Shah Rukh Khan: ಜಗತ್ತಿನ ನಲ್ಲಿ 4ನೇ ದೊಡ್ದ ಶ್ರೀಮಂತ ನಟ ಕಿಂಗ್ ಖಾನ್! ಆಸ್ತಿ ಹಾಗೂ ಸಂಭಾವನೆ ಇಲ್ಲಿದೆ.

Advertisement
ಕಿಂಗ್ ಖಾನ್ ಶಾರುಖ್ (Shah Rukh Khan) ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕೇವಲ ಬಾಲಿವುಡ್ ಮಾತ್ರ ಕಿಂಗ್ ಖಾನ್ ಬಗ್ಗೆ ಮಾತನಾಡುವುದಿಲ್ಲ ಬದಲಿಗೆ ವಿಶ್ವಾದ್ಯಂತ ಇವರು ಫ್ಯಾನ್ಸ್ ಫಾಲೋವರ್ಸ್ ಹೊಂದಿದ್ದಾರೆ. ಶಾರೂಖ್ ಇತ್ತೀಚಿಗೆ ಸಿನಿಮಾ ಮಾಡೋದು ಕಮ್ಮಿ ಆಗಿತ್ತು ಕಳೆದ ನಾಲ್ಕು ವರ್ಷಗಳ ಬಳಿಕ ಇತ್ತೀಚಿಗೆ ಪಠಾಣ್ ಸಿನಿಮಾದ (Pathaan Movie) ಮೂಲಕ ಮತ್ತೆ ತನ್ನ ಅಭಿಮಾನಿಗಳಿಗೆ ಮನೋರಂಜನೆ ನೀಡಿದರು. ಶಾರುಖ್ ಖಾನ್ ಅವರ ಸಿನಿಮಾ ಅಭಿನಯ ಕಡಿಮೆ ಆಗಿದ್ರು ಅವರಲ್ಲಿ ಇರುವ ಕೋಟಿ ಕೋಟಿ ಆಸ್ತಿಗಳಿಗೆಗೇನೂ ಕಡಿಮೆ ಇಲ್ಲ.
ಕೇವಲ ಸಿನಿಮಾದಿಂದ ಮಾತ್ರವಲ್ಲದೆ ಜಾಹಿರಾತುಗಳಿಂದಲೂ ಕೂಡ ಕಿಂಗ್ ಖಾನ್ (King Khan) ಅವರ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ಹಣ ಸೇರುತ್ತೆ. ಹಾಗಾದ್ರೆ ಶಾರುಖ್ ಖಾನ್ (Shah Rukh Khan) ಅವರು ಒಂದು ಸಿನಿಮಾಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ? ಹಾಗೇನೆ ಜಾಹೀರಾತಿಗೆ ಅವರು ಎಷ್ಟು ಚಾರ್ಜ್ ಮಾಡುತ್ತಾರೆ? ಈಗ ಅವರ ಒಟ್ಟು ಆಸ್ತಿ ಎಷ್ಟಿದೆ ಗೊತ್ತಾ? ಎಲ್ಲಾ ವಿವರಗಳು ಈ ಲೇಖನದಲ್ಲಿದೆ ಮುಂದೆ ಓದಿ.
ಬಾಲಿವುಡ್ ಬಾದ್ಷ ಎಂದೇ ಶಾರುಖ್ ಖಾನ್ ಅವರ ನ ಕರೆಯಲಾಗುತ್ತದೆ. ಅವರು ಬಾಲಿವುಡ್ ಗೆ ಎಂಟ್ರಿ ಕೊಟ್ಟಾಗಿನಿಂದ ಸಾಕಷ್ಟು ಹಿಟ್ ಸಿನಿಮಾಗಳನ್ನೇ ನೀಡಿದ್ದಾರೆ. ಅವರ ಸಿನಿಮಾಗಳು ಒಂದಕ್ಕಿಂತ ಒಂದು ಬಾಕ್ಸ್ ಆಫೀಸ್ (Box Office) ಕೊಳ್ಳೆ ಹೊಡೆಯುವಲ್ಲಿ ಸಕ್ಸಸ್ ಆಗಿತ್ತು. ಅವರ ಇಷ್ಟು ವರ್ಷದ ಸಿನಿಮಾ ಕರಿಯರ್ ನಲ್ಲಿ ಸಿನಿಮಾಗಳಲ್ಲಿ ಗೆಲುವು ಕಂಡಿದ್ದೇ ಜಾಸ್ತಿ.
