Dolly Dhananjay: ಅಮೃತಾ ಎದುರು ಕಿಚ್ಚ.ಕೇಳಿದ ಪ್ರಶ್ನೆಗೆ ಕಂಗಾಲಾದ ಡಾಲಿ ಧನಂಜಯ್

Advertisement
ಕನ್ನಡ ಚಿತ್ರರಂಗದ ನಟ ರಾಕ್ಷಸ ಡಾಲಿ ಧನಂಜಯ್ (Dhananjay) ಮತ್ತು ಅಮೃತಾ ಅಯ್ಯಂಗಾರ್ (Amrutha Iyengar) ಅಭಿನಯಿಸಿರುವ ಹೊಯ್ಸಳ (Hoysala) ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮವೂ ಬೆಂಗಳೂರಿನ (Banglore) ಐಷಾರಾಮಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆಯಿತ್ತು. ಇನ್ನು ವಿಶೇಷ ಅತಿಥಿಯಾಗಿ ಆಗಮಿಸಿದ ಕಿಚ್ಚ ಸುದೀಪ್ (Kiccha Sudeep) ವೇದಿಕೆ ಮೇಲೆ ಧನು ಹಾಗೂ ಅಮೃತಾ ಕಾಲೆಳೆದಿದ್ದು ಸಾಮಾಜಿಕ ಜಾಲತಾಣದಲ್ಲಿ (Social Media) ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಹೌದು ವೇದಿಕೆ ಮೇಲೆ ಆಗಮಿಸಿದ ಕಿಚ್ಚ ಸುದೀಪ್ ರವರು ಅಮೃತಾ ಮತ್ತು ಧನಂಜಯ್‌ರನ್ನು ಚೆನ್ನಾಗಿ ರೇಗಿಸಿದ್ದು ಸಿನಿಮಾ (Movie) ಮತ್ತು ತಮ್ಮ ಪಾತ್ರದ ಬಗ್ಗೆ ಮಾತನಾಡಿ ಅಂದರೆ ಧನು ಧನು ಎಂದು ಹತ್ತು ಸಲ ಅವರ ಹೆಸರು ಹೇಳಿದ್ದಾರೆ.
ಸಿನಿಮಾ ವಿಚಾರಕ್ಕಿಂತ ಧನಂಜಯ್ ಬಗ್ಗೆ ಹೆಚ್ಚಿಗೆ ಮಾತನಾಡಿದ್ದು ಅಮೃತಾ. ಹೌದು ಪಾತ್ರವನ್ನು ಹೊಗಳುತ್ತಿದ್ರಾ ಅಥವಾ ಪರ್ಸನಲ್ ಆಗಿ ಹೇಳುತ್ತಿದ್ರಾ ಗೊತ್ತಿಲ್ಲ. ಏನೇ ಇರಲಿ ನಿಮ್ಮ ಮಾತುಗಳನ್ನು ಕೇಳಿ ಧನಂಜಯ್ ರವರು ಖುಷಿ ಪಟ್ಟಿದ್ದಾರೆ. ಆದರೆ ಬೇಸರ ಆಗಿದ್ದು ಏನೆಂದರೆ ಧನು ನಿಮ್ಮ ಬಗ್ಗೆ ಒಂದು ಸಾಲು ಕೂಡ ಹೇಳಲಿಲ್ಲ. ಈಗ ಧನುಗೆ ಅವಕಾಶ ಕೊಡೋಣ ಅಮೃತಾ ಎಷ್ಟು ಚೆನ್ನಾಗಿ ಕಾಣಿಸುತ್ತಿದ್ದಾರೆಂದು ಹೇಳಬೇಕು.
ಅಮೃತಾ ಗುರು ಗುರು ಅಂತ ಶುರು ಮಾಡಿ ಧನಂಜಯ್ ಎನ್ನುತ್ತಿದ್ದರು ಆದರೆ ಅಮೃತಾ ಜೊತೆ ನಟಿಸಿ ಖುಷಿ ಆಯ್ತು ಎಂದು ಧನು ಹೇಳಲೇ ಇಲ್ಲ. ಹೊಯ್ಸಳ ಚಿತ್ರಕ್ಕೆ ಅಮೃತಾ ನಾಯಕಿ ಹೀಗಾಗಿ ನಾಯಕಿ ಬಗ್ಗೆ ಒಂದೆರಡು ಸಾಲು ಹೇಳಿ ಎಂದು ಸುದೀಪ್ ವೇದಿಕೆ ಮೇಲೆ ಕಾಲೆಳೆಯುತ್ತಾರೆ. ಅಮೃತಾ ಅವರ ಜೊತೆ ಮೂರನೇ ಸಿನಿಮಾ ಮಾಡುತ್ತಿರುವುದು ತುಂಬಾ ಚೆನ್ನಾಗಿ ನಟಿಸಿದ್ದಾರೆ ಎಂದು ಧನಂಜಯ್ ರವರು ವೇದಿಕೆ ಮೇಲೆ ಹೇಳಿದ್ದಾರೆ.
ಇನ್ನು ತಕ್ಷಣವೇ ಸುದೀಪ್ ರವರು ಯಾಕೆ ಅಮೃತಾ ನೀವು ಧನಂಜಯ್ ಜೊತೆನೇ ಸಿನಿಮಾ ಮಾಡುತ್ತಿರುವುದು? ಬೇರೆ ಕಲಾವಿದರಿಗೆ ಡೇಟ್ ಕೊಡಿ ಬೇರೆ ಕಲಾವಿದರಿಗೆ ಅವಕಾಶ ಕೊಡಿ. ನೀವು ಇಷ್ಟೆಲ್ಲಾ ಮಾಡಿದ್ದರೂ ಕೂಡ ನಿಮ್ಮ ಬಗ್ಗೆ ಒಂದು ಸಾಲು ಹೇಳುತ್ತಿಲ್ಲ. ನನ್ನ ಜೊತೆ ಸಿನಿಮಾ ಮಾಡಿದರೆ ನೀವು ಅರ್ಧ ಗಂಟೆ ನಿಮ್ಮ ಪಾತ್ರ ನಿಮ್ಮ ನಟನೆ ಬಗ್ಗೆ ಹೇಳುತ್ತಿದ್ದೆ. ಅಮೃತಾ ಮತ್ತು ಧನು ಕಾಂಬಿನೇಷನ್ ತುಂಬಾ ಚೆನ್ನಾಗಿದೆ ಎಂದು ಸುದೀಪ್ ರವರು ಹೇಳುತ್ತಾರೆ.
ಅಮೃತಾ ಅವರ ಜೊತೆಗರ ಸುದೀಪ್ ಸರ್ ನೀವು ಕೂಡ ಸಿನಿಮಾ ಮಾಡಬೇಕು ಆಕೆ ತುಂಬಾ ಒಳ್ಳೆಯ ಕಲಾವಿದೆ. ನಾನು ಅಮೃತಾ ಒಟ್ಟಿಗೆ ಮೂರು ಸಿನಿಮಾ ಮಾಡಲು ನಿರ್ಮಾಪಕರು ಕಾರಣ. ಪಾಪ್ ಕಾರ್ನ್ ಮಂಕಿ ಟೈಗರ್ (Popcorn Monkey Tiger) ಸಿನಿಮಾ ನೋಡಿ ಶಂಕರ್ ಅವರು ಬಡವ ರಾಸ್ಕಲ್ (Badava Rascal) ಚಿತ್ರಕ್ಕೆ ಅವಕಾಶ ಕೊಟ್ಟರು ಬಡವ ರಾಸ್ಕಲ್ ಹಿಟ್ ಆಯ್ತು ಅಂತ ಹೊಯ್ಸಳಾ (Hoysala) ಚಿತ್ರಕ್ಕೆ ಯೋಗಿ ಮತ್ತು ಕಾರ್ತಿಕ್ ಅವಕಾಶ ಕೊಟ್ಟರು ಎಂದು ಧನಂಜಯ್ ಹೇಳಿದ್ದಾರೆ.