Abhishek Ambareesh: ಪುನೀತ್ ಹಾಗೂ ಅಂಬರೀಷ್ ಸಂಬಂಧ ಹೇಗಿತ್ತು ಅನ್ನುವುದಕ್ಕೆ ಅಭಿಷೇಕ್ ಅಂಬರೀಷ್ ಕೊಟ್ಟ ಹೇಳಿಕೆ ವೈರಲ್
ಪುನೀತ್ ರಾಜ್ ಕುಮಾರ್ (Puneeth Rajkumar) ರವರು ಸುಮಲತಾ (Sumalatha) ಅವರನ್ನು ಮದುವೆಯಾಗುತ್ತೆನೆ (Marriage) ಎಂದು ಹಠಮಾಡಿದ್ದರಂತೆ. ಈ ವಿಚಾರ ಹೊಸದೇನಲ್ಲ ಬಿಡಿ. ಇದಕ್ಕೂ ಮುನ್ನ ಸಹ ಸಾಕಷ್ಟು ಬಾರಿ ಕೂಡ ಈ ವಿಚಾರ ಕೇಳಿರುತ್ತೀರಿ. ಅಪ್ಪು ಅವರಿಗೆ ಸುಮಲತಾ ಎಂದರೆ ಪಂಚ ಪ್ರಾಣ. ಹೌದು ನಟಿಯರಲ್ಲಿ (Heroines) ಅವರೆಂದರೆ ಬಹಳ ಇಷ್ಟವಿತ್ತು. ಅಪ್ಪನ ಜೊತೆಗೆ ಸಿನಿಮಾ ಶೂಟಿಂಗ್ (Movie Shooting) ಹೋಗುವಾಗ ಸುಮಲತಾರನ್ನ ನೋಡಿ ಮನೆಗೆ ಬಂದು ನಾನು ಸುಮಲತಾರನ್ನೇ ಮದುವೆ ಆಗ್ತೀನಿ ಎಂದು ಹಠ ಮಾಡಿದ್ದರಂತೆ.
ಹೌದು ಇದೇ ವಿಚಾರವನ್ನ ನೆನೆದ ಸಂಸದೆ ನಟಿ ಸುಮಲತಾ ರವರು ಕೂಡ ಅಪ್ಪು (Appu) ಅಗಲಿದಾಗ ಕಣ್ಣೀರು ಹಾಕಿದ್ದರು. ಇತ್ತೀಚೆಗಷ್ಟೇ ಮತ್ತೊಂದು ವೈರಲ್ ಆಗುತ್ತಿದ್ದು ಈ ವಿಡಿಯೋದಲ್ಲಿ ಶಿವಣ್ಣ (Shivarajkumar) ಅಪ್ಪು ಅಂಬಿ (Ambreesh) ಸುಮಲತಾ ಎಲ್ಲರನ್ನು ಕಾಣಬಹುದು. ಇನ್ನು ವಿಡಿಯೋದಲ್ಲಿ ಅಂಬಿ ಅವರು ಅಪ್ಪು ಅವರನ್ನು ಕರೆದು 5 ವರುಷಕ್ಕೆ ನನ್ನ ಹೆಂಡ್ತಿ ಮೇಲೆ ಕಣ್ಣು ಹಾಕಿದ್ದಿಯಾ ಎಂದು ಗದರಿದ್ದಾರೆ. ಈ ಮಾತನ್ನು ಕೇಳಿ ಶಿವಣ್ಣ ಬಿದ್ದು ಬಿದ್ದು ನಕ್ಕಿದ್ದು ಈ ವಿಡಿಯೋ ವೈರಲ್ ಆಗಿತ್ತು.
ಸದ್ಯ ಇದೀಗ ಈ ಘಟನೆಗಳನೆಲ್ಲಾ ನೆನೆದಿರುವ ಅಭಿಷೇಕ್ ಅಂಬರೀಶ್ (Abhishek Ambresh) ರವರು ತಂದೆ ಅಂಬರೀಶ್ ರವರು ಅಪ್ಪು ರವರನ್ನ ಹೇಗೆಲ್ಲಾ ಗೋಳು ಹೊಯ್ಕೋಳೋರು ಎಂಬುದನ್ನ ತಿಳಿಸಿದ್ದಾರೆ. ನನ್ನನ್ನ ಅಭಿ ಮತ್ತು ಬ್ರದರ್ ಎಂದು ಅಪ್ಪು ಸರ್ ಕರೆಯುತ್ತಿದ್ದರು ಎಂದು ಮಾತು ಆರಂಭಿಸಿದ ಅಭಿಷೇಕ್ ಅಂಬರೀಶ್ ರವರು ನಾನು ಚಿಕ್ಕವನು ಆಗಿದ್ದರು ಕೂಡ ನನ್ನ ಯಾವತ್ತು ಚಿಕ್ಕವನ ರೀತಿ ಟ್ರೀಟ್ ಮಾಡಿಲ್ಲ. ನನಗೆ ಅಂತೆಲ್ಲಾ ಎಲ್ಲರಿಗೂ ಹಾಗೆ ಗೌರವ ಕೊಡುತ್ತಿದ್ದರು. ನನ್ನ ತಂದೆನ ಮಾಮ ಅನ್ನುತ್ತಿದ್ದರು. ಅಪ್ಪು ಸರ್ ನ ಅಪ್ಪ ಬಹಳ ಗೋಳಾಕೊಳ್ಳೋರು.
