Karnataka Times
Trending Stories, Viral News, Gossips & Everything in Kannada

Malashree Daughter: ಡಿಬಾಸ್ ಜೊತೆ ಮೊದಲ ಚಿತ್ರ ಕಾಟೇರ ಗೆ ಮಾಲಾಶ್ರೀ ಮಗಳ ಸಂಭಾವನೆ ಇಲ್ಲಿದೆ.

Advertisement

ಕನ್ನಡ ಚಿತ್ರರಂಗದ (Kannada Filim Industry) ಕನಸಿನ ರಾಣಿ ಆಕ್ಷನ್ ಕ್ವೀನ್ ಎಂದರೆ ಮಾಲಾಶ್ರೀ (Malashree) ಯವರು. ಸದ್ಯ ಇದೀಗ ಇವರ ಪುತ್ರಿ ರಾಧನಾ ರಾಮ್ (Radhana Ram) ರವರು ಕೂಡ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿರುವುದು ಹೊಸ ವಿಷಯವೇನಲ್ಲ ಬಿಡಿ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಜೊತೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದು ಆ ಚಿತ್ರವೇ ಕಾಟೇರ (Katera).

ಸದ್ಯ ನಟ ದರ್ಶನ್ ರವರು ಅಭನಯಿಸುತ್ತಿರುವ 56ನೇ ಸಿನಿಮಾ ಇದಾಗಿದ್ದು ತರುಣ್ ಸುಧೀರ್ (Tharun Sudhir) ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ದರ್ಶನ್ ಪಂಚೆಯುಟ್ಟು ರಗಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಇದೂವರೆಗೂ ಕೂಡ ನಾಯಕಿ ರಾಧನಾ ರಾಮ್ (Radhana Ram) ರವರ ಲುಕ್ ಅನ್ನು ಬಿಟ್ಟುಕೊಟ್ಟಿರಲಿಲ್ಲ. ಸದ್ಯ ಯುಗಾದಿ (Ugadi) ಹಬ್ಬದ ಈ ವಿಶೇಷ ಸಂದರ್ಭದಲ್ಲಿ ಕಾಟೇರದ ರಾಧನಾ ರಾಮ್ ಲುಕ್ ಅನ್ನು ಚಿತ್ರತಂಡ ರಿವೀಲ್ ಮಾಡಿದೆ.

ಇನ್ನು ಯುಗಾದಿ ಹಬ್ಬಕ್ಕೆ ಇಬ್ಬರು ಸ್ಯಾಂಡಲ್‌ವುಡ್‌ಗೆ (Sandalwood) ಎಂಟ್ರಿ ಕೊಟ್ಟಿದ್ದು ಕೆಡಿ ಚಿತ್ರಕ್ಕಾಗಿ ಶಿಲ್ಪಾ ಶೆಟ್ಟಿ (Shilpa Shetty) ಸತ್ಯವತಿ ಅವತಾರವೆತ್ತಿದರೆ ಇತ್ತ ಮಾಲಾಶ್ರೀ ರವರ ಪುತ್ರಿ ಕಾಟೇರದಲ್ಲಿ ಪ್ರಭಾವತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು ಪಕ್ಕಾ ರಗಡ್ ಹಳ್ಳಿ ಹುಡುಗಿ ಅವತಾರದಲ್ಲಿ ರಾಧನಾ ರಾಮ್ ರವರು ಲುಕ್ ಕೊಟ್ಟಿದ್ದು ಮಾಲಾಶ್ರೀ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಇನ್ನು ಜೂ.ಕನಸಿನ ರಾಣಿಗೆ ಪರ್ಫೆಕ್ಟ್ ಸ್ಟಾರ್ಟ್ ಸಿಕ್ಕಿದ್ದು ಕನ್ನಡದ ಸೂಪರ್‌ಸ್ಟಾರ್ ದರ್ಶನ್ ರವರ ಜೊತೆಗೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇನ್ನು ರಾಕ್‌ಲೈನ್ ವೆಂಕಟೇಶ್ (Rockline Venkatesh) ಅಂತ ಸ್ಟಾರ್ ನಿರ್ಮಾಪಕರ ಸಿನಿಮಾ ತರುಣ್ ಸುಧೀರ್ ರಂತಹ ಸಕ್ಸಸ್‌ಪುಲ್ ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ಈ ಎಲ್ಲಾ ಕಾರಣಕ್ಕೆ ರಾಧನಾ ರಾಮ್ ಎಂಟ್ರಿ ಪರ್ಫೆಕ್ಟ್ ಎಂದು ಸ್ಯಾಂಡಲ್‌ವುಡ್ ಮಂದಿ ಹೇಳುತ್ತಿದ್ದಾರೆ.

ಇನ್ನು ಮಾಲಾಶ್ರೀ ತಮ್ಮ ಮಗಳನ್ನು ದಿಢೀರನೇ ಚಿತ್ರರಂಗಕ್ಕೆ ಕರೆದುಕೊಂಡು ಬಂದಿಲ್ಲ. ಹೌದು ಕಳೆದ ನಾಲ್ಕೈದು ವರ್ಷಗಳಿಂದ ಪೂರ್ವ ತಯಾರಿ ನಡೆಸಿದ್ದು ಅಭಿನಯ ಕಲಿಯಲು ಬೇಕಾಗಿರೋ ತರಬೇತಿಯನ್ನು ಮಗಳಿಗೆ ಕೊಡಿಸಿದ್ದಾರೆ. ಇನ್ನು ಮುಂಬೈನಲ್ಲಿ ಎರಡು ವರ್ಷ ನಟನೆಗೆ ಟ್ರೈನಿಂಗ್ ಪಡೆದುಕೊಂಡಿದ್ದು ಹೀಗೆ ಪೂರ್ವ ಸಿದ್ಧತೆ ಮಾಡಿಕೊಂಡು ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.

ಇನ್ನು ಮೂಲಗಳಿಂದ ತಿಳಿದುಬಂದಿರುವ ಮಾಹಿತಿ ಪ್ರಕಾರ ಮಾಲಾಶ್ರೀ ಯವರ ಮಗಳು ರಾಧಾನಾ ರಾಮ್ ಅವರು ತಮ್ಮ ಮೊದಲ ಚಿತ್ರಕ್ಕೆ ಬರೋಬ್ಬರಿ 25 ರಿಂದ 28 ಲಕ್ಷ ರೂಪಾಯಿ ಸಂಭಾವನೆಯನ್ನ ಪಡೆದುಕೊಂಡಿದ್ದಾರೆ. ಇದು ಅವರ ಮೊದಲ ಚಿತ್ರವಾಗಿದ್ದು ಮೊದಲ ಚಿತ್ರಕ್ಕೆ ಬಹಳ ದೊಡ್ಡ ಮೊತ್ತದ ಸಂಭಾವನೆಯನ್ನ ರಾಧಾನಾ ರಾಮ್ ಅವರಿಗೆ ಕೊಡಲಾಗುತ್ತಿದೆ.

Leave A Reply

Your email address will not be published.