S.S Rajamouli: ರಾಜಮೌಳಿ ಚಿತ್ರಕ್ಕೆ ಆಸ್ಕರ್ ಸಿಗಲು ನಿಜವಾದ ಕಾರಣ ಬಿಚ್ಚಿಟ್ಟ ತಂದೆ, ಭೇಷ್ ಎಂದ ಕನ್ನಡಿಗರು
ದೇಶ ಕಂಡ ಅಪ್ರತಿಮ ಪ್ರತಿಭೆ, ಸ್ಟಾರ್ ನಿರ್ದೇಶಕ ಎಸ್ ಎಸ್ ರಾಜಮೌಳಿ (Raja Mouli) ರಾಜಮೌಳಿಯ ಮುಂದಿನ ಸಿನಿಮಾ ಯಾವುದು ಅಂತ ಕ್ಯುರಾಸಿಟಿ ಯಿಂದ ಈಡಿ ವಿಶ್ವವೇ ಕಾದು ಕುಳಿತ್ತಿರುತ್ತದೆ, ಇದರ ಜೊತೆಗೆ ಹಾಲಿವುಡ್ನ ಶ್ರೇಷ್ಠ ಪ್ರೊಡಕ್ಷನ್ ಹೌಸ್ಗಳು ರಾಜಮೌಳಿ ಜೊತೆ ಕೈಜೋಡಿಸಲು ಕಾಯುತ್ತಿವೆ. ಭಾರತೀಯ ಚಿತ್ರರಂಗದ ಗರಿಮೆಯನ್ನು ವಿಶ್ವಮಟ್ಟದಲ್ಲಿ ಹೆಚ್ಚಿಸಿದ ಕೀರ್ತಿ ರಾಜಮೌಳಿಗೆ ಸಲ್ಲುತ್ತಿದೆ. ಭಾರತಕ್ಕೆ ಆಸ್ಕರ್ ಅವಾರ್ಡ್ (Oscars 2023) ಬರುವಂತೆ ಮಾಡಿರುವ ಸ್ಟಾರ್ ನಿರ್ದೇಶಕ ರಾಜಮೌಳಿ (Rajamouli) ಅವರ ಶ್ರಮ ಸಾಕಷ್ಟಿದೆ ಎಂದು ಹೇಳಬಹುದು
ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ
ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ವನ್ನು ನೇರವೇರಿಸಲಾಯಿತು , ಉದ್ಘಾಟನೆ ಸಮಾರಂಭದಲ್ಲಿ ವಿಶ್ವವಿಖ್ಯಾತ ಸಿನಿಮಾ ನಿರ್ದೇಶಕ ರಾಜಮೌಳಿಯ ತಂದೆ ವಿಜಯೇಂದ್ರ ಪ್ರಸಾದ್ (Vijayendraprasad) ಕೂಡ ಬಂದಿದ್ದರು, ಸಭೆಯನ್ನು ಉದ್ದೇಶಿಸಿ ಮಾತನಾಡಿದ ಇವರು ನನ್ನ ಮಗ ರಾಜಮೌಳಿಗೆ ವಿಶ್ವವಿಖ್ಯಾತಿ ದೊರಕಿರುವುದು ಕನ್ನಡ ತಾಯಿಯ ದಯೆಯಿಂದಲೇ ಎಂದರು. ಇವರ ಹೇಳಿಕೆಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿವೆ.
ಆ ತಾಯಿಗೆ ನಾನು ಹೇಗೆ ಧನ್ಯವಾದ ಹೇಳಲಿ
ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣನ್ನು ಮೆಟ್ಟಬೇಕು ಎಂದು ಮಾತು ಆರಂಭಿಸಿದ ವಿಜಯೇಂದ್ರ ಪ್ರಸಾದ್, ನನ್ನ ಮಗನಿಗೆ ವಿಶ್ವ ಪ್ರಖ್ಯಾತಿ ಸಿಗಲು ಕನ್ನಡ ತಾಯಿಯ ದಯೆ ಕಾರಣ. ಆ ತಾಯಿಯ ದಯೆಯಿಂದಲೇ ನನ್ನ ಮಗನಿಗೆ ಎಲ್ಲವೂ ದೊರಕಿದೆ ಎಂದರು, ಕೆಜಿಎಫ್ ಹಾಗೂ ಕಾಂತಾರ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗ ತನ್ನ ಶಕ್ತಿ ಪ್ರದರ್ಶಿಸಿದೆ. ಕನ್ನಡ ಚಿತ್ರರಂಗವು ತನ್ನ ಪ್ರತಿಭೆಯನ್ನು ಮತ್ತೆ ಮತ್ತೆ ಜಗತ್ತಿಗೆ ಸಾರುತ್ತಲೇ ಇರಲಿ ಎಂಬುದು ನನ್ನ ಹಾರೈಕೆ ಎಂದರು. ಇವರ ಮಾತಿಗೆ ಅಲ್ಲಿದ ಜನರು ಖುಷಿ ವ್ಯಕ್ತ ಪಡಿಸಿದ್ದಾರೆ.