Anushka Shetty: ಪ್ರಭಾಸ್ ವಿಷಯವಾಗಿ ಜೀವನದ ಮಹತ್ವದ ನಿರ್ಧಾರ ತಿಳಿಸಿದ ಅನುಷ್ಕಾ ಶೆಟ್ಟಿ

Advertisement
ಸದ್ಯ ದುಬೈ ಫಿಲ್ಮ್ ಸೆನ್ಸಾರ್ (Dubai Filim Sensor) ಮಂಡಳಿಯ ಸದಸ್ಯ ಎಂದು ಹೇಳಿಕೊಂಡು ಓಡಾಡುತ್ತಿರುವ ಉಮೈರ್ ಸಂಧು (Umair Sandhu) ಅನುಷ್ಕಾ ಶೆಟ್ಟಿ (Anushka Shetty) ಭವಿಷ್ಯದಲ್ಲಿ ಪ್ರಭಾಸ್ (Prabhas) ಜೊತೆ ಯಾವುದೇ ಕಾರಣಕ್ಕೂ ಸಿನಿಮಾ (Movie) ಮಾಡದಿರಲು ನಿರ್ಧರಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ ಎಂದು ಇದೀಗ ಟ್ವೀಟ್ (Tweet) ಮಾಡಿದ್ದಾರೆ. ಹೌದು ಅನುಷ್ಕಾ ರವರು ನಟಿಸುತ್ತಿರುವ ಚಿತ್ರತಂಡದ ಸದಸ್ಯರ ಪ್ರಕಾರವಾಗಿ ಒಂದು ವಿಚಾರದಲ್ಲಿ ಪ್ರಭಾಸ್ ಅನುಷ್ಕಾಗೆ ತೀವ್ರ ನೋವುಂಟು ಮಾಡಿದ ಹಿನ್ನಲೆಯಲ್ಲಿ ಅನುಷ್ಕಾ ರವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಉಮೈರ್ ಸಂಧು ಆರೋಪಿಸಿದ್ದಾರೆ.
ಇನ್ಜು ಇತ್ತೀಚಿಗೆ ಉಮೈರ್ ಸಂಧು ರವರು ಕೇವಲ ಬಾಲಿವುಡ್ (Bollywood) ಮಾತ್ರವಲ್ಲದೆ ದಕ್ಷಿಣ ಭಾರತ ಚಿತ್ರರಂಗದಲ್ಲಿ (South Indian) ಕ್ರೇಜ್ ಹೊಂದಿರುವ ಹಲವು ನಟಿಯರ (Heroine) ಬಗ್ಗೆ ಹಲವು ಸೆನ್ಸೇಷನಲ್ ಆರೋಪಗಳನ್ನು ಮಾಡುತ್ತಿದ್ದಾರೆ. ಹೌದು ಉಮೈರ್ ಸಂಧು ಮಹೇಶ್ ಬಾಬು (Mahesh Baabu) ಪವನ್ ಕಲ್ಯಾಣ್ (Pawan Kalyan) ಬಗ್ಗೆ ಕಾಮೆಂಟ್ ಮಾಡಿದ್ದರು.
ಇದೀಗ ಪ್ರಭಾಸ್ ಮತ್ತು ಅನುಷ್ಕಾ ಸಂಬಂಧದ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದು ಇನ್ನೊಂದು ವಿಶೇಷ ಅಂದ್ಮರೆ ಅನುಷ್ಕಾ ಅವರ ಮುಂಬರುವ ಚಿತ್ರ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಎಂಬ ಸಿನಿಮಾ ಪ್ರಭಾಸ್ ಸಿನಿಮಾ ನಿರ್ಮಾಣ ಸಂಸ್ಥೆಯಾದ ಯುವಿ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲೇ ತಯಾರಾಗುತ್ತಿದೆ. ಹಾಗಿದ್ದರೆ ಉಮೈರ್ ಹೇಳುವ ಮಾತು ಎಷ್ಟು ಸತ್ಯ ಇರಬಹುದು?
ಇನ್ನು ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಹಾಗೂ ಕರಾವಳಿ ಬೆಡಗಿ ನಟಿ ಅನುಷ್ಕಾ ಶೆಟ್ಟಿ ಸಂಬಂಧದ ಸುದ್ದಿಗಳು ಆಗಾಗ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಹೌದು ತೆಲುಗಿನ ಬಿಲ್ಲಾ ಸಿನಿಮಾದಿಂದ ಒಂದಾದ ಜೋಡಿ ಮದುವೆ ಆಗ್ತಾರೆ ಅಂತ ಅವರ ಅಭಿಮಾನಿಗಳು ಬೆಟ್ಟದಷ್ಟು ಆಸೆಯನ್ನು ಇಟ್ಟುಕೊಂಡು ಕುಳಿತಿದ್ದಾರೆ. ಆದರೆ ಇಬ್ಬರು ಜಸ್ಟ್ ಬೆಸ್ಟ್ ಫ್ರೆಂಡ್ಸ್ ಅಂತ ಹೇಳುವುದುನ್ನು ಬಿಟ್ರೆ ಮದುವೆ ವಿಚಾರವಾಗ್ಲಿ ಲವ್ ಮ್ಯಾಟರ್ ಆಗ್ಲಿ.
ಯಾವುದೇ ವಿಚಾರ ಕುರಿತು ಚಕಾರ ಎತ್ತುತ್ತಿಲ್ಲ.
2009 ರಲ್ಲಿ ಬಿಲ್ಲಾ ಸೆಟ್‌ಗಳಲ್ಲಿ ಇಬ್ಬರೂ ಭೇಟಿಯಾದರು. ಇಬ್ಬರ ಕ್ರ್ಯಾಕ್ಲಿಂಗ್ ಕೆಮಿಸ್ಟ್ರಿ ಸಿನಿಮಾವನ್ನು ಬ್ಲಾಕ್ಬಸ್ಟರ್ ಮಾಡಿದ್ದು ಬಾಕ್ಸಾಫಿಸ್‌ನಲ್ಲಿ ಈ ಸಿನಿಮಾ ಸಖತ್ ಸದ್ದು ಮಾಡಿತ್ತು. ಈ ಚಿತ್ರದ ಯಶಸ್ವಿನ ನಂತರ ಮಿರ್ಚಿ ಬಾಹುಬಲಿ: ದಿ ಬಿಗಿನಿಂಗ್ ಮತ್ತು ಬಾಹುಬಲಿ: ದಿ ಕನ್‌ಕ್ಲೂಷನ್ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಇಬ್ಬರ ಜೋಡಿ ತೆರೆ ಮೇಲೆ ಮೋಡಿ ಮಾಡಿದ್ದು ಈ ಸ್ಟಾರ್ ಜೋಡಿ ನೋಡಿ ಇಬ್ರು ಮದುವೆಯಾದ್ರೆ ಸೂಪರ್ ಆಗಿರುತ್ತೆ ಎಂದು ಇವರ ಅಭಿಮಾನಿಗಳು ಈಗಲೂ ಕೂಡ ಮಾತನಾಡಿಕೊಳ್ಳುತ್ತಿದ್ದಾರೆ.