Kirik Keerthi: ಪತ್ನಿ ಬಿಟ್ಟು ಹೋದ ಬಳಿಕ ದೊಡ್ಡ ನಿರ್ಧಾರ ಪ್ರಕಟಿಸಿದ ಕಿರಿಕ್ ಕೀರ್ತಿ, ಸಿಹಿಸುದ್ದಿ
ಕೆಲವು ಕಿತ್ತೋದ ಮನಸ್ಥಿತಿಗಳು ಯಾವತ್ತೂ ಬದಲಾಗಲ್ಲ. ನಾನು ಮಾನಸಿಕವಾಗಿ ಕುಗ್ಗಿದ್ದಾಗ ಏನೆಲ್ಲಾ ಆಯ್ತು ಅನ್ನೋದನ್ನ ನಿಮ್ಮೆಲ್ಲರಿಗೂ ಹೇಳಿದ್ದೆ..ಅದಾದ ಮೇಲೆ ಮತ್ತೆ ಎಲ್ಲದರಿಂದ ಆಚೆ ಬಂದು ನನ್ನದೇ ಹೊಸ ಬದುಕು ಕಟ್ಟಿಕೊಳ್ತಿದ್ದೇನೆ.. ಆದ್ರೆ ಸೈದ್ದಾಂತಿಕವಾಗಿ ನನ್ನನ್ನು ಎದುರಿಸಲು ಸಾಧ್ಯವಾಗದ ಕೆಲವರು ನನ್ನ ಮಾನಸಿಕವಾಗಿ ಕುಗ್ಗಿದ್ದಾಗ ಡೆತ್‌ನೋಟ್‌ನಂತೆ(Death Note) ಮಾಡಿದ್ದ ವೀಡಿಯೋನ ಎಡಿಟ್ ಮಾಡಿ ನನ್ನನ್ನು ಕುಗ್ಗಿಸೋ ಪ್ರಯತ್ನ ಮಾಡ್ತಿದ್ದಾರೆ.. ಪಾಪ ಅವ್ರಿಗೂ ನನ್ನ ಸೈದ್ದಾಂತಿಕವಾಗಿ ಎದುರಿಸೋಕೆ ತಾಕತ್ ಇಲ್ಲದೇ ಇದ್ದಾಗ ಇದನ್ನೇ ಮಾಡಬೇಕು..
ನಾನು ಕುಗ್ಗೋ ಮಗಾನೇ ಅಲ್ಲ… ನೀವ್ ಇನ್ನು ಇನ್ನೂ ಮಾಡ್ಬೇಕು…ಮೈ ಪರಚಿಕೊಳ್ಬೇಕು…ನಂಗೆ ನಿಮ್ ಉರಿ ಅರ್ಥ ಆಗುತ್ತೆ… ನೌ ಐ ಫೀಲ್ ಐ ಆ್ಯಮ್ ಬ್ಯಾಕ್.. ನಾನು ಸೈದ್ದಾಂತಿಕವಾಗಿ ಹೋರಾಡ್ತೀನಿ…ನೀವು ಪರ್ಸನಲ್ ವಿಷ್ಯ ಏನ್ ಸಿಗುತ್ತೆ ಅಂತ ಹುಡುಕ್ತಾ ಇರಿ… ನಂಗೂ ಇದೆಲ್ಲಾ ಪ್ಲಸ್ ಆಗ್ತಿದೆ… ನಾನು ಹೇಳೋಕಾಗದ ಸಾಕಷ್ಟು ವಿಷಯ ನಿಮ್ ಕಡೆಯಿಂದಾನೇ ಗೊತ್ತಾಗ್ಲಿ… ಥ್ಯಾಂಕ್ಸ್ ಕಣ್ರೊ… ಹೀಗೆ ಫೇಸ್ ಬುಕ್ (Facebook) ನಲ್ಲಿ ಬರೆದುಕೊಂಡಿರುವವರು ಬೇರೆಯಾರು ಅಲ್ಲ.. ಸದ್ಯ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಲ್ಲಿರುವ ನಟ ನಿರೂಪಕ (Actor / Anchor) ಕಿರಿಕ್ ಕೀರ್ತಿ ಯವರು (Kirik Keerthi).
ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈಯಕ್ತಿಕ ವಿಚಾರವಾಗಿ ಹೆಚ್ಚು ಸುದ್ದಿಯಾಗಿದ್ದ ಮಾಜಿ ಬಿಗ್ ಬಾಸ್ (Bigg Boss) ಸ್ಪರ್ಧಿ ಕಿರಿಕ್ ಕೀರ್ತಿ ತಮ್ಮ ಸೈದ್ದಾಂತಿಕ ವಿರೋಧಿಗಳ ವಿರುದ್ಧ ಕಿಡಿಕಾರಿದ್ದಾರೆ. ಇನ್ನು ಇತ್ತೀಚೆಗಷ್ಟೇ ನೋವಿನ ಘಟನೆಯನ್ನು ಕೂಡ ಶೇರ್ ಮಾಡಿಕೊಂಡಿದ್ದ ಅವರು ಜಗತ್ತಿಗೆ ವಿದಾಯ ಹೇಳುವ ನಿರ್ಧಾರ ಮಾಡಿದ್ದೆ ಎಂಬ ವಿಚಾರವನ್ನುಬ ಕೂಡ ಬಹಿರಂಗಪಡಿಸಿದ್ದಾರೆ.
ವೈಯಕ್ತಿಕ ಜೀವನದಲ್ಲಿ (Personal Life) ಉಂಟಾದ ನೋವಿನ ಕಣ್ಣೀರಿನ ಕಥೆಯನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದರು. ಪತ್ರಕರ್ತರಾಗಿಯೂ ಕೂಡ ಹೆಸರು ಮಾಡಿದ್ದ ಕಿರಿಕ್ ಕೀರ್ತಿ ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಿರೋದಾಗಿ ಅನೇಕ ಬಾರಿ ಹೇಳಿಕೊಂಡಿದ್ದು ಆದರೇ ಈ ಬಾರಿ ಜಗತ್ತನ್ನೇ ಬಿಟ್ಟು ಹೋಗುವ ನಿರ್ಧಾರ ಮಾಡಿಬಿಟ್ಟಿದೆ ಎಂಬ ಆಘಾತಕಾರಿ ಸಂಗತಿಯನ್ನು ಕೂಡ ಬಿಚ್ಚಿಟ್ಟಿದ್ದಾರೆ.
ಹೌದು ಮಗನ ಜೊತೆಗಿರುವ ಫೋಟೋ ಶೇರ್ ಮಾಡಿದ ಕಿರಿಕ್ ಕೀರ್ತಿ ರವರು ವೈಯಕ್ತಿಕ ಜೀವನದಲ್ಲಾದ ಕೆಲವು ಘಟನೆಗಳಿಂದ ಡಿಪ್ರೆಷನ್‌ಗೆ ಹೋಗಿದ್ದೆ ಎಂದು ಹೇಳಿದ್ದಾರೆ. ಹೌದು ಅಲ್ಲದೇ ಜಿಹಾದಿಗಳ ಬೆದರಿಕೆ ಕರೆಗಳು ಕುಟುಂಬವನ್ನು ತುಂಬಾ ಡಿಸ್ಟರ್ಬ್ ಮಾಡಿತ್ತು ಎಂದು ಸಾಮಾಜಿಕ ಜಾಲತಾದಲ್ಲಿ ಕಿರಿಕ್ ಕೀರ್ತಿ ದೀರ್ಘವಾದ ಪೋಸ್ಟ್ ಹಂಚಿಕೊಂಡಿದ್ದರು.
ಇನ್ನು ಡೆತ್ ನೋಟ್ ಬರೆದು ಕಣ್ಣು ಮುಚ್ಚಿಕೊಳ್ಳಲಿಲು ಮುಂದಾಗಿದ್ದ ಕಿರಿಕ್ ಕೀರ್ತಿ ಇಂತಹ ನಿರ್ಧಾರ ತೆಗೆದುಕೊಳ್ಳಲು ನಿಖರ ಕಾರಣದ ಬಗ್ಗೆ ರಿವೀಲ್ ಮಾಡಿಲ್ಲ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗೆ ಕಾಮೆಂಟ್ ಅನ್ನು ಹೈಡ್ ಮಾಡಿದ್ದಯಲು ಸೋಶಿಯಲ್ ಮೀಡಿಯಾದಲ್ಲಿ ಕಿರಿಕ್ ಪೋಸ್ಟ್ ನೋಡ್ತಿದ್ದಂತೆ ಅಭಿಮಾನಿಗಳು ಕಿರಿಕ್ ಕೀರ್ತಿ ಧೈರ್ಯವಾಗಿ ಮುನ್ನಡೆಯಿರಿ ಎಂದು ಹೇಳ್ತಿದ್ದಾರೆ.