Ramesh Aravind: ಈ ಬಾರಿಯ ಸಾಧಕರ ಶೋ ನಡೆಸಿಕೊಡಲು ರಮೇಶ್ ಅರವಿಂದ್ ಜಗೆ ಜೀ ವಾಹಿನಿ ಕೊಟ್ಟ ಸಂಭಾವನೆ ಇಲ್ಲಿದೆ

Advertisement
ನಮ್ಮ ಕರುನಾಡ ಕನ್ನಡಿಗರ ನೆಚ್ಚಿನ ಕಾರ್ಯಕ್ರಮವಾದ ವೀಕೆಂಡ್ ವಿಥ್ ರಮೇಶ್ (Weekend With Ramesh) ಇನ್ನು ಕೆಲವೇ ದಿನಗಳಲ್ಲಿ ಮತ್ತೆ ಅದ್ದೂರಿಯಾಗಿ ಬರುತ್ತಿದ್ದು ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮವನ್ನ ನೋಡಲು ಕನ್ನಡಿಗರು (Kannadigas) ತುದಿಗಾಲಿನಲ್ಲಿ ಕಾಯುತ್ತಿದ್ದಾರೆ ಎನ್ನಬಹುದು. ಇದೇ ಮಾರ್ಚ್ 25 ರಂದು ವೀಕೆಂಡ್ ವಿಥ್ ರಮೇಶ್ ನಿಮ್ಮ ಮನೆಯಲ್ಲಿ ಪ್ರಸಾರವಾಗಲಿದ್ದು ಸದ್ಯ ಈಗಾಗಲೇ ವೀಕೆಂಡ್ ವಿಥ್ ರಮೇಶ್ ನಾಲ್ಕು ಸೀಸನ್ ಗಳು ಮುಗಿದಿದ್ದು ಸಾಕಷ್ಟು ಸಾಧಕರ ಪರಿಚಯವನ್ನು ಕನ್ನಡದ ಖ್ಯಾತ ನಟ ರಮೇಶ್ ಅರವಿಂದ್ (Ramesh Aravind) ಅವರು ತಮ್ಮ ನಿರೂಪಣೆಯ ಮೂಲಕ ಕನ್ನಡಿಗರಿಗೆ ಪರಿಚಯಿಸಿದ್ದರು.
ಇನ್ನು ತಮ್ಮ ನಿರೂಪಣಾ ಶೈಲಿಯ ಮೂಲಕ ನಟ ರಮೇಶ್ ರವರು ಮತ್ತಷ್ಟು ಖ್ಯಾತಿ ಪಡೆದಿದ್ದು ನಟ ರಮೇಶ್ ರವರು ವೀಕೆಂಡ್ ವಿಥ್ ರಮೇಶ್ ನ ಪ್ರತಿ ಸಂಚಿಕೆಗೆ 50 ರಿಂದ 70 ಸಾವಿರ ಹಣ ಪಡೆಯುತ್ತಾರೆ ಎನ್ನಲಾಗುತ್ತಿದೆ. ಹೌದು ಇದೊಂದು ಅಂದಾಜು ಸಂಭಾವನೆ ಆಗಿದ್ದು ರಮೇಶ್ ಅರವಿಂದ್ ಅವರ ಸಂಭಾವನೆಯ ಬಗ್ಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. ಇನ್ನು ಈ ಸೀಸನ್ ಪ್ರಾರಂಭಕ್ಕೂ ಮುನ್ನ ನಿರೂಪಕ ರಮೇಶ್ ಅರವಿಂದ್ ಹಾಗೂ ಜೀ ವಾಹಿನಿಯ ಚೀಫ್ ಕಂಟೆಂಟ್ ಆಫೀಸರ್ ರಾಘವೇಂದ್ರ ಹುಣಸೂರು ರವರು ಪತ್ರಿಕಾಗೋಷ್ಠಿ ನಡೆಸಿ ಶೋ ಕುರಿತಾಗಿ ಮಾಹಿತಿ ನೀಡಿದ್ದು ಮೊದಲ ಸಂಚಿಕೆಗವ ಅತಿಥಿ ಯಾರಾಗಲಿದ್ದಾರೆ ಎಂಬುದರ ಜೊತೆಗೆ ಈ ಸೀಸನ್ನಲ್ಲಿ ಕಾಣಿಸಿಕೊಳ್ಳುವ ಇತರೆ ಕೆಲವು ಅತಿಥಿಗಳ ಹೆಸರನ್ನು ಕೂಡ ಬಹಿರಂಗಪಡಿಸಿದ್ದಾರೆ.
ಇನ್ನು ಇಷ್ಟು ದಿನ ಹರಿದಾಡಿದ್ದ ಸುದ್ದಿಯ ಪ್ರಕಾರ ಮೊದಲ ಸಂಚಿಕೆಯಲ್ಲಿ ರಿಷಬ್ ಶೆಟ್ಟಿ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದ್ದು ಆದರೆ ಅದು ಸುಳ್ಳಾಗಿದ್ದು ಮೊದಲ ಸಂಚಿಕೆಗೆ ಸ್ಯಾಂಡಲ್ವುಡ್ ಕ್ವೀನ್ ನಟಿ ರಮ್ಯಾ ಅತಿಥಿಯಾಗಿ ಭಾಗಿಯಾಗಲಿದ್ದಾರೆ. ಹೌದು ರಮ್ಯಾ ಜೊತೆಗಿನ ಎಪಿಸೋಡ್ನ ಚಿತ್ರೀಕರಣ ಮಾರ್ಚ್ 21 ರಿಂದ ಪ್ರಾರಂಭವಾಗಿದ್ದು ಎರಡನೇ ಎಪಿಸೋಡ್ ನಲ್ಲಿ ಡ್ಯಾನ್ಸ್ ಲಿಜೆಂಡ್ ಪ್ರಭುದೇವ ಸಾಧಕರ ಕುರ್ಚಿಯ ಮೇಲೆ ಕೂರಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಈ ಸೀಸನ್ನಲ್ಲಿ ನಟ ಧ್ರುವ ಸರ್ಜಾ ನಟಿ ರಚಿತಾ ರಾಮ್ ನಟಿ ಮಾಲಾಶ್ರೀ ಇಶಾ ಫೌಂಡೇಶನ್ನ ಜಗ್ಗಿ ವಾಸುದೇವ್ ಖ್ಯಾತ ಹೃದ್ರೋಗ ತಜ್ಞ ಮಂಜುನಾಥ್ ಸೇರಿದಂತೆ ಇನ್ನೂ ಹಲವರು ಅತಿಥಿಗಳಾಗಿ ಭಾಗವಹಿಸಲಿದ್ದು ವಿಶೇಷವೆಂದರೆ ಇನ್ನು 16 ಸಾಧಕರ ಬಳಿಕ ನೂರನೇ ಸಾಧಕರು ಬರಲಿದ್ದು ಆ ಸಂಚಿಕೆಗೆ ಬಹಳ ವಿಶೇಷ ಅತಿಥಿಯೊಬ್ಬರು ಸಾಧಕರ ಕುರ್ಚಿ ಏರಲಿದ್ದಾರೆ. ನೂರನೇ ಎಪಿಸೋಡ್ಗೆ ಬರುವ ಅತಿಥಿ ಆ ಚೇರ್ಗೆ ನ್ಯಾಯ ಕೊಡಲಿದ್ದಾರೆ ಎಂದಿದ್ದಾರೆ ನಟ ರಮೇಶ್ ರವರು.