Weekend with Ramesh: ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ಊಹಿಸದ ತಿರುವು

Advertisement
ಸಾಧಕರ ಸೀಟ್ ಎಂದೇ ಫೇಮಸ್ ಆದ ವೀಕೆಂಡ್ ವಿತ್ ರಮೇಶ್ (Weekend with Ramesh) ಕಾರ್ಯಕ್ರಮಕ್ಕೆ ಇನ್ನೆನು ಕ್ಷಣ ಗಣನೆ ಎನ್ನಬಹುದು. ಅದೇ ರೀತಿ ಈ ಬಾರಿ ಯಾರೆಲ್ಲ ಸಾಧಕರು ಬರಬಹುದು ಎಂದು ಕುತೂಹಲ ಮೂಡುತ್ತಲೇ ಮೊದಲ ಎಂಟ್ರಿಯಾಗಿ ಸಾಧಕಿ ರಮ್ಯಾ (Ramya) ಅವರ ಕಂಪ್ಲೀಟ್ ಜೀವನ ಅನಾವರಣ ಗೊಳ್ಳಲಿದೆ ಎಂಬ ಸತ್ಯ ಇದೀಗ ತಿಳಿದುಬಂದಿದೆ.
ಮೋಹಕತಾರೆ ರಮ್ಯಾ ಅವರು ಸೀಸನ್ 5 (Sesaon 5) ರ ಮೊದಲ ಅತಿಥಿಯಾಗಿ ಎಂಟ್ರಿ ನೀಡಿದ್ದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅಭಿಮಾನಿಗಳು ಖುಷಿಪಟ್ಟಿದ್ದಾರೆ, ಅದೇ ಈ ರೀತಿ ಸಾಧನೆಯ ಸಾಲಿನಲ್ಲಿ ಅವರ ಸಿನೆಮಾ ಬಗ್ಗೆ ಕೂಡಾ ಮಾತಾಡಿದ್ದಾರೆ. ಅವರಿಗೆ ಅಮೃತಧಾರೆ ಸಿನೆಮಾ ತುಂಬಾ ಇಷ್ಟವಾಗಿ ಒಪ್ಪಿಕೊಂಡ ಸಿನೆಮಾ ಅಂತೆ ಅದೇ ರೀತಿ ಅವರು ಲಡಾಕ್ ನಲ್ಲಿ ಹುಡುಗ ಹುಡುಗ ಹಾಡನ್ನು ಎಂಜಾಯ್ ಮಾಡಿ ಡ್ಯಾನ್ಸ್ ಮಾಡಿದ್ದರಂತೆ. ಆದರೆ ಅಲ್ಲಿ ಕೂಡ ಪ್ರಾಣವಾಯು ಸಮಸ್ಯೆ ಬಂದದ್ದು ಅಲ್ಲಿಂದ ಆಕೆ ಪಾರಾದದ್ದು ಇನ್ನು ಅನೇಕ ಸಂಗತಿಯ ಬಗ್ಗೆ ತಿಳಿಸಿದ್ದಾರೆ. ಅಷ್ಟು ಮಾತ್ರವಲ್ಲದೇ ಇದೇ ಸಿನೆಮಾದಲ್ಲಿ ಮೊದಲ ಬಾರಿ ಬಾಲಿವುಡ್ ಸ್ಟಾರ್ ಅಮಿತಾಬ್ ಕನ್ನಡ ಸಿನೆಮಾದಲ್ಲಿ ಅದು ಕೂಡ ರಮ್ಯಾ ಅವರ ಜೊತೆ ನಟಿಸಿದ್ದಾರೆ ಎನ್ನಬಹುದು.
ಈ ಬಗ್ಗೆ ಮಾತಾಡಿದ್ದ ಅವರು ಸರ್ ಅಮಿತಾಭ್ ಬಚ್ಚನ್ (Amitabh Bachchan) ಅವರೊಂದಿಗೆ ಒಮ್ಮೆ ನಟಿಸಬೇಕೆಂಬ ಆಸೆ ಇತ್ತು. ಅದಕ್ಕೂ ಹೆಚ್ಚಾಗಿ ನಾನು ಅವರ ದೊಡ್ಡ ಫ್ಯಾನ್ ನಿಜ ಜೀವನದಲ್ಲಿ ಕೂಡ ಅವರು ಇಷ್ಟ, ಈಗ ಇಲ್ಲಿ ಕೂಡ ಅಮಿತಾಭ್ ಸರ್ ಬರಬಹುದಾ ಎಂದು ರಮ್ಯಾ ಅವರು ರಮೇಶ್ ಅರವಿಂದ್ ಅವರಿಗೆ ಕೇಳುತ್ತಾರೆ. ಅದಕ್ಕೆ ನಗುಮುಖದಿಂದಲೇ ಉತ್ತರಿಸಿದ್ದ ರಮೇಶ್ ಅವರು ಲೆಟ್ಸ್ ವೆಲ್ಕಂ ಬಾಲಿವುಡ್ ಸ್ಟಾರ್ ಅಮಿತಾಬ್ ಆನ್ ಸ್ಟೇಜ್ ಅನ್ನುತ್ತಾರೆ. ಅಲ್ಲಿರುವ ಸಭೀಕರು ಹಾಗೂ ರಮ್ಯಾ ಅವರೇ ಒಮ್ಮೆ ಶಾಖ್ ನಲ್ಲಿ ನೋಡುತ್ತಾರೆ. ಇದು ಇಷ್ಟನ್ನು ಝಿ ಅವರು ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದು ಈ ಶೋ ನಲ್ಲಿ ಅಮಿತಾಬ್ ಇರ್ತಾರಾ ಇಲ್ಲವಾ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಹಾಗಿದ್ದರು ನೆಟ್ಟಿಗರು ಕೆಲವರು ಅವರು ಬಂದಿರಬಹುದೆಂದರೆ ಇನ್ನು ಕೆಲವರು ಅವರು ತಮ್ಮ ನಿವಾಸದಿಂದ ವಿಶಿಂಗ್ ವೀಡಿಯೋ ಕಳಿಸಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ.