47 ವರ್ಷ ದಾಟಿದರೂ ಕೂಡ ನಟಿ ಸಿತಾರಾ (Sithara) ಅವರು ಇನ್ನು ಕೂಡ ಮದುವೆಯಾಗದೆ (Marriage) ಒಬ್ಬಂಟಿ ಜೀವನ ನಡೆಸುತ್ತಿದ್ದಾರೆ. ಹೌದು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ (South Indian Filim Industry) ಎಲ್ಲಾ ಭಾಷೆಯಗಳಿಲ್ಲೂ ಅಭಿನಯಿಸಿರುವ ನಟಿ 2000ರಲ್ಲಿ ಬೇಡಿಕೆ ಇರುವಾಗಲೆ ಚಿತ್ರರಂಗದಿಂದ ದೂರ ಉಳಿಯುತ್ತಾರೆ. ಇನ್ನು ಸಿತಾರಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಕುಟುಂಬದ (Family) ಜೊತೆ ಆರಾಮಾಗಿ ಇದ್ದಾರೆ ಎನ್ನುವ ಸುದ್ದಿ ಕೂಡ ಆ ಸಮಯದಲ್ಲಿ ದೊಡ್ಡದಾಗಿ ಹರಿದಾಡುತ್ತು. ಆದರೆ ಸಿತಾರಾ ಈಗಲೂ ಕೂಡ ಒಬ್ಬಂಟಿಯಾಗಿಯೆ (Single) ಇದ್ದಾರೆ.
ಹೌದು ಕನ್ನಡ (Kannada) ಸೇರಿದಂತೆ ತಮಿಳು (Tamil) ತೆಲುಗು(Telugu) ಹಾಗೂ ಮಲಯಾಳಂ (Malyalam) ಚಿತ್ರರಂಗದಲ್ಲಿ ಅಭಿನಯಿಸುತ್ತ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದ ನಟಿ ಸಿತಾರ ಇದ್ದಕಿದ್ದ ಹಾಗೆ ಚಿತ್ರರಂಗದಿಂದ ಮಾಯವಾಗುತ್ತಾರೆ. 2000ರಲ್ಲಿ ನಟಿ ನಂತರ ಸಿತಾರಾ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಳ್ಳುತ್ತಾರೆ. ಅದರಲ್ಲೂ ತೆಲುಗು ಬಿಟ್ಟರೆ ಯಾವ ಭಾಷೆಯಲ್ಲೂ ಸಹ ಕಾಣಿಸಿಕೊಳ್ಳುವುದಿಲ್ಲ. ಅದೇ ಸಮಯದಲ್ಲಿ ಸಿತಾರಾ ತಂದೆಯನ್ನು ಕೂಡ ಕಳೆದುಕೊಂಡಿದ್ದು ಹಾಗಾಗಿ ಸುಮಾರು ಎರಡು ಮೂರು ವರ್ಷಗಳ ಕಾಲ ಸಿನಿಮಾದಿಂದ ಸಂಪೂರ್ಣವಾಗಿ ದೂರ ಉಳಿಯುತ್ತಾರೆ. ತದ ನಂತರ ಮತ್ತೆ ವಾಪಸ್ ಆಗುವ ಸಿತಾರಾ ತೆರೆಮೇಲೆ ಮಿಂಚಲು ಪ್ರಾರಂಭಿಸುತ್ತಾರೆ.
ಇನ್ನು 47 ರ ವಯಸ್ಸಿನಲ್ಲಿಯೂ ಕೂಡ ಚಾರ್ಮ್ ಕಳೆದುಕೊಳ್ಳದ ನಟಿ ಸಿತಾರಾ ಅವರು ಮದುವೆಯಾಗದಿರಲು ಕಾರಣ ನಟ ಹಾಗೂ ನಿರ್ಮಾಪಕ ಮುರುಳಿ (Muruli) ಅವರು ಎನ್ನುವ ಮಾತುಗಳು ಕೂಡ ಹರಿದಾಡುದ್ದು ಸಿತಾರಾ ಅವರು ಚಿತ್ರರಂಗದ ಉತ್ತುಂಗದಲ್ಲಿರುವಾಗಲೆ ನಟ ಮುರುಳಿ ಜೊತೆ ಬಹಳ ಆತ್ಮೀಯರಾಗಿದ್ದರಂತೆ. ಇನ್ನು ಇಬ್ಬರ ನಡುವಿನ ಆತ್ಮೀಯತೆ ನೋಡಿ ಸಾಕಷ್ಟು ಸುದ್ದಿಗಳು ಕೂಡ ಹರಿದಾಡಿದ್ದು ದುರದೃಷ್ಟ ಅಂದರೆ ಮುರುಳಿ ರವರು 2010ರಲ್ಲಿ ಹೃದಯಾಘಾತದಿಂದ ಅಗಲುತ್ತಾರೆ.
