R.Chandru: ಕಬ್ಜ ಬಳಿಕ ಆರ್ ಚಂದ್ರು ಅದ್ರಷ್ಟವೇ ಬದಲು, ಈ ಸುದ್ದಿ ಕೇಳಿದ್ರೆ ರಾಜಮೌಳಿ ಕೂಡ ನಡುಗುತ್ತಾರೆ
ಸದ್ಯ ಇದೀಗ 2023ರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ (Pan India) ಕಬ್ಜ(Kabza) ತೆರೆಕಂಡಿದೆ. ಇನ್ನು ನಿರ್ದೇಶಕ ಕಮ್ ನಿರ್ಮಾಪಕ (Director / Producer) ಆರ್ ಚಂದ್ರು ರವರು (R Chandru) ಸಿನಿಮಾ ಮಾಡಿರುವ ವ್ಯಾಪಾರದ ಬಗ್ಗೆ ಸಿಕ್ಕಾಪಟ್ಟೆ ಖುಷಿಯಾಗಿದ್ದು ಸಿನಿಮಾ ಬಿಡುಗಡೆಗೂ ಮುನ್ನವೇ ಲಾಭದಲ್ಲಿರೋದಾಗಿ ಹೇಳಿಕೊಂಡಿದ್ದಾರೆ. ಇನ್ನು ಕಬ್ಜ ಪಾರ್ಟ್ 1 (Kabza 1) ಬಳಿಕ ಕಬ್ಜ 2 ಗೂ (Kanza 2) ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.
ಹೌದು ಮೂರು ವರ್ಷಗಳಿಂದ ಕಬ್ಜ ಸಿನಿಮಾ ಮಾಡಿರೋ ಆರ್. ಚಂದ್ರು ಪಾರ್ಟ್ 2ಗೆ ಕೊಂಚ ಬ್ರೇಕ್ ತೆಗೆದುಕೊಳ್ಳುತ್ತಿದ್ದು ಈಗಾಗಲೇ ಕಥೆ ಮಾಡಿಕೊಂಡಿರೋ ಚಂದ್ರು ಎರಡು-ಮೂರು ವಾರಗಳ ಬಳಿಕ ಕಬ್ಜ 2 ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿದ್ದಾರೆ. ಈ ನಡುವೆ ರಾಜಮೌಳಿ (Rajamouli) ಶಂಕರ್ (Shankar) ಬನ್ಸಾಲಿ (Bansali) ಆದಮೇಲೆ ಪ್ಯಾನ್ ಇಂಡಿಯಾದಲ್ಲಿ ನನಗೂ ಬೇಡಿಕೆ ಇದೆ ಎಂದಿದ್ದಾರೆ.
ಸದ್ಯ ನನಗೂ ಈಗ ಪ್ಯಾನ್ ಇಂಡಿಯಾದಲ್ಲಿ ಮಾರ್ಕೆಟ್ ಇದೆ ಎಂದಿರುವ ಆರ್ ಚಂದ್ರು ಸಾಕಷ್ಟು ಜನ ಈಗ ನಮ್ ಬ್ಯಾನರ್ ನಲ್ಲಿ ಸಿನಿಮಾ ಮಾಡಿ ಕೊಡಿ ಎಂದು ಕೇಳುತ್ತಿದ್ದಾರೆ. ಅಲ್ಲದೆ ನಿಮ್ಮ ಬ್ಯಾನರ್ ನಲ್ಲಿ ಬೇರೆ ಸಿನಿಮಾ ಮಾಡಿ ಅಂತ ನನಗೂ ಆಫರ್ ಮಾಡಿದ್ದಾರೆ. ಈಗ ನಾನಾಗಲೇ ನಾಲ್ಕು ಕಥೆ ಕೂಡ ಕೇಳಿದ್ದೇನೆ. ಒಟ್ನಲ್ಲಿ ಕನ್ನಡ ಸಿನಿಮಾ ಬೆಳೆಯಬೇಕು ಎಂದಿದ್ದಾರೆ ಆರ್ ಚಂದ್ರು.
