ಸಿನಿಮಾ ರಂಗದಲ್ಲಿ ಮಿಸ್ಟರ್ ಪರ್ಫೆಕ್ಟ್ ಎಂದು ಕರೆಸಿಕೊಂಡ ನಟ ಅಮೀರ್ ಖಾನ್(Amir Khan) ತನ್ನ ಎರಡನೇ ಪತ್ನಿಗೂ ವಿಚ್ಛೇದನ ನೀಡಿದ್ದಾರೆ.ಹೌದು ಅಮೀರ್ ಖಾನ್ ತನ್ನ ಎರಡನೇ ಪತ್ನಿ ಕಿರಣ್ ರಾವ್ ಗೆ(Kiran Rao) ವಿಚ್ಛೇದನ(Divorce) ನೀಡಿದ್ದಾರೆ.ಈ ಬಗ್ಗೆ ಇಬ್ಬರೂ ಕೂಡ ಹೇಳಿಕೆಗಳನ್ನು ನೀಡಿದ್ದು, 15 ವರ್ಷಗಳ ವೈವಾಹಿಕ ಜೀವನವನ್ನು ಕೊನೆಗೊಳಿಸಿದ್ದಾರೆ.ಅಮೀರ್ ಖಾನ್ ಹಾಗೂ ಕಿರಣ್ ರಾವ್ ಪರಸ್ಪರ ಒಪ್ಪಿ ಮದುವೆಯಾಗಿದ್ದು, ಅನೇಕ ಫಿಲಂ ಫಂಕ್ಷನ್ ಗಳಲ್ಲಿ ಒಟ್ಟಾಗಿಯೇ ಕಾಣಿಸಿಕೊಳ್ಳುತ್ತಿದ್ದರು. ಅಮೀರ್ ಖಾನ್ ಯಾವುದೇ ಸಿನಿಮಾ ಹಾಗೂ ಶೂಟಿಂಗ್ ವೇಳೆ ಕಿರಣ್ ರಾವ್ ಉತ್ತಮ ಸಹಕಾರವನ್ನು ನೀಡುತ್ತಿದ್ದರು.
ಆದರೆ ಈ ಜೋಡಿಯ ಮಧ್ಯೆ ಸಣ್ಣ ಪುಟ್ಟ ಬಿರುಕು ಉಂಟಾಗಿದ್ದು ಅದು ಡೈವೋರ್ಸ್ ಗೆ ಎಡೆ ಮಾಡಿಕೊಟ್ಟಿದೆ.ಈ ಬಗ್ಗೆ ಹೇಳಿಕೆ ನೀಡಿದ ದಂಪತಿಗಳು ನಾವು ಇನ್ನು ಮುಂದೆ ಪತಿ-ಪತ್ನಿಯರಾಗಿ ಇರುವುದಿಲ್ಲ. ಆದರೆ ನಮ್ಮ ಪುತ್ರನನ್ನು ಸರಿಸಮನಾಗಿ ನೋಡಿಕೊಳ್ಳುತ್ತೇವೆ ಅವನಿಗೆ ಸಿಗುವ ಯಾವುದೇ ಪ್ರೀತಿ ವಿಶ್ವಾಸದಲ್ಲಿ ಕೊರತೆಯಾಗುವುದಿಲ್ಲ ಎಂದಿದ್ದಾರೆ.
ಡಿವೋರ್ಸ್ ಗೆ ಕಾರಣ ಕೊಟ್ಟ ಅಮೀರ್ ಖಾನ್
ಖಾಸಗಿ ಸಂದರ್ಶನದಲ್ಲಿ ಮಾತಾಡಿದ ಅಮೀರ್ ತನ್ನ ಎರಡು ಡಿವೋರ್ಸ್ ಗೆ ಮುಖ್ಯ ಕಾರಣ ನೀಡಿದ್ದಾರೆ. ಸಿನೆಮಾಗಳಲ್ಲಿ ನಾನು ಹೆಚ್ಚು ಫೋಕಸ್ ನೀಡಿದ್ದರಿಂದ ಫ್ಯಾಮಿಲಿಗೆ ಸಮಯ ನೀಡಲು ನನ್ನಿಂದ ಸಾಧ್ಯವಾಗಿರಲಿಲ್ಲ, ಹೀಗಾಗಿ ಕಠಿಣ ನಿರ್ಧಾರ ತಗೆದುಕೊಂಡ ಬಗ್ಗೆ ತಿಳಿಸಿದ್ದಾರೆ ಅಮೀರ್ ಖಾನ್1986ರಲ್ಲಿ ರೀನಾ ದತ್ತರನ್ನು ಮದುವೆಯಾಗಿದ್ದು,ಅವರಿಗೆ ಇಬ್ಬರು ಮಕ್ಕಳಿದ್ದರು.ಆದ್ರೆ ಅವರಿಗೆ 2002ರಲ್ಲಿ ಪರಸ್ಪರ ವಿಚ್ಛೇದನ ಪಡೆದುಕೊಂಡಿದ್ದರು.ನಾವು ಈ ಕುರಿತಂತೆ ಸ್ವಲ್ಪ ಸಮಯದ ಹಿಂದೆಯೇ ಯೋಚಿಸಿ ನಿರ್ಧಾರ ತೆಗೆದುಕೊಂಡಿದ್ದೇವೆ. ಆದರೆ ಮಗ ಆಜಾದ್ ಬೆಳವಣಿಗೆಗೆ ನಮ್ಮ ಪ್ರೀತಿ ಕಾಳಜಿ ಮುಂದುವರೆಯಲಿದೆ ಎಂದು ಜಂಟಿ ಹೇಳಿಕೆ ನೀಡಿದ್ದಾರೆ.