ಇನ್ನು ಮುರುಳಿಯವರ ಅಗಲಿಕೆ ನಂತರ ಸಿತಾರಾ ಅವರನ್ನು ಖಿನ್ನತೆಗೆ ನೂಕಿತ್ತು ಎಂದು ಹೇಳಲಾಗಿತ್ತು. ಹಾಗಾಗಿಯೆ ಸಿತಾರಾ ಮತ್ತೆ ಚಿತ್ರರಂಗದಿಂದ ಕೊಂಚ ಅಂತರ ಕಾಯ್ದುಕೊಳ್ಳುತ್ತಾರೆ. ಹೌದು ಅರಗಿಸಿಕೊಳ್ಳಲಾದ ಗೆಳೆಯನ ಅಗಲಿಕೆ ಚಿತ್ರರಂಗದಿಂದ ಮಾತ್ರವಲ್ಲದೆ ಮದುವೆಯಿಂದನೂ ದೂರ ಇರುವಂತೆ ಮಾಡಿದೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿತ್ತು.
ಹೌದು ಮುರಳಿಯವರ ಅಗಲಿಕೆಯ ಸುದ್ದಿಯ ಶಾಕ್ ನಿಂದ ಸಿತಾರ ರವರು ಹೊರ ಬರುವುದರಲ್ಲೆ ತಂದೆಯನ್ನು ಕಳೆದುಕೊಳ್ಳುತ್ತಾರೆ. ಸಿತಾರಾ ಪಾಲಿಗೆ ಅವರ ತಂದೆಯೆ ಎಲ್ಲಾ ಆಗಿದ್ದರು. ಇನ್ನು ಸ್ನೇಹಿತನಂತಿದ್ದ ತಂದೆಯನ್ನು ಕಳೆದುಕೊಂಡ ನಟಿ ಮತ್ತಷ್ಟು ಕುಗ್ಗಿಹೋಗಿದ್ದು ಈ ನಡುವೆ ಮದುವೆ ಬಗ್ಗೆ ಯೋಚಿಸುವುದಕ್ಕು ಸಾಧ್ಯವಾಗಿಲ್ಲ. ಇನ್ನು ನಟಿ ಸಿತಾರಾ ಮದುವೆ ಆಗಿದ್ದಾರೆ ಎಂದೆ ಅನೇಕರು ನಂಬಿದ್ದು ಆದರೆ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಸಿತಾರಾ ಇನ್ನು ಮದುವೆ ಆಗಿಲ್ಲ ಎನ್ನುವ ವಿಚಾರವನ್ನು ಸ್ಪಷ್ಟಪಡಿಸುತ್ತಾರೆ. ನನಗೆ ಇನ್ನು ಮದುವೆ ಆಗಿಲ್ಲ. ಮದುವೆ ಆಗುತ್ತೀನೋ ಇಲ್ಲವೊ ನನಗೆ ಗೊತ್ತಿಲ್ಲ. ಮದುವೆ ಆದರೆ ಖಂಡಿತ ಸೀಕ್ರೆಟ್ ಆಗಿ ಇರುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ಯಾಕಿನ್ನು ಮದುವೆಯಾಗಿಲ್ಲ ಎಂದರೆ ಆಗಿಲ್ಲ ಅಷ್ಟೆ ಎಂದು ಹೇಳುತ್ತಾರೆ. ಮುಂದೆ ಮದುವೆ ಆಗ್ತಾರಾ ಎನ್ನುವುದು ಗೊತ್ತಿಲ್ಲ. ಸದ್ಯ ಚಿತ್ರರಂಗದಲ್ಲಿ ಮತ್ತೆ ಬ್ಯುಸಿಯಾಗಿದ್ದಾರೆ.