ಇನ್ನು ಶಾರುಖ್ ಖಾನ್ ಅವರ ಆಸ್ತಿ (Property) ಯ ಮೌಲ್ಯ ಎಷ್ಟು ಇರಬಹುದು ಅಂತ ನಿಮಗೂ ಕುತೂಹಲ ಇದ್ದೇ ಇರುತ್ತೆ. ಅವರ ಆಸ್ತಿಯ ಮೌಲ್ಯ ಬರೋಬರಿ ಆರು ಸಾವಿರ ಕೋಟಿ ರೂಪಾಯಿಗಳು. ಹೌದು ಶಾರುಖ್ ಖಾನ್ ಒಬ್ಬ ಬಿಲೆನಿಯರ್ ಅಂದ್ರೆ ತಪ್ಪಾಗಲ್ಲ. ಸಾಕಷ್ಟು ರಾಜಕಾರಣಿಗಳು ಸಿನಿಮಾರಂಗದಲ್ಲಿ ಇರುವವರು ಕೋಟಿ ಕೋಟಿ ಹಣ ಸಂಪಾದನೆ ಮಾಡಿರುತ್ತಾರೆ. ಆದರೆ ಬಾಲಿವುಡ್ ಬಾದ್ ಷಾ (Bollywood Badshah) ಇವರೆಲ್ಲರ ಆಸ್ತಿ ಮೊತ್ತಕ್ಕಿಂತ ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ.
ಶಾರುಖ್ ಖಾನ್ ಅವರ ವಾರ್ಷಿಕ ಆದಾಯ ಒಂದು ಅಂದಾಜಿನ ಪ್ರಕಾರ ಸುಮಾರು 300 ಕೋಟಿ ರೂಪಾಯಿಗಳು. ಅಂದರೆ ಅವರ ತಿಂಗಳ ಆದಾಯವೇ 25 ಕೋಟಿ ರೂಪಾಯಿಗಳು. ಅಂದ್ರೆ ಒಂದು ದಿನದ ಅವರ ದುಡಿಮೆ ಎರಡು ಕಾಲು ಕೋಟಿ ಅಂದ್ರೆ ನೀವು ನಂಬಲೇಬೇಕು. ಕೆಲವರ ಜೀವಮಾನದಲ್ಲಿ ಕಾಣದಷ್ಟು ಹಣವನ್ನು ಶಾರುಖ್ ಖಾನ್ ಕೇವಲ ಒಂದು ದಿನದಲ್ಲಿ ಗಳಿಸುತ್ತಾರೆ.
ಇನ್ನು ಶಾರುಖ್ ಖಾನ್ ಅವರಿಗೆ ಕೇವಲ ಸಿನಿಮಾದಿಂದ ಇಷ್ಟು ಆದಾಯ ಬರುವುದಿಲ್ಲ. ಸಿನಿಮಾದ ಜೊತೆಗೆ ಅವರು ಸಾಕಷ್ಟು ಜಾಹಿರಾತುಗಳಲ್ಲಿಯೂ ಕಾಣಿಸಿಕೊಳ್ಳುತ್ತಾರೆ ಕೆಲವು ಕಂಪನಿಗಳ ಬ್ರಾಂಡ್ ಅಂಬಾಸಿಡರ್ (Brand Ambassador) ಕೂಡ ಆಗಿದ್ದಾರೆ. ಜೊತೆಗೆ ತಮ್ಮದೇ ಆದ ಪ್ರೊಡಕ್ಷನ್ ಹೌಸ್ ರೆಡ್ ಚಿಲ್ಲೀಸ್ ನಿಂದ, ಇತರ ಉದ್ಯಮಗಳಿಂದ ಬರುವ ಆದಾಯ, ಬ್ಯಾಂಕ್ ನಲ್ಲಿ ಇಟ್ಟ ಹಣದಿಂದ ಬರುವ ಬಡ್ಡಿ ಇವೆಲ್ಲವುಗಳಿಂದ ಕೋಟಿ ಕೋಟಿ ಆದಾಯ ಗಳಿಸುತ್ತಾರೆ ಕಿಂಗ್ ಖಾನ್.