ಇನ್ನು ಮಾತು ಮುಂದುವರಿಸಿದ ಅವರು ಕಂಟೆಂಟ್ ಮತ್ತು ವಿಶ್ಯೂಲ್ಸ್ ಬಿಟ್ರೆ ಇನ್ನೇನು ನೋಡಲ್ಲ. ನಾನು ಮುಂಬೈಗೆ ಹೋಗಿ ಮಾರ್ಕೆಟ್ ನ ಸ್ಟಡಿ ಮಾಡಿಕೊಂಡು ಬಂದಾಗ ಅವರಿಗೆ ಇಂಡಿಯಾದಲ್ಲಿ ನಾಲ್ಕೇ ಜನ ಕಂಟೆಂಟ್ ಕ್ರಿಯೇಟ್ ಮಾಡೋದು ದೊಡ್ಡ ದೊಡ್ಡ ಮೇಕಿಂಗ್ ಮಾಡೋದು ಗೊತ್ತಿರುವುದು. ಹೌದು ರಾಜಮೌಳಿ ಶಂಕರ್ ಸಂಜಯ್ ಲೀಲಾ ಬನ್ಸಾಲಿ ಅಂತ ಫಿಕ್ಸ್ ಆಗಿದ್ದಾರೆ.. ಅವರೇನೆ ಮಾಡಿದ್ರು 800 ಕೋಟಿ ಕೊಡಬೇಕು ಎಂದು ಫಿಕ್ಸ್ ಆಗಿದ್ದಾರೆ.. ಈಗ ನನಗೂ ಬೇಡಿಕೆ ಇದೆ ಎಂದಿದ್ದಾರೆ ಆರ್ ಚಂದ್ರು.
ಇನ್ನು ಶಿವರಾಜ್‌ಕುಮಾರ್ ಜೊತೆ ಕಥೆಯ ಬಗ್ಗೆ ನಿರ್ದೇಶಕ ಆರ್ ಚಂದ್ರು ಚರ್ಚೆ ಮಾಡಬೇಕಿದ್ದು ಇತ್ತ ಶಿವಣ್ಣ ಸಿನಿಮಾ ನೋಡಿದ ಬಳಿಕ ಕಬ್ಜ 2ನಲ್ಲಿ ನಟಿಸಬೇಕಾ? ಬೇಡ್ವಾ ಅನ್ನೋದನ್ನು ನಿರ್ಧಾರ ಮಾಡುವ ಸಾಧ್ಯತೆ ಇದೆ. ಇನ್ನು ಇದೇ ವೇಳೆ ಯಶ್ ಹಾಗೂ ಪವನ್ ಕಲ್ಯಾಣ್ ಹೆಸರುಗಳು ಓಡಾಡುತ್ತಿವೆ. ಅಲ್ಲದೆ ಬಾಲಿವುಡ್‌ನ ಸೂಪರ್‌ಸ್ಟಾರ್ ಒಬ್ಬರು ನಟಿಸುತ್ತಾರೆ ಅನ್ನೋ ಸುದ್ದಿನೂ ಓಡಾಡಿತ್ತು.
ಈ ಎಲ್ಲಾ ಸುದ್ದಿಗಳ ಬಗ್ಗೆ ಆರ್ ಚಂದ್ರು ಹೇಳಿದ್ದಿಷ್ಟು.ಶಿವಣ್ಣ ಬಂದ್ಮೇಲೆ ಕಥೆ ಬಗ್ಗೆ ಚರ್ಚೆ ಮಾಡ್ತೀವಿ. ಸ್ವಲ್ಪ ಸಮಯ ಕೊಡಿ. ಪಾರ್ಟ್ 1 ಏನು ನೋಡಿದ್ದೀರಿ. ಪಾರ್ಟ್ 2 ನೆಕ್ಸ್ಟ್ ಲೆವೆಲ್‌ಗೆ ಕೊಡುವ ಎಲ್ಲಾ ಪ್ರಯತ್ನ ಮಾಡುತ್ತೇನೆ. ಕಬ್ಜ 2 ನಿಮ್ಮ ಜೊತೆ ಮಾತಾಡಿಯೇ ಮುಂದಕ್ಕೆ ಹೋಗುತ್ತೇನೆ. ಮುಚ್ಚು ಮರೆ ಏನೂ ಮಾಡಲ್ಲ. ತಲೆಯಲ್ಲಿ ಇರೋದು ಇತ್ತು ಹೇಳುತ್ತೇನೆ . ಆದರೆ, ನಾಳೆ ಏನೋ ಬದಲಾವಣೆ ಆಗುತ್ತೆ. ಇವೆಲ್ಲ ಅದಕ್ಕೆನೇ ಈಗ ಬೇಡ ಎಂದಿದ್ದಾರೆ ಆರ್. ಚಂದ್ರು.