ಕಾಂತಾರ (Kantara) ಸಿನೆಮಾ ಮೊದಲಿಂದಲೂ ಸಾಕಷ್ಟು ಹೆಸರು ತಂದು ಕೊಟ್ಟ ಸಿನೆಮಾ ಎನ್ನಬಹುದು. ಈಗಂತೂ ನಟ ರಿಷಭ್ ಶೆಟ್ಟಿ (Rishab Sheety) ಅವರು ಡಿವೈನ್ ಸ್ವಾರ್ ಆಗಿ ಹಲವಾರು ಕಾರ್ಯಕ್ರಮದಲ್ಲಿ ಮಿಂಚುತ್ತಿದ್ದಾರೆ. ಅದೇ ರೀತಿ ಕಾಂತಾರ ಸಿನೆಮಾ ಯಶಸ್ಸಿನ ಬಳಿಕ ಎಲ್ಲೆಡೆ ಭಾಗ 2 ಮಾತು ಎನ್ನಬಹುದು. ಅದೇ ರೀತಿ ಯುಗಾದಿ ಹಬ್ಬದ ಶುಭದಿನದಂದು ಈ ಸಿನೆಮಾದ ಬಗ್ಗೆ ಬಿಗ್ ಅಪ್ಡೆಟ್ ಸಿಕ್ಕಿದೆ.
ಸಂಚಲನ ಹುಟ್ಟಿಸಿದ ಕಾಂತಾರ ಭಾಗ ಎರಡರ ಬಿಗ್ ಅಪ್ಡೇಟ್:
ರಿಷಭ್ ಶೆಟ್ಟಿ (Rishabh Shetty) ಅವರು ಸದ್ಯ ಕಾಂತಾರ ಭಾಗ ಎರಡು ಮಾಡುತ್ತಾರೆ ಎಂಬ ಸುದ್ದಿ ಇತ್ತು ಆದರೆ ಈ ಸುದ್ದಿ ಈಗ ನಿಜ ಆಗುತ್ತಿದೆ. ಇದರ ಬಗ್ಗೆ ನಟ ರಿಷಭ್ ಅವರೇ ಮಾಹಿತಿಯೊಂದನ್ನು ಹೊರ ಹಾಕಿದ್ದಾರೆ. ಅವರು ತಮ್ಮ ಇನ್ಟ್ರಾಗ್ರಾಂ ಖಾತೆಯಲ್ಲಿ ಬಿಗ್ ಅಪ್ಡೇಟ್ ಒಂದನ್ನು ನೀಡಿದ್ದು ರಿಷಭ್ ಶೆಟ್ಟಿ ಒಂದು ತಂಡದೊಂದಿಗೆ ಇದ್ದು ಅದರ ಬಗ್ಗೆ ವಿವರಿಸಿದ್ದಾರೆ.
ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು ಈ ಹಬ್ಬದ ಸುಸಂದರ್ಭದಲ್ಲಿ ಕಾಂತಾರ ಭಾಗ ಎರಡರ ಬರವಣಿಗೆ ಸಿದ್ಧವಾಗುತ್ತಿದೆ ಎಂದು ಹೇಳಲು ಖುಷಿ ಪಡುವೆ. ಪ್ರಕೃತಿ ಜೊತೆಗಿನ ಮಾನವ ಸಂಬಂಧ ಹೊರುವ ಇನ್ನೊಂದು ಕತೆಯೊಂದಿಗೆ ನಿಮ್ಮನ್ನು ರಂಜಿಸಲಿದ್ದೇವೆ , ನಿಮ್ಮೆಲ್ಲರ ಆಶೀರ್ವಾದ ಹೀಗೆ ಸದಾ ಇರಲಿ ಎಂದು ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಎಲ್ಲ ಅವರ ಅಭಮಾನಿಗಳು ಖುಷಿಯನ್ನು ವ್ಯಕ್ತಪಡಿಸುತ್ತಿದ್ದಾರೆ.
ರಿಷಭ್ ಪೋಸ್ಟ್ ವೈರಲ್:
ರಿಷಭ್ ಅವರು ಈ ಪೋಸ್ಟ್ ಕೆಲವೇ ಗಂಟೆಯಲ್ಲಿ ವೈರಲ್ ಆಗಿದ್ದು ಆ ಪೋಸ್ಟ್ ನಲ್ಲಿ ಅವರು ಕಾಂತಾರ ಸಿನೆಮಾ ತಂಡದವರನ್ನು ಟ್ಯಾಗ್ ಮಾಡಿದ್ದಾರೆ. ಅದೇ ರೀತಿ ನಿರೀಕ್ಷೆಯೆ ಇಲ್ಲದೇ ಕಾಂತಾರ ಭಾಗ ಒಂದು ತುಂಬಾ ದೊಡ್ಡ ಮಟ್ಟದ ಯಶಸ್ಸನ್ನು ಪಡೆದಿದ್ದು ಭಾಗ ಎರಡರ ಬಗ್ಗೆ ನಿರೀಕ್ಷೆ ಈಗ ಅಧಿಕವಿದೆ ಎಂದೇ ಹೇಳಬಹುದು. ಆದರೆ ಈ ಸಿನೆಮಾ ಸ್ವಲ್ಪ ಎಳೆ ತಪ್ಪಿದರೂ ಜನರಿಗೆ ಸಿನೆಮಾ ಕುತೂಹಲ ಮಾಯವಾಗುವ ಸಾಧ್ಯತೆ ಇದೆ. ಈ ಎಲ್ಲ ಅಂಶ ಗಮನದಲ್ಲಿ ಇಟ್ಟುಕೊಂಡು ಮುನ್ನಡೆಯುವುದು ಅತಿ ಅಗತ್ಯ ಎನ್ನಬಹುದು.
View this post on Instagram