ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್(Puneeth Rajkumar) ನಮ್ಮನ್ನ ಬಿಟ್ಟು ಹೋಗಿ ಒಂದು ವರ್ಷ ಕಳೆದಿದೆ. ಆದರೆ ಇನ್ನು ಕೂಡಾ ಅವರ ನಗು, ಅವರ ಮಾತುಗಳು ಅಭಿಮಾನಿಗಳ ಮನಸ್ಸಿನಲ್ಲಿ ಹಾಗೇ ಇದರು. ಅಪ್ಪು ದೈಹಿಕವಾಗಿ ಬಿಟ್ಟು ಹೋಗಿದ್ದಾರೆ ಅಷ್ಟೇ, ಜನರ ಮನಸ್ಸಿನಲ್ಲೂ ಸದಾ ಜೀವಂತವಾಗಿರುತ್ತಾರೆ.ಜನರಿಗೆ ಅಪ್ಪು ಎಷ್ಟು ಇಷ್ಟವೋ ಅಷ್ಟೆ ಪ್ರಮಾಣದಲ್ಲಿ ಅವರ ಸಿನೆಮಾಗಳು ಕೂಡಾ ಜನರಿಗೆ ಇಷ್ಟವಾಗುತ್ತದೆ. ಅವರ ನಟನೆ, ಡೈಲಾಗ್ ಗಳು ನೋಡುಗರನ್ನು ಸೆಳೆಯುತ್ತದೆ. ಅಪ್ಪು ಸಿನೆಮಾದಲ್ಲಿ ಮತ್ತೆರಡು ಹೈಲೈಟ್ಸ್ ಗಳೆಂದರೆ ಅವರ ಡ್ಯಾನ್ಸ್ ಮತ್ತು ಫೈಟ್.
ಅಪ್ಪು ನಂತೆ ಕುಣಿಯಲು ಯಾರಿಗೂ ಸಾಧ್ಯವಿಲ್ಲ, ಸದಾಕಾಲ ಫಿಟ್ ನೆಸ್ ಗೆ ಬಹಳ ಪ್ರಾಮುಖ್ಯತೆ ಕೊಡುತ್ತಿದ್ದ ಅಪ್ಪು ಯಾವುದೇ ಸ್ಟೆಪನ್ನು ಕೂಡಾ ಸಲೀಸಾಗಿ ಮಾಡುತ್ತಿದ್ದರು.ಸಕಲ ಕಲಾ ವಲ್ಲಭನ ಫೈಟ್ ಕೂಡಾ ಜನರಿಗೆ ಅಷ್ಟೆ ಇಷ್ಟವಾಗುತ್ತಿತ್ತು. ಅಪ್ಪು ಹೇಗೆ ಶೂಟಿಂಗ್ ಸೆಟ್ನಲ್ಲಿ ಇರುತ್ತಿದ್ದರು ಎನ್ನುವ ಮಾಹಿತಿಯನ್ನು ಥ್ರಿಲರ್ ಮಂಜು ಹಂಚಿಕೊಂಡಿದ್ದಾರೆ. ನಾನು ರಾಜ್ ಅಣ್ಣನ ಕುಟುಂಬದ ಎಲ್ಲಾ ನಟರಿಗೂ ಫೈಟ್ ಮಾಸ್ಟರ್ ಆಗಿ ಕೆಲಸ ಮಾಡಿದ್ದೇನೆ ಪುನೀತ್ ಅವರ ಜೊತೆಗೂ ವಂಶೀ ಸಿನೆಮಾದಲ್ಲಿ ಕೆಲಸ ಮಾಡಿದ್ದೇನೆ ಎಂದರು.
ಪುನೀತ್ ರಾಜ್ ಕುಮಾರ್ ಅವರಿಗೆ ವಂಶಿ ಚಿತ್ರಕ್ಕೆ ಫೈಟ್ ಸೀನ್ಗಳನ್ನು ಥ್ರಿಲರ್ ಮಂಜು ಅವರೇ ಮಾಡಿದ್ದಾರೆ.ಅಪ್ಪು ತುಂಬಾ ಸರಳ ವ್ಯಕ್ತಿ, ತನಗೆ ಎಲ್ಲಾ ಗೊತ್ತು ಎಂಬೂದನ್ನು ಎಂದಿಗೂ ಅವರು ಹೇಳಿಕೊಳ್ಳುತ್ತಿರಲಿಲ್ಲ.ಯಾವುದೇ ಕಷ್ಟದ ಫೈಟ್ ಸೀನ್ಗಳನ್ನು ಕೂಡಾ ಸ್ವಂಯಂ ರಿಸ್ಕ್ ತೆಗೆದುಕೊಂಡು ಮಾಡುತ್ತಿದ್ದರು. ಇದು ಸಾಧ್ಯವಿಲ್ಲ ಅಂತ ಅವರು ಎಂದಿಗೂ ಹೇಳುತ್ತಿರಲಿಲ್ಲ.ನಾನು ಫೈಟ್ ಕಂಪೋಸ್ ಮಾಡುತ್ತಿದ್ದರೆ ಸುಮ್ಮನೆ ನೋಡುತ್ತಿದ್ದರು. ಆನಂತರ ಪ್ರಯತ್ನ ಮಾಡುತ್ತಿನಿ ಎನ್ನುತ್ತಿದ್ದರೆ . ಆದರೆ ಫರ್ಪೆಕ್ಟ್ ಆಗಿ ಮಾಡುತ್ತಿದ್ದರೆ. ಶೂಟಿಂಗ್ ಸೆಟ್ ನಲ್ಲಿ ಹೆಚ್ಚು ಮಾತನಾಡುತ್ತಿರಲಿಲ್ಲ, ಕೆಲಸಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರು. ಆದರೆ ಶೂಟಿಂಗ್ ಹೊರಗೆ ಎಲ್ಲರನ್ನು ಆತ್ಮೀಯವಾಗಿ ಕಾಣುತ್ತಿದ್ದರು ಎಂದಿದ್ದಾರೆ.