೂಡಾ ಸ್ವಲ್ಪ ಬೇಸರಗೊಂಡಿದ್ದರು.