R.Chandru: ಯಶ್ ಹಾಗೂ ದರ್ಶನ್ ಜೊತೆ ಸಿನಿಮಾ ಮಾಡುತ್ತೀರಾ ಕೇಳಿದ್ದಕ್ಕೆ ನಿರ್ದೇಶಕ ಆರ್ ಚಂದ್ರು ಉತ್ತರ ಹೀಗಿತ್ತು

Advertisement
ರಿಯಲ್ ಸ್ಟಾರ್ ಉಪೇಂದ್ರ(Real Star Upendra) ನಟನೆಯ ಕಬ್ಜ(Kabzaa) ಸಿನಿಮಾ ಯಶಸ್ಸುಗಳಿಸುತ್ತಿರುವ ಬೆನ್ನಲ್ಲೇ ಕಬ್ಜ ಸಿನಿಮಾ ನಿರ್ದೇಶಕ ಆರ್ ಚಂದ್ರು(R.Chandru) ಸಂದರ್ಶನ ಒಂದರಲ್ಲಿ ಯಶ್ ಹಾಗೂ ದರ್ಶನ್ ಜೊತೆಗೆ ಸಿನಿಮಾ ಮಾಡುವುದರ ಕುರಿತು ಮಾತನಾಡಿದ್ದಾರೆ.ಕಬ್ಜ ಸಿನಿಮಾ ನಿರ್ದೇಶನದ ನಂತರ ಆರ್ ಚಂದ್ರುವಿಗೆ ಎಲ್ಲೆಡೆಯಿಂದ ಸಕ್ಕತ್ ರೆಸ್ಪಾನ್ಸ್ ಸಿಕ್ಕಿದೆ.ಪ್ಯಾನ್ ಇಂಡಿಯಾ ಸಿನಿಮಾ(Pan India Movie) ಮಾಡಿ ಯಶಸ್ವಿಯಾಗಿರುವ ಆರ್ ಚಂದ್ರು ಬಳಿ ಸಂದರ್ಶಕರೊಬ್ಬರು ಕೆಜಿಎಫ್ ನಿಮ್ಮ ಇನ್ಸ್ಪಿರೇಷನ್(Inspiration) ಎಂದು ಸದಾಕಾಲ ಹೇಳುತ್ತೀರ. ಯಶ್(Yash) ಜೊತೆ ಸಿನಿಮಾ ಮಾಡುತ್ತೀರಾ ಎಂದು ಕೇಳಿದ್ದಾರೆ.
ಇದಕ್ಕೆ ಆರ್ ಚಂದ್ರು ಒಳ್ಳೆಯ ಸಿನಿಮಾಗಳನ್ನು ಯಾರು ಮಾಡಿದರೂ ನಾನು ಅದನ್ನು ಮೆಚ್ಚುತ್ತೇನೆ ಅವುಗಳನ್ನು ನೋಡಿ ಕಲಿಯುತ್ತೇನೆ. ಯಶ್ ಹಾಗೂ ದರ್ಶನ್ ಯಾರೇ ಉತ್ತಮ ಸಿನಿಮಾಗಳನ್ನು ಮಾಡಿದರೆ ಅದರಿಂದ ಕಲಿಯುವುದು ಸಾಕಷ್ಟು ಇರುತ್ತದೆ.ಬಹು ಕೋಟಿ ವೆಚ್ಚದ ಹಾಗೂ ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದು ಎಷ್ಟು ಕಷ್ಟ ಅಂತ ನನಗೆ ಗೊತ್ತು. ಕೆಜಿಎಫ್ ನವರು ಅಷ್ಟು ಕಷ್ಟಪಟ್ಟ ಕಾರಣಕ್ಕಾಗಿ ದೇಶದ ಜನರು ಕೆಜಿಫ್(KGF) ಅನ್ನು ಮೆಚ್ಚಿಕೊಂಡಿದ್ದಾರೆ. ಅದೇ ಕಾರಣಕ್ಕೆ ನಾನು ಕೂಡ ಮೆಚ್ಚಿಕೊಂಡಿದ್ದೇನೆ.
ಉತ್ತಮ ಸಿನಿಮಾವನ್ನು ಯಾರೇ ಮಾಡಿದರು ಅದರಿಂದ ಕಲಿಯುವುದು ಬಹಳಷ್ಟು ಇರುತ್ತದೆ ಎಂದಿದ್ದಾರೆ.ಕಬ್ಜ ಸಿನಿಮಾ ಗೆ ರಾಜ್ಯದ ಜನರು ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಶಿವಣ್ಣನ ಎಂಟ್ರಿ ಅನ್ನು ನೋಡಿದ ಜನರು ಕಬ್ಜ ಯಾವಾಗ ಎಂದು ಕೇಳುತ್ತಿದ್ದಾರೆ. ಸದ್ಯ ಶಿವಣ್ಣ ಬೇರೆ ಸಿನಿಮಾ ಶೂಟಿಂಗ್ ನಲ್ಲಿ ಬಿಸಿಯಾಗಿದ್ದು ಅವರು ಬಂದ ತಕ್ಷಣ ನರ್ತಕಿ ಥಿಯೇಟರ್ ಗೆ ಕರೆದುಕೊಂಡು ಹೋಗಿ ಸಿನಿಮಾ ತೋರಿಸುತ್ತೇವೆ. ಆನಂತರ ಅವರೊಂದಿಗೆ ಕಬ್ಜ 2 ಚಿತ್ರದ ಕುರಿತು ಮಾತನಾಡಲಾಗುತ್ತದೆ ಎಂದು ಹೇಳಿದ್ದಾರೆ.