Karnataka Times