Pan India Movies 2023: 2023 ರಲ್ಲಿ ಧೂಳೆಬ್ಬಿಸಲು ಬರುತ್ತಿರುವ 5 ಪಾನ್ ಇಂಡಿಯಾ ಸಿನೆಮಾಗಳು ಇಲ್ಲಿವೆ.
ಭಾರತದಲ್ಲಿ ತಿಂಗಳೊಂದರಲ್ಲಿಯೇ ಸಾವಿರಾರು ಸಿನೆಮಾಗಳು ತೆರೆಗೆ ಅಪ್ಪಳಿಸುತ್ತದೆ ಆದರೆ ಕೆಲ ಸಿನೆಮಾಗಳು ಮಾತ್ರ ಬಾಕ್ಸ್ ಆಫಿಸ್(Box Office) ಉಡೀಸ್ ಮಾಡುತ್ತವೆ.
ಹಾಗಾದರೆ ಮುಂಬರುವ ದಿನಗಳಲ್ಲಿ ಯಾವ ಸಿನೆಮಾಗಳು 1000 ಕೋಟಿ ಗಳಿಸುತ್ತದೆ ಎಂಬ ಚರ್ಚೆಗಳು ನಡೆಯುತ್ತಿದ್ದು, 1000 ಕೋಟಿ ಗಳಿಸುವ ನಿರೀಕ್ಷಿಯಲ್ಲಿರುವ ಸಿನೆಮಾಗಳು
1. ಜವಾನ್
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ನಟನೆಯ ಪಠಾಣ್(Pathaan) 1000 ಕೋಟಿ ಬಾಕ್ಸ್ ಆಫೀಸ್ ಲೂಟಿ ಮಾಡಿ ದಾಖಲೆ ಬರೆದಿತ್ತು. ಶಾರುಖ್ ಖಾನ್ ಸಿನಿಮಾ ‘ಪಠಾಣ್’ ಬಾಕ್ಸಾಫೀಸ್ನಲ್ಲಿ ಸದ್ದು ಮಾಡಿತ್ತು. ಸಿನಿಮಾ ಬಿಡುಗಡೆಯಾದ 27 ದಿನಗಳಲ್ಲಿಯೇ 1000 ಕೋಟಿ ಕ್ಲಬ್ ಸೇರಿತ್ತು.
ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಾಹಂ ಅಂತಹ ಸ್ಟಾರ್ಕಾಸ್ಟ್ ಇರುವ ಸೈ ಥ್ರಿಲ್ಲರ್ ಸಿನಿಮಾವನ್ನು ಜನರು ಮೆಚ್ಚಿಕೊಂಡಿದ್ದರು.
ದಕ್ಷಿಣದ ಖ್ಯಾತ ನಿರ್ದೇಶಕ ಅಟ್ಲೀ ಅವರ ನಿರ್ದೇಶನದಲ್ಲಿ ಶಾರುಖ್ ನಟಿಸಲಿರುವ ಜವಾನ್ 1000 ಕೋಟಿ ಗಳಿಸುತ್ತದೆ ಎನ್ನಲಾಗಿದೆ.
ಚಿತ್ರದ ಟೈಟಲ್ ಟೀಸರ್ ಕೂಡಾ ರಿಲೀಸ್ ಆಗಿ ಸಕ್ಕತ್ ಕ್ರೇಜ್ ಹುಟ್ಟುಹಾಕಿದೆ.
