Actress Nayanthara: ಶಾರುಖ್ ಖಾನ್ ಜೊತೆ ನಟಿಸಲು ಮುಲಾಜಿಲ್ಲದೆ ನಯನತಾರ ಕೇಳಿದ ಸಂಭಾವನೆ ವೈರಲ್

Advertisement
ತಮ್ಮ ಅದ್ಭುತವಾದ ಅಭಿನಯದ ಮೂಲಕವೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದಿರುವ ಮಲ್ಟಿ ಸೂಪರ್ ಕ್ವೀನ್ ಖ್ಯಾತಿಯ ನಯನತಾರ (Nayanthara) ಅವರು ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಇನ್ನು ಸಿನೆಮಾದಿಂದ ದೂರ ಉಳಿತಾರೆ ಅನ್ನೊ ಮಾತಿತ್ತು ಆದರೆ ಇದೀಗ ಮಾತು ಸುಳ್ಳಾಗುವ ಸಾಧ್ಯತೆ ಸಹ ಇದೆ ಎನ್ನಬಹುದು.
ಅದೇ ರೀತಿ ಇತ್ತೀಚೆಗೆ ಅವರ ಮದುವೆಗೂ ಮುಂಚೆ ಸಿದ್ಧಗೊಂಡ ಗಾಡ್ ಫಾದರ್ (Godfather, gold, connect), ಗೋಲ್ಡ್ ಹಾಗೂ ಕನೆಕ್ಟ್ ಸಿನಿಮಾಗಳು ರಿಲೀಸ್ ಆದವು ಆದರೆ ಅವುಗಳು ಗಲ್ಲ ಪೆಟ್ಟಿಗೆ ಸದ್ದು ಮಾಡಲಿಲ್ಲ. ನಯನತಾರ ಅವರು ಇದೀಗ ಬಾಲಿವುಡ್ ನಲ್ಲಿ ನಟಿಸುತ್ತಾರೆ ಎಂದು ಸುದ್ದಿಯಾಗಿದ್ದರು ಅದೇ ರೀತಿ ಈ ಸುದ್ದಿ ಈಗ ಹೊಸ ಟ್ವಿಸ್ಟ್ ಪಡೆಯುತ್ತಿದೆ.
ಸ್ಕಿನ್ ಶೋ ಗೂ ರೆಡಿ
ನಯನತಾರ ಅವರು ಸ್ಕಿನ್ ಶೋ ಮಾಡಲು ಮೊದ ಮೊದಲು ಒಪ್ಪಿದರು ಬಳಿಕ ಅದಕ್ಕೆ ಅವರು ಅಪೋಸ್ ಆದರು ಬಳಿಕ ನಾಯಕಿ ಪ್ರಧಾನ ಸಿನೆಮಾದಲ್ಲೂ ಯಶಸ್ಸು ಪಡೆದರು, ಆದರೆ ಈಗ ಅವರಿಗೆ ಬಾಲಿವುಡ್ ನ ಶಾರುಖ್ ಖಾನ್(Shah Rukh Khan) ಜೊತೆ ನಟಿಸಲು ಅವಕಾಶ ದೊರೆತಿದ್ದು ಅವರು ಈ ಸಿನೆಮಾದಲ್ಲಿ ಬಿಕಿನಿ ತೊಡಲಿದ್ದಾರೆ ಎಂಬ ಮಾತು ಸಹ ಕೇಳಿ ಬರುತ್ತಿದೆ. ಈ ಮೂಲಕ ಮದುವೆಯಾದರೂ ಹಾಟ್ ಆಗಿ ಕಾಣುತ್ತಾರಾ ನಯನತಾರ ಎಂಬುದು ಎಲ್ಲರ ಪ್ರಶ್ನೆಯಾಗಿದೆ.
ಸಂಭಾವನೆ ಎಷ್ಟು?
ನಟಿ ನಯನತಾರ (Nayanthara) ಅವರು ಹಿಂದೆಲ್ಲ ನಟಿಸಿದ್ದ ಸಿನೆಮಾಕ್ಕೆ 5ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರು ಆದರೆ ಈಗ ಈ ಸಿನೆಮಾದಲ್ಲಿ ಸಣ್ಣ ಪಾತ್ರ ಅಭಿನಯಿಸಲು 10ಕೋಟಿ ರೂ. ಸಂಭಟವನೆ ಪಡೆದಿದ್ದಾರೆ ಎಂಬ ಮಾತು ಸಹ ಕೇಳಿಬರುತ್ತಿದೆ. ಈಗಾಗಲೇ ಈ ಸಿನೆಮಾ ರಿಲೀಸ್ ಆಗಬೇಕಿತ್ತು ಆದರೆ ಕಾರಣಾಂತರದಿಂದ ಇದರ ಶೂಟಿಂಗ್ ಇನ್ನು ಬಾಕಿ ಇದ್ದು ಮುಂಬರುವ ಜೂನ್ ತಿಂಗಳಲ್ಲಿ ಸಿನೆಮಾ ರಿಲೀಸ್ ಆಗುತ್ತದೆ ಎನ್ನುವ ಮಾಹಿತಿ ಸದ್ಯ ಲಭ್ಯ ಆಗಿದೆ.