ಅಷ್ಟೇ ಅಲ್ಲ ಐಪಿಎಲ್ (IPL) ನ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ತಂಡ, ಕೆರೆಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಟಿಕೆಆರ್ ಮೊದಲಾದ ಕ್ರಿಕೆಟ್ ತಂಡಗಳ ಮಾಲೀಕರು ಆಗಿರುವ ಶಾರುಖ್ ಖಾನ್ ಅವರು ಇದರಿಂದಲೂ ಸಾಕಷ್ಟು ಆದಾಯ ಗಳಿಸುತ್ತಾರೆ. ಇನ್ನು ಶಾರುಖ್ ಖಾನ್ ಅವರು ಸಿನಿಮಾಕ್ಕೆ ತೆಗೆದುಕೊಳ್ಳುವ ಸಂಭಾವನೆ ಕೇಳಿದ್ರೆ ನಿಜಕ್ಕೂ ತಲೆ ತಿರುಗುತ್ತದೆ. ಸಿನಿಮಾಕ್ಕೆ ಕೋಟೊ ಕೋಟಿ ಸಂಭಾವನೆಯನ್ನು ಪಡೆಯುವ ಶಾರುಖ್ ಖಾನ್ ಇತ್ತೀಚಿನ ಅವರ ಪಠಾಣ್ ಸಿನಿಮಾದ ಅಭಿನಯಕ್ಕಾಗಿ ಬರೋಬರಿ ನೂರು ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಜಾಹೀರಾತಿನಿಂದ ಕೂಡ ಶಾರುಖ್ ಖಾನ್ ಅವರ ಬ್ಯಾಂಕ್ ಬ್ಯಾಲೆನ್ಸ್ (Bank Balance) ಹೆಚ್ಚಿದೆ. ಬಿಗ್ ಬಾಸ್ಕೆಟ್, ಬೈಜೂಸ್, ಜಿಯೋ, ಹುಂಡೈ, ಮೊದಲಾದ ಕಂಪನಿಗಳ ಜಾಹೀರಾತಿನಲ್ಲಿ ಶಾರುಖ್ ಖಾನ್ ಕಾಣಿಸಿಕೊಳ್ಳುತ್ತಾರೆ. 14ಕ್ಕೂ ಹೆಚ್ಚು ಜಾಹಿರಾತು ಕಂಪನಿಗಳಿಗೆ ಶಾರುಖ್ ಖಾನ್ ಅವರ ಪ್ರಸೆಂಟೇಶನ್ ಇದೆ. ಶಾರುಖ್ ಖಾನ್ ಒಂದು ಬ್ರ್ಯಾಂಡನ್ನು ಎಂಡೋಸ್ ಮಾಡೋಕೆ ಸುಮಾರು ಐದರಿಂದ ಹತ್ತು ಕೋಟಿ ಚಾರ್ಜ್ ಮಾಡುತ್ತಾರೆ ಎನ್ನಲಾಗಿದೆ.
ಶಾರುಖ್ ಖಾನ್ ಮುಂಬೈದಲ್ಲಿರುವ ಮನ್ನತ್ ಎನ್ನುವ ಬಂಗಲೆಯ ಒಡೆಯ. ಈ ಬಂಗಲೆಯ ಮೌಲ್ಯ ಸುಮಾರು 200 ಕೋಟಿ. ತನ್ನ ಜೀವಮಾನದಲ್ಲಿ ಅತ್ಯಂತ ದುಬಾರಿ ವಸ್ತುವನ್ನು ಕೊಂಡುಕೊಂಡಿದ್ದು ಅಂದರೆ ಅದು ಇದೆ ಬಂಗಲೆ ಎಂದು ಸಂದರ್ಶನ ಒಂದರಲ್ಲಿ ಕಿಂಗ್ ಖಾನ್ ಹೇಳಿದ್ದರು. ಇದೇ ಬಂಗಲೆಯ ಮೇಲೆ ನಿಂತು ಅಭಿಮಾನಿಗಳಿಗೆ ಆಗಾಗ ಕೈ ಬೀಸುವ ಶಾರುಖ್ ಖಾನ್ ಅವರಿಗೆ ಮನ್ನತ್ ಅಂದ್ರೆ ಜನ್ನತ್ ಅಂತೆ.
ಅಂದಹಾಗೆ ಶಾರುಖ್ ಖಾನ್ ಜಗತ್ತಿನ ನಾಲ್ಕನೇ ಶ್ರೀಮಂತ ನಟ ಎನ್ನುವ ಲಿಸ್ಟ್ ಗೆ ಸೇರಿದ್ದಾರೆ. 57 ವರ್ಷದ ಯಂಗ್ ಅಂಡ್ ಎನರ್ಜಿಟಿಕ್ ಆಗಿರುವ ಕಿಂಗ್ ಖಾನ್ ಶಾರುಖ್ ಅವರು ಜಗತ್ತಿನ ನಾಲ್ಕನೇ ಶ್ರೀಮಂತ ನಟ ಎನಿಸಿದ್ದು ಹಾಲಿವುಡ್ ನಟರಿಗಿಂತ ಹೆಚ್ಚು ಸಂಪಾದನೆ ಮಾಡುವ ನಟ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶಾರುಖ್ ಖಾನ್ ಅವರ ಕೈಯಲ್ಲಿ ಪಠಾಣ್ ನಂತರ ಇನ್ನಷ್ಟು ಪ್ರಾಜೆಕ್ಟ್ ಗಳು ಇದ್ದು, ಇವರ ಆದಾಯ 6,000 ಕೋಟಿಯನ್ನ ಮೀರಿ ಬೆಳೆಯುವುದರಲ್ಲಿ ನೋ ಡೌಟ್.