2. ಎನಿಮಲ್
ರಣಬೀರ್ ಕಪೂರ್(Ranbir Kapoor) ನಟನೆಯಲ್ಲಿ ಬಿಡುಗಡೆಗೆ ಸಜ್ಜಾಗಿರುವ ಎನಿಮಲ್ 1000 ಕೋಟಿ ಬಾಕ್ಸ್ ಆಫೀಸ್ ಲೂಟಿ ಮಾಡುತ್ತದೆ ಎನ್ನಲಾಗಿದ್ದು,
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಚಿತ್ರ ಇದಾಗಿದ್ದು, ದರೋಡೆಕೋರರ ಸುತ್ತ ಕಥೆ ಹೆಣೆಯಲಾಗಿದೆ. ಚಿತ್ರದಲ್ಲಿ ಅನಿಲ್ ಕಪೂರ್, ಬಾಬಿ ಡಿಯೋಲ್, ಟ್ರಿಪ್ತಿ ಡಿಮ್ರಿ ಮತ್ತು ರಶ್ಮಿಕಾ ಮಂದಣ್ಣ(Rashmika Mandanna) ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
3. ಲಿಯೋ
ಖ್ಯಾತ ತಮಿಳು ನಟ ದಳಪತಿ ವಿಜಯ್ ಅವರ 67ನೇ ಸಿನಿಮಾ ಲಿಯೋಗೆ ಸ್ಟಾರ್ ಡೈರೆಕ್ಟರ್ ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದಾರೆ.
ಈ ಹಿಂದೆ ವಿಕ್ರಮ್ ನಂತಹ ಮಾಸ್ಟರ್ ಸಿನೆಮಾ ಕೊಟ್ಟ ಲೋಕೇಶ್ ಕನಗರಾಜ್ ವಿಜಯ್ ಮೂಲಕ ಮತ್ತೊಂದು ಸೂಪರ್ ಹಿಟ್ ಸಿನೆಮಾ ನೀಡಲು ಸಿದ್ದರಾಗಿದ್ದಾರೆ.ಈ ಸಿನೆಮಾ ಕೂಡಾ 1000 ಕೋಟಿ ಬಾಕ್ಸ್ ಆಫೀಸ್ ಉಡೀಸ್ ಮಾಡುತ್ತದೆ ಎನ್ನಲಾಗಿದೆ.
4. ಸಲಾರ್
ಕನ್ನಡದ ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಹಾಗೂ ಪ್ರಭಾಸ್ ನಟನೆಯಲ್ಲಿ ಹೊರಬರುತ್ತಿರುವ ಸಿನೆಮಾವೇ ಸಲಾರ್(Salar) .
‘ಕೆಜಿಎಫ್: ಚಾಪ್ಟರ್ 2’ ಸಿನಿಮಾವು ವಿಶ್ವಾದ್ಯಂತ ಈವರೆಗೂ ಗಳಿಸಿರುವುದು ಬರೋಬ್ಬರಿ 1217.11 ಕೋಟಿ ರೂಪಾಯಿ. ಈ ಭಾರತದಲ್ಲಿ 1000 ಕೋಟಿ ರೂ.ಗಳಿಗೂ ಅಧಿಕ ಗಳಿಕೆ ಮಾಡಿದ ಎರಡನೇ ಸಿನಿಮಾ ಎಂಬ ಖ್ಯಾತಿ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಪಡೆದುಕೊಂಡಿತ್ತು. ಪ್ರಶಾಂತ್ ನೀಲ್ ಕೆಜಿಎಫ್ ಸರಣಿ ಚಿತ್ರಗಳ ಮೂಲಕ ಇಡೀ ವಿಶ್ವವೇ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ್ದರು. ಈಗ ಇವರ ನಿರ್ದೇಶನದ ಸಲಾರ್ ಕೂಡಾ1000 ಕೋಟಿ ಗಳಿಸುತ್ತದೆ ಎನ್ನಲಾಗಿದೆ.
5.ಟೈಗರ್ 3
ನಟ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಒಟ್ಟಾಗಿ ನಟಿಸಿರುವ ಟೈಗರ್ 3 ಕೂಡಾ ಬಾಕ್ಸ್ ಆಫೀಸ್ ನಲ್ಲಿ 1000 ಕೋಟಿ ಲೂಟಿ ಮಾಡಲಿದೆ ಎನ್ನಲಾಗಿದೆ.