Karnataka Times
Trending Stories, Viral News, Gossips & Everything in Kannada

Kirik Keerthi: ತನಗೆ ಅವಮಾನಿಸಿದ ನಿರ್ದೇಶಕ ಓಂ ಪ್ರಕಾಶ್ ರಾವ್ ಅಸಲಿ ಮುಖ ತಿಳಿಸಿದ ಕಿರಿಕ್ ಕೀರ್ತಿ

Advertisement

ಕನ್ನಡ ಚಿತ್ರರಂಗದ (KFI) ಖ್ಯಾತ ನಿರ್ದೇಶಕ (Director) ಓಂ ಪ್ರಕಾಶ್ ರಾವ್ (Om Prakash Rao) ರವರು ಇತ್ತೀಚೆಗಷ್ಟೇ ಸ್ಪೀಡ್ ನ್ಯೂಸ್(Speed News) ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದು ಕಿರಿಕ್ ಕೀರ್ತಿ ಸಿನಿಮಾ (Kirik Keerthi Movie) ನಿಲ್ಲಿಸಲು ಕಾರಣ ಕಿರಿಕ್ ಕೀರ್ತಿ ನಡೆವಳಿಕೆ ಆತನೊಬ್ಬ ನಾನ್‌ಸೆನ್ಸ್ ಎಂದು ಹೇಳಿಕೆ ನೀಡಿದ್ದರು. ಸದ್ಯ ಇದೀಗ ಈ ಹೇಳಿಕೆ ವೈರಲ್ (Viral) ಆದ ಬೆನ್ನಲ್ಲೇ ಇದರ ಕುರಿತು ಕಿರಿಕ್ ಕೀರ್ತಿ (Kirik Keerthi) ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಹೌದು ತಮ್ಮ ಅಧಿಕೃತ ಫೇಸ್‌ಬುಕ್ (Facebook) ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಂಡು ಕಿರಿಕ್ ಕೀರ್ತಿ ಸಿನಿಮಾ ನಿಲ್ಲಲು ಕಾರಣವೇನು ಹಾಗೂ ಕಿರಿಕ್ ಕೀರ್ತಿ ಸಿನಿಮಾದಿಂದ (Movie) ಯಾರು ಆಚೆ ಬಂದರು ಎಂಬುದು ಗೊತ್ತಿದೆ ಬೇಕಿದ್ದರೆ ಬನ್ನಿ ಇದರ ಬಗ್ಗೆ ಮಾತನಾಡೋಣ ಎಂದು ತಿರುಗೇಟು ಕೂಡ ನೀಡಿದ್ದಾರೆ.

ನಮ್ಮ ಕರ್ನಾಟಕ ಕಂಡ ಖ್ಯಾತ ಸಿನಿಮಾ ನಿರ್ದೇಶಕ ಓಂ ಪ್ರಕಾಶ್ ರಾವ್ ರವರು ಯುಟ್ಯೂಬ್ ಚಾನೆಲ್‌ನಲ್ಲಿ (YouTube Channel) ನಡೆದ ಸಂದರ್ಶನದಲ್ಲಿ ಕೀರ್ತಿ ಕ್ಯಾರೆಕ್ಟರ್ ನನಗೆ ಇಷ್ಟವಾಗಲಿಲ್ಲ ಹೌದು ಅವರ ಆಟಿಟ್ಯೂಡ್ ಇಷ್ಟವಾಗಲಿಲ್ಲ. ಹೌದು ಹಾಗಾಗಿ ಅವನನ್ನು ಕಿರಿಕ್ ಕೀರ್ತಿ ಸಿನಿಮಾದಿಂದ ಹೊರಹಾಕಿದೆ ಎಂದು ಹೇಳಿಕೆ ನೀಡಿದ್ದು ಅದನ್ನು ಶೇರ್ ಮಾಡಿಕೊಂಡು ಕೆಲವರು ಏನ್ ಕೀರ್ತಿ ನಿನ್ನ ಬಾಳು ಎಂದೆಲ್ಲಾ ಹೊಟ್ಟೆ ತುಂಬಿಸಿಕೊಳ್ತಿದ್ದಾರೆ ಎಂಬ ಹೇಳಿಕೆಯಿಂದ ವಿಡಿಯೊವನ್ನು ಕೀರ್ತಿ ಪ್ರಾರಂಭ ಮಾಡಿದ್ದಾರೆ.