ನಮ್ಮ ಅಂಬರೀಶ್ ಅಣ್ಣಾ ಅಂದ್ರೆನೆಹಾಗೆ.. 5 ವರುಷಕ್ಕೆ ನನ್ನ ಹೆಂಡ್ತಿಗೆ ಕಾಳಕ್ತ್ಯ? ಅಂತ ರೇಗಿಸುತ್ತಿದ್ದರು. ಅಪ್ಪು ಸರ್ ಅಂತು ಬಹಳ ನಾಚಿಕೊಳ್ಳೊರು ಸಂಕೋಚದ ಸ್ವಭಾವ.. ಪ್ಲೀಸ್ ಮಾಮ ಬಿಟ್ಬಿಡಿ ಮಾಮ ಅನ್ನೋರು.. ಈ ರೀತಿ ಇನೋಸೆಂಟ್ ಸಿಕ್ಕಿಬಿಟ್ರೇ ನಮ್ಮಪ್ಪ ಜಾಸ್ತಿನೆ ಗೋಳೋಯ್ಕುತ್ತದ್ರು.. ಕಡೆಗೆ ಅಮ್ಮ (Sumalatha) ಬಂದು ಸಾಕು ಬಿಡ್ರಿ ಪಾಪ ಅಂತ ಬಯ್ಯೋರು.. ಎಂದು ಹೇಳುತ್ತಾ ಅಂಬರೀಶ್ ರವರು ಅಪ್ಪು ರವರ ಕಾಲೆಯುತ್ತಿದ್ದ ಘಟನೆ ನೆನೆದಿದ್ದಾರೆ ಅಭಿಷೇಕ್ ಅಂಬರೀಶ್.
ಇನ್ನು ರೆಬೆಲ್ ಸ್ಟಾರ್ ಅಂಬರೀಶ್ ಅವರ 70ನೇ ಜನ್ಮದಿನದ ಸಂದರ್ಭದಲ್ಲೇ ನಟ ಅಭಿಷೇಕ್ ಅಂಬರೀಶ್ ಅವರ ಹೊಸ ಚಿತ್ರ ಕಾಳಿಯ ಫಸ್ಟ್‌ಲುಕ್ ರಿಲೀಸ್ ಆಗಿತ್ತು. ಗಜಕೇಸರಿ ಹೆಬ್ಬುಲಿ ಪೈಲ್ವಾನ್ ಚಿತ್ರಗಳನ್ನು ನಿರ್ದೇಶಿಸಿದ್ದ ಕೃಷ್ಣ ಅವರು ಈ ಚಿತ್ರದಲ್ಲಿ ಅಭಿಷೇಕ್‌ಗೆ ಆ್ಯಕ್ಷನ್ ಕಟ್ ಹೇಳಲಿದ್ದು ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಸದ್ಯಕ್ಕೆ ಸೂರಿ ಅವರ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಸಿನಿಮಾ ಚಿತ್ರೀಕರಣದಲ್ಲಿ ಅಭಿಷೇಕ್ ತೊಡಗಿಸಿಕೊಂಡಿದ್ದಾರೆ. ಇದು ಅಂತಿಮ ಹಂತದಲ್ಲಿದೆ. ಹೊಸ ಆರಂಭ ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದು ಅಭಿಷೇಕ್ ಬರೆದುಕೊಂಡಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಲಾಗಿದ್ದು ಸಖತ್ ಖಡಕ್ ಲುಕ್ ನಲ್ಲಿ ಅಭಿಷೇಕ್ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಅಪ್ಪನ ಹಾಗೇ ಮಗನೂ ಸಹ ಹೆಸರಿಗೆ ತಕ್ಕಂತೆ ರೆಬಲ್ ಆಗಿ ಕಾಣಿಸಿಕೊಂಡಿದ್ದಾರೆ.