Dr Vishnuvardhan: ರವಿಚಂದ್ರನ್ ಮಾಡಬೇಕಿದ್ದ ಈ ಸಿನೆಮಾವನ್ನು ವಿಷ್ಣುವರ್ಧನ್ ಮಾಡಿ ದಾಖಲೆ ಬರೆದಿದ್ದರು.

Advertisement
ಈ ಸಿನಿಮಾವನ್ನು (Movie)ನಾನು ಮಾಡಬೇಕಾಗಿತ್ತು ಆದರೆ ವಿಷ್ಣುವರ್ಧನ್ (Vishnuvardhan) ಅವರು ಮಾಡಿದರು ಮತ್ತು ಈ ಸಿನಿಮಾದ ಯಶಸ್ಸು (Success) ನನಗೆ ದೊರಕಬೇಕಿತ್ತು ಆದರೆ ವಿಷ್ಣುವರ್ಧನ್ ರವರು ಅಭಿನಯ ಮಾಡಿದ್ದರಿಂದ ಸಿನಿಮಾ ಇನ್ನಷ್ಟು ದೊಡ್ಡ ಮಟ್ಟಿಗೆ ಯಶಸ್ಸನ್ನು ಸಂಪಾದಿಸಲು ಕಾರಣವಾಯಿತು. ಇನ್ನು ಈ ಸಿನಿಮಾವನ್ನು ನೋಡಿದ ಮೇಲೆ ವಿಷ್ಣುವರ್ಧನ್ ಅವರು ತನಗಿಂತ ಈ ಪಾತ್ರಕ್ಕೆ (Character) ಸೂಕ್ತ ಎಂದು ತಿಳಿಯಿತು. ಈ ಸಿನಿಮಾವನ್ನು ನಿರ್ಮಾಣ ಮಾಡುವುದಾಗಿ ದ್ವಾರಕೀಶ್ (Dhwarkeesh) ಹಾಗೂ ಅವರ ಮಗ ನನ್ನ ಬಳಿ ಬಂದಾಗ ಅಂದು ಆಡಿದ ಮಾತು ಇಂದು ನೆನಪಾಗುತ್ತಿದೆ.
ಅಂದು ದ್ವಾರಕೀಶ್ ಮತ್ತು ಅವರ ಮಗ ನನ್ನ ಬಳಿ ಬಂದು ಈ ರೀತಿ ಒಂದು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದೇವೆ ಎಂದಾಗ ಸಿನಿಮಾ ಖಂಡಿತವಾಗಿಯೂ ಸಹ ಯಶಸ್ವಿಯಾಗುತ್ತದೆ ಹಾಗೂ ಈ ಸಿನಿಮಾಗೆ ವಿಷ್ಣುವರ್ಧನ್ ಅವರನ್ನು ಹಾಕಿಕೊಂಡರೆ ದೊಡ್ಡ ಮಟ್ಟಿಗೆ ಯಶಸ್ಸನ್ನು ಸಂಪಾದಿಸುತ್ತೀರಾ ಎಂದು ಹೇಳಿದ ಮಾತು ಖಂಡಿತ ನಿಜವಾಯಿತು. ಇಂದಿಗೂ ಜನರು ಆ ಸಿನಿಮಾವನ್ನು ಇಷ್ಟಪಡಲು ಪ್ರಮುಖ ಕಾರಣವೇನೆಂದರೆ ಸೌಂದರ್ಯ (Soundarya) ವಿಷ್ಣುವರ್ಧನ್ ರಮೇಶ್ (Ramesh Aravind) ಅವರ ಅಭಿನಯ ಮತ್ತು ಪಿ ವಾಸು ಅವರ ನಿರ್ದೇಶನ ಎಂದು ರವಿಚಂದ್ರನ್ ರವರು ಹೇಳಿದಾಗ ಆ ಸಿನಿಮಾ ಆಪ್ತಮಿತ್ರ (Apthamithra) ಎಂಬುದು ಎಲ್ಲರಿಗೂ ಕೂಡ ಖಂಡಿತ ತಿಳಿಯುತ್ತದೆ.
ಹೌದು ಆಪ್ತಮಿತ್ರ ಚಿತ್ರವನ್ನು ನಿರ್ಮಾಣ ಮಾಡಲು ಹೊರಟಾಗ ಆ ಸಿನಿಮಾ ಆದಾಗಲೆ ಮಳೆಯಾಳಂ ಭಾಷೆಯಲ್ಲಿ ಬಂದಿತ್ತು. ಆದರೆ ಆ ಭಾಷೆಯಲ್ಲಿ ಅಷ್ಟೇನೂ ಸದ್ದು ಮಾಡಿರಲಿಲ್ಲ. ಇನ್ನು ಮಲಯಾಳಂ (Malyalam) ಭಾಷೆಯ ಕಥೆಯನ್ನು ಕನ್ನಡದವರು ಹೇಗೆ ಸ್ವೀಕರಿಸುತ್ತಾರೆ ಎಂಬ ಸಂಶಯಗಳು ಮೂಡಿ ಬಂದಾಗ ಅದಕ್ಕೆ ಏನನ್ನು ಪ್ರತಿಕ್ರಿಯಿಸದೆ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಲು ಮುಂದಾದರು ದ್ವಾರಕೀಶ್ ರವರು. ಹೌದು ಆಪ್ತಮಿತ್ರ ಸಿನಿಮಾ ತೆರೆ ಮೇಲೆ ಬರುವುದಕ್ಕೂ ಮೊದಲೇ ಆ ಚಿತ್ರದ ನಾಯಕಿಯಾದ ಸೌಂದರ್ಯ ರವರು ವಿಧಿವಶರಾಗಿರುತ್ತಾರೆ.ಇನ್ನು ಆಪ್ತಮಿತ್ರ ಸಿನಿಮಾ ಬಿಡುಗಡೆಯಾಗುವ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರ ಮತ್ತೊಂದು ಸಿನಿಮಾ ರವಿಚಂದ್ರನ್ ರವರ ಜೊತೆ ನಟಿಸಿದ್ದ ಸಾಹುಕಾರ ಸಿನಿಮಾ ಕೂಡ ಬಿಡುಗಡೆಗೆ ಸಿದ್ಧವಾಗಿದ್ದು ಆಪ್ತಮಿತ್ರ ಸಿನಿಮಾ ಮೊದಲೆರಡು ವಾರ ಅಷ್ಟೇನೂ ಸದ್ದು ಮಾಡಲಿಲ್ಲ.
ಆದರೆ ಮಾತ್ರ ಸಿನಿಮಾ ನೋಡಿದ ಪ್ರೇಕ್ಷಕರು ಸಿನಿಮಾ ಅದ್ಭುತವಾಗಿದೆ ಎಂದು ಜನರೇ ಪ್ರಚಾರ ಮಾಡಲು ಮುಂದಾದಾಗ ಸಿನಿಮಾ ಯಶಸ್ವಿಯಾಯಿತು ಎಂದರೆ ತಪ್ಪಾಗಲಾರದು. ಇನ್ನು ಆಪ್ತಮಿತ್ರ ಸಿನಿಮಾ ಏಕೆ ಇಷ್ಟವಾಯಿತು ಎಂದರೆ ವಿಷ್ಣುವರ್ಧನ್ ರವರು ಮೊದಲ ಬಾರಿ ಮನೋಶಾಸ್ತ್ರಜ್ಞ ಪಾತ್ರದಲ್ಲಿ ಅಭಿನಯಿಸಿದ್ದು ಮತ್ತು ಸೌಂದರ್ಯ ಅವರ ನಾಗವಲ್ಲಿ ಪಾತ್ರವು ತುಂಬಾ ಇಷ್ಟವಾಗಿತ್ತು. ರವಿಚಂದ್ರನ್ ರವರೇ ಹೇಳುವ ಹಾಗೆ ತನಗಿಂತ ವಿಷ್ಣುವರ್ಧನ್ ರವರು ಈ ಪಾತ್ರವನ್ನು ಮಾಡಿದ್ದರಿಂದ ದೊಡ್ಡ ಮಟ್ಟಿಗೆ ಸಿನಿಮಾ ಯಶಸ್ವಿಯಾಗಲು ಕಾರಣವಾಯಿತು ಎಂದರೆ ಆಶ್ಚರ್ಯ ಪಡುವಂತಿಲ್ಲ ಎನ್ನಬಹುದು.