ಇನ್ನೂ ಮುಂದುವರಿದು ಮಾತನಾಡಿದ ಕೀರ್ತಿ ರವರು ಗೌರವಾನ್ವಿತ ಓಂ ಪ್ರಕಾಶ್ ರಾವ್ ಸರ್ ಅವರೇ ಸಿನಿಮಾ ಯಾಕೆ ನಿಂತೋಯ್ತು.. ನಾನ್ ಯಾಕೆ ಸಿನಿಮಾದಿಂದ ಹೊರಬಂದೆ.. ಮೊದಲ ನಟಿ ಸಿನಿಮಾದಿಂದ ಯಾಕೆ ಹೊರಗಡೆ ಹೋದಳು.. ಫೋಟೊಶೂಟ್ ದಿನ ಏನು ನಡೆಯಿತು.. ಬಿಗ್ ಬಾಸ್ ಮೈಸೂರು ಇವೆಂಟ್ ದಿನ ಏನು ಗಲಾಟೆ ನಡೆಯಿತು.. ಅಲ್ಲಿಂದ ಮೊದಲ ನಟಿ ಯಾಕೆ ಬಿಟ್ಟೋದ್ಳು.. ಆಮೇಲೆ ಸೆಕೆಂಡ್ ಹಿರೋಯಿನ್ ಹೇಗ್ ಸೆಲೆಕ್ಟ್ ಆದಳು.. ಮೈಸೂರಲ್ಲಿ ಸ್ಕ್ರಿಪ್ಟ್ ಬರೆಯಲು ರೂಮ್ ಹಾಕಿದ ಮೇಲೆ ಎರಡನೇ ನಟಿಯೂ ಯಾಕೆ ಬಿಟ್ಟೋದ್ಳು.. ಆಮೇಲೆ ನಾನು ನಿಮಗೆ ಏನು ಹೇಳಿ ಬಂದೆ ಇದನ್ನೆಲ್ಲಾ ಚರ್ಚಿಸಲು ಒಮ್ಮೆ ಕುಳಿತುಕೊಳ್ಳೋಣ ಎಂದು ಈ ರೀತಿಯಾಗಿ ಸಾಲು ಸಾಲು ಪ್ರಶ್ನೆಗಳನ್ನು ಇಟ್ಟು ನೆಟ್ಟಿಗರಲ್ಲಿ ಭಾರೀ ಕುತೂಹಲ ಮತ್ತು ಗೊಂದಲ ಮೂಡಿಸಿದ್ದಾರೆ.

ಈ ರೀತಿಯಾಗಿ ನೇರವಾಗಿ ಕೆಲ ವಿಷಯಗಳ ಬಗ್ಗೆ ನನಗೆ ತಿಳಿದಿದ್ದು ಇದನ್ನು ನಾನು ಎಲ್ಲಿಯೂ ಕೂಡ ಚರ್ಚಿಸಿಲ್ಲ ಎಂದು ಹೇಳಿಕೆ ನೀಡಿರುವ ಕಿರಿಕ್ ಕೀರ್ತಿ ರವರು ನೇರಾನೇರ ಚರ್ಚೆಗೆ ಓಂ ಪ್ರಕಾಶ್ ಅವರನ್ನು ಆಹ್ವಾನಿಸಿದ್ದಾರೆ. ಇನ್ನು ಪರೋಕ್ಷವಾಗಿ ಕೆಲ ಗಂಭೀರ ಅಂಶಗಳ ಚರ್ಚೆಗೆ ಆಹ್ವಾನಿಸಿರುವ ಕಿರಿಕ್ ಕೀರ್ತಿಗೆ ಓಂ ಪ್ರಕಾಶ್ ರಾವ್ ಸ್ಪಂದಿಸ್ತಾರಾ ಎಂಬುದನ್ನ ಇದೀಗ ಕಾದು ನೋಡಬೇಕಿದೆ. ಕೊನೆಗೆ ಬೇರೆ ನಟನನ್ನು ಹಾಕಿಕೊಂಡು ಈ ಚಿತ್ರವನ್ನು ಪೂರ್ಣಗೊಳಿಸಿರುವ ಓಂ ಪ್ರಕಾಶ್ ರವರಿಗೆ ಶುಭ ಕೋರಿರುವ ಕಿರಿಕ್ ಕೀರ್ತಿ ಯವರಯ ನಿಮಗೆ ಒಳ್ಳೆಯದಾಗಲಿ ಎಂದಿದ್ದಾರೆ. ಅಲ್ಲದೇ ಆ ಸಿನಿಮಾಗೆ ಪ್ರಚಾರ ಸಿಗಲಿ ಎಂದು ಈ ಹೇಳಿಕೆ ನೀಡಿರಬಹುದು ಎಂದೂ ಕೂಡ ಕಿರಿಕ್ ಕೀರ್ತಿ ಕಾಲೆಳೆದಿದ್ದಾರೆ.

Leave A Reply

Your email address will not be published.