Karnataka Times
Trending Stories, Viral News, Gossips & Everything in Kannada

Ravichandran: ಈ ಒಬ್ಬ ನಟಿ ಶೂಟಿಂಗ್ ಬರಲಿ ಎಂದು ರವಿಚಂದ್ರನ್ ತನ್ನ ಇಡೀ ಸಿನೆಮಾವನ್ನು ನಿಲ್ಲಿಸಿದ್ದರು.

ನಟ ವಿ ರವಿಚಂದ್ರನ್ (V Ravichandran) ಮತ್ತು ಸೌಂದರ್ಯ (Soundarya) ನಟನೆಯ ಸೂಪರ್ ಹಿಟ್ ಸಿನಿಮಾ ಎಂದರೆ ಸಿಪಾಯಿ (Sipayi) ಸಿನಿಮಾ. ಹೌದು ಈ ಚಿತ್ರದ ಮೂಲಕ ಪ್ರಪ್ರಥಮ ಬಾರಿಗೆ ಎರಡು ಸ್ಟಾರ್ ಜೋಡಿಗಳು ಒಂದಾಗಿ ತೆರೆ ಹಂಚಿಕೊಂಡಿದ್ದು ಈ ಸಿನಿಮಾ ಅದೆಷ್ಟೋ ರವಿಚಂದ್ರನ್ ಮತ್ತು ಸೌಂದರ್ಯ ಅಭಿಮಾನಿಗಳ (Fans) ಫೇವರೆಟ್ ಎಂದರೂ ಕೂಡ ತಪ್ಪಾಗಲಾರದು. ಇನ್ನು ಹೀಗಿರುವಾಗ ಚಿತ್ರದ ಶೂಟಿಂಗ್ (Movie Shooting) ಸಂಪೂರ್ಣ ಮುಗಿದಿದ್ದು ಇನ್ನೇನು ಚಿತ್ರ ತೆರೆಕಾಣಬೇಕು (Release) ಎಂದಿದ್ದಾಗ ರವಿಚಂದ್ರನ್ ರವರು ಒಮ್ಮೆ ಸಿನಿಮಾವನ್ನು ನೋಡುತ್ತಿದ್ದಾಗ ಸಿನಿಮಾದ ಕೆಲವು ದೃಶ್ಯಗಳು (Scenes) ಹಾಗೂ ಬಂಗಾರದ ಬೊಂಬೆ ನನ್ನ ಹಾಡು ಕೇಳಮ್ಮ ಹಾಡಿನ ಕೆಲವು ಶಾರ್ಟ್ ಗಳು ಚೆನ್ನಾಗಿ ಬಂದಿರಲಿಲ್ಲ.

Advertisement

ಇದನ್ನು ಸರಿಪಡಿಸಲೇಬೇಕು ನನಗೆ ಇದು ಇಷ್ಟವಾಗುತ್ತಿಲ್ಲ. ಸಿನಿಮಾ ಎಂದರೆ ಅಲ್ಲಿ ಅಚ್ಚುಕಟ್ಟು ತನ ಇರಬೇಕು ಎಂಬ ಭಾವನೆ ರವಿ ಚಂದ್ರನವರ ಮನಸ್ಸಿನಲ್ಲಿ ಮೂಡುತ್ತದೆ ಮತ್ತು ಈ ಕುರಿತು ಸಿಪಾಯಿ ಸಿನಿಮಾ ತಂಡದವರ ಜೊತೆ ಕೂಡ ಮಾತನಾಡುತ್ತಾರೆ.ಇನ್ನು ಎಲ್ಲರೂ ರವಿಚಂದ್ರನ್ ರವರ ಈ ಒಂದು ನಡೆಯನ್ನು ಒಪ್ಪಿಕೊಂಡಿದ್ದು ಅದರಂತೆ ಸೌಂದರ್ಯ ರವರನ್ನು ಭೇಟಿ ಮಾಡಿ ಮತ್ತೊಮ್ಮೆ ಈ ದೃಶ್ಯಗಳ ಸರಿ ಪಡಿಸುವಿಕೆಯಲ್ಲಿ ಸಹಾಯ ಮಾಡುವಿರಾ ಎಂದು ರವಿಚಂದ್ರನ್ ರವರನ್ನ ಕೇಳುತ್ತಾರೆ. ಆಗಿನ ಕಾಲದಲ್ಲಿ ಉತ್ತುಂಗದ ಶಿಖರದಲ್ಲಿ ಇದ್ದಂತಹ ನಟಿ ಸೌಂದರ್ಯ ರವರು ಕೊಂಚ ಅಳುಕುತನದಿಂದಲೇ ನಾನೇನು ಮಾಡಲಿ ನನಗೆ ಬೇರೆ ಸಿನಿಮಾಗಳ ಡೇಟ್ಸ್ ಬುಕ್ ಆಗಿವೆ ಎಂದು ಬಿಡುತ್ತಾರೆ.

Advertisement

ಒಂದು ತಿಂಗಳವರೆಗೂ ಕೂಡ ನಾನು ಫ್ರೀ ಇರುವುದಿಲ್ಲ ಬಳಿಕ ಮಾಡಿಕೊಡುತ್ತೇನೆ ಎನ್ನುತ್ತಾರೆ. ಆಗ ನನಗೆ ಜಾಸ್ತಿ ಸಮಯ ಬೇಡ ಕೆಲವೇ ಕೆಲವು ಗಂಟೆಗಳು ಸಾಕು ಎಂದು ರವಿಚಂದ್ರನವರು ಕೇಳಿಕೊಂಡಾಗ ಸೌಂದರ್ಯ ರವರು ಒಪ್ಪಿಕೊಂಡರು ಹಾಗೂ ಕೇವಲ ಆರೇ ಗಂಟೆಯಲ್ಲಿ ಬಂಗಾರದ ಬೊಂಬೆ ಹಾಡನ್ನು ರೀಶೂಟ್ ಮತ್ತು ಸಿನಿಮಾದ ಕೆಲವು ಭಾಗಗಳನ್ನು ಮರುಚಿತ್ರಿಕರಿಸಿ ಸೌಂದರ್ಯ ರವರಿಗೆ ರವಿಚಂದ್ರನ್ ಅವರು ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು..

Advertisement

ಇದೇ ಕಾರಣದಿಂದಲೇ ಸಿನಿಮಾ ರಂಗದಲ್ಲಿ ರವಿಚಂದ್ರನ್ ರವರನ್ನು ಕನಸುಗಾರ ಎಂದು ಕರೆಯುವುದು. ಹೌದು ಸಿನಿಮಾ ಎಷ್ಟೇ ತಡವಾಗಿ ಬಂದರು ಚಿತ್ರ ಚೆನ್ನಾಗಿ ಬರಬೇಕು ಎಂಬ ಒಂದೇ ಒಂದು ನೆಟ್ಟಿನಿಂದ ಅವರು ಕೆಲಸ ಮಾಡುತ್ತಾರೆ. ಇನ್ನು ಯಾವುದೇ ಕಾರಣಕ್ಕೂ ಸೀನ್ ಚೆನ್ನಾಗಿ ಬರದೆ ಹೋದರೆ ಅದನ್ನು ಸಮರ್ಥಿಸಿಕೊಳ್ಳುವುದಿಲ್ಲ ಸಮಯ ತೆಗೆದುಕೊಂಡು ಅದನ್ನು ಚೆನ್ನಾಗಿ ಬರುವವರೆಗೂ ಬಿಡುವವರಲ್ಲ. ಇದಕ್ಕೆ ಸಿಪಾಯಿ ಸಿನಿಮಾ ಕೂಡ ಉದಾಹರಣೆಯಾಗಿದೆ.

Leave A Reply

Your email address will not be published.