ಮೂಲತಃ ಮಂಗಳೂರು ಮೂಲದ ಶಿಲ್ಪಾ ಶೆಟ್ಟಿ (Shilpa Shetty) ಬಾಲಿವುಡ್‍ನಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸುವ ಮೂಲಕ ಸ್ಟಾರ್ ನಟಿ ಎನಿಸಿದ್ದಾರೆ, ಇಂದಿಗೂ ಯಂಗ್ ಆಗೇ ಕಾಣೋ ಶಿಲ್ಪ ಸತ್ಯವತಿಯಾಗಿ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ, ಚೆಂದದ ಸೀರೆಯುಟ್ಟು ಉದ್ದದ ಜಡೆ ಮುಂದಕ್ಕೆ ಬಿಟ್ಟು, ಕೂಲಿಂಗ್ ಗ್ಲ್ಯಾಸ್ ಧರಿಸಿ ರಾಯಲ್ ಆಗಿ ಶಿಲ್ಪಾ ಶೆಟ್ಟಿ ಎಂಟ್ರಿ ನೀಡಿದ್ದಾರೆ, ಮೂಲತಃ ಮಂಗಳೂರು ಮೂಲದ ಶಿಲ್ಪಾ ಶೆಟ್ಟಿ ಬಾಲಿವುಡ್‍ನಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸುವ ಮೂಲಕ ಸ್ಟಾರ್ ನಟಿ ಎನಿಸಿದ್ದಾರೆ.
ಯುಗಾದಿ ಹಬ್ಬದ ದಿನ ಶಿಲ್ಪ ಲುಕ್ ರಿಲೀಸ್:
ಸ್ಯಾಂಡಲ್ವುಡ್ನಲ್ಲಿ ಸದ್ಯ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Action Prince Dhruva Sarja) ಸಿನಿಮಾ ಅಬ್ಬರ ಜೋರಾಗಿದೆ. ನಿರ್ದೇಶಕ ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್‌ನಲ್ಲಿ ಸಿದ್ಧವಾಗುತ್ತಿರುವ ಕೆಡಿ ಸಿನಿಮಾ ಭಾರೀ ಸದ್ದು ಮಾಡುತ್ತಿದೆ, ಇಂದು ಮೊದಲ ಲುಕ್ ಕೂಡ ರಿಲೀಸ್ ಆಗಿದೆ. ನಟಿ ಶಿಲ್ಪಾ ಶೆಟ್ಟಿ ಸದ್ದಿಲ್ಲದೇ ಶೂಟಿಂಗ್ ಮುಗಿಸಿದ್ದಾರೆ. ಇದೀಗ ಶಿಲ್ಪಾ ಶೆಟ್ಟಿ ಪಾತ್ರದ ಫಸ್ಟ್ ಲುಕ್ ಚಿತ್ರತಂಡ ಅನಾವರಣ ಮಾಡಲು ಮುಂದಾಗಿದ್ದಾರೆ, ಡೈರೆಕ್ಟರ್ ಜೋಗಿ ಪ್ರೇಮ್ ಸಿನಿಮಾ ಮೇಕಿಂಗ್ ಸದಾ ವಿಶೇಷಾಗಿಯೇ ಇರುತ್ತದೆ. ಎಲ್ಲೂ ಏನೂ ಬಿಟ್ಟುಕೊಡೋದೇ ಇಲ್ಲ. ಹಾಗೆ ಎಲ್ಲವನ್ನೂ ಗೌಪ್ಯವಾಗಿಯೇ ಇಟ್ಟಿರುತ್ತಾರೆ. ಸಡನ್ ಆಗಿಯೇ ಎಲ್ಲರ ಮುಂದೆ ಅದನ್ನ ರಿವೀಲ್ ಮಾಡ್ತಾರೆ. ಸರ್ಪ್ರೈಸ್ ಕೂಡ ಎಲ್ಲರಿಗೂ ಕೊಟ್ಟು ಬಿಡ್ತಾರೆ. ಇದೀಗ ಶಿಲ್ಪ ಲುಕ್ ಜನರಲ್ಲಿ ಮತ್ತಷ್ಟು ಕ್ಯುರಾಸಿಟಿ ಮೂಡಿದೆ
ಸಂಭಾವಣೆ ಎಷ್ಟು:
ಬಾಲಿವುಡ್ ಸಿನಿಮಾ ರಂಗದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಪಡೆದು ಸ್ಟಾರ್ ನಟಿಯಾಗಿ ಮೆರೆದಿದ್ದಾರೆ, ವಯಸ್ಸು 50 ಸಮೀಪಿಸಿದ್ದರು ಕೂಡ ಯಾವುದೇ ಹದಿಹರೆಯದ ಯುವ ನಟಿಗೂ ಕಡಿಮೆ ಇಲ್ಲದಂತೆ ಕ್ಯುಟ್ ಆಗೇ ಕಾಣಿಸಿಕೊಳ್ತಾರೆ, ಶಿಲ್ಪಾ ಶೆಟ್ಟಿ 17 ವರ್ಷಗಳ ನಂತರ ಇದೀಗ ಕೆಡಿ ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ, ಈ ಮೂಲಕ ಶಿಲ್ಪಾ ಈ ಚಿತ್ರಕ್ಕೆ 1 ಕೋಟಿ ಸಂಭಾವಣೆ ಪಡೆಯಲಿದ್ದಾರಂತೆ, ಕೆಡಿ ನಿರ್ದೇಶಕ ಪ್ರೇಮ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ದೊಡ್ಡ ತಾರಾಬಳಗವೇ ಇದೆ. ಬಾಲಿವುಡ್ ಸ್ಟಾರ್ ಸಂಜಯ್ ದತ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.