Karnataka Times
Trending Stories, Viral News, Gossips & Everything in Kannada

Weekend With Ramesh: ಈ ಸಲ ವೀಕೆಂಡ್ ವಿತ್ ರಮೇಶ್ ಗೆ ಬರುತ್ತಿದ್ದಾರೆ ಈ ಸ್ಪೆಷಲ್ ವ್ಯಕ್ತಿಗಳು.

Advertisement

Zee kannada ವಾಹಿನಿಯ ಹಾಗೂ ಕಿರುತೆರೆಯ ಬಿಗ್ ಶೋ ವೀಕೆಂಡ್ ವಿತ್ ರಮೇಶ್(Weekend With Ramesh) ನಾಲ್ಕು ಸೀಸನ್ ಗಳು ಬಾರಿ ಪ್ರಮಾಣದಲ್ಲಿ ಯಶಸ್ವಿಯಾಗಿದ್ದವು. ಸಿನಿಮಾ ರಂಗದಲ್ಲಿ ಮತ್ತು ಇನ್ನಿತರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದವರನ್ನು ತಂದು ಕೆಂಪು ಕುರ್ಚಿಯ ಮೇಲೆ ಕೂರಿಸಿ, ಅವರ ನೌ ಕರ್ನಾಟಕದ ಜನತೆಗೆ ಪರಿಚಯ ಮಾಡಿಸುವ ಅದ್ಭುತ ಕಾರ್ಯಕ್ರಮ ಹಾಗೂ ರಮೇಶ್ ಅರವಿಂದ್ ರವರ ನಿರೂಪಣ ಶೈಲಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವನ್ನು ಇಡೀ ಕರ್ನಾಟಕದ ಜನರು ಮೆಚ್ಚಿಕೊಳ್ಳುವಂತೆ ಮಾಡಿತ್ತು.

ಇದೀಗ ವೀಕೆಂಡ್ ವಿತ್ ರಮೇಶ್ ನ ಸೀಸನ್ 5 ಟಿವಿ ಪರದೆಯಲ್ಲಿ ಅಪ್ಪಳಿಸಲು ರೆಡಿಯಾಗಿದೆ. 5ನೇ ಸೀಸನ್ ನ ಮೊದಲ ಅತಿಥಿಯಾಗಿ ಮೋಹಕತಾರೆ ರಮ್ಯಾ(Ramya) ಅವರು ಬರಲಿದ್ದಾರೆ ಎನ್ನಲಾಗುತ್ತಿದ್ದು, ಅವರ ಸಾಧನೆಯ ಕಥೆ ಹೇಳಲು ರಮೇಶ್‌ ಅರವಿಂದ್‌ ರೆಡಿಯಾಗಿದ್ದಾರೆ. ಮೊದಲ ಅತಿಥಿಯಾಗಿ ರಮ್ಯಾ ಪಾಲ್ಗೊಂಡಿದ್ದಾರೆ ಅನ್ನೋ ಮಾಹಿತಿ ಹರಿದಾಡುತ್ತಿದೆ.ಟಿವಿ ಪರದೆಯ ಮೇಲೆ ಅದೆಷ್ಟೇ ಕಾರ್ಯಕ್ರಮಗಳು ಬಂದರೂ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಬಹಳಷ್ಟು ಸ್ಪೆಷಲ್.

ಇನ್ನು ಮುಂದೆ ಪ್ರೇಕ್ಷಕರ ಅಚ್ಚುಮೆಚ್ಚಿನ ಶೋ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಮತ್ತೆ ಕಿರುತೆರೆಯಲ್ಲಿ ಬರುತ್ತಿದೆ. ಈ ಶೋಗಾಗಿ ಕಾಯುವ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿದ್ದು. ಮಾರ್ಚ್ 25ರಿಂದ ರಾತ್ರಿ 9ಕ್ಕೆ ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರವಾಗಲಿದೆ. ಈ ಮಾಹಿತಿ ಹೊರಬಿದ್ದ ಬೆನ್ನಲ್ಲೇ ಈ ಕಾರ್ಯಕ್ರಮದಲ್ಲಿ ಯಾರೆಲ್ಲಾ ಸಾಧಕರು ಭಾಗಿಯಾಗಲಿದ್ದಾರೆ ಎಂಬ ಮಾಹಿತಿಯು ಕೂಡ ಹೊರ ಹೊಮ್ಮುತ್ತಿದೆ.

ಎಲೆಕ್ಷನ್ ಬಳಿಕ ರಾಜಕಾರಣಿಗಳು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಸೀಸನ್‌ ನ ವೀಕೆಂಡ್ ವಿತ್ ರಮೇಶ್ ನಲ್ಲಿ ಧ್ರುವ ಸರ್ಜಾ, ರಚಿತಾ ರಾಮ್, ಮಾಲಾಶ್ರೀ, ಡಾ.ಮಂಜುನಾಥ್, ಸದ್ಗುರು ಸೇರಿದಂತೆ ಹಲವು ಸಾಧಕರು ತಮ್ಮ ಸಾಧನೆಯ ಕಥೆ ಹಂಚಿಕೊಳ್ಳಲಿದ್ದಾರೆ ಎಂದು ವಾಹಿನಿಯ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರ್ ತಿಳಿಸಿದ್ದಾರೆ ಎನ್ನಲಾಗಿದೆ.ಇನ್ನೂ ಎಲೆಕ್ಷನ್ ಬಳಿಕ ರಾಜಕಾರಣಿಗಳು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಕಾಣಿಸಿಕೊಳ್ಳುತ್ತಾರೆ.ಒಟ್ಟಾರೆ ಬಹಳಷ್ಟು ವರ್ಷಗಳ ನಂತರ ವೀಕೆಂಡ್ ವಿತ್ ರಮೇಶ್ ಸೀಸನ್ ಮತ್ತೆ ಆರಂಭವಾಗಿದ್ದು ಪ್ರೇಕ್ಷಕರಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿದೆ.

Leave A Reply

Your email address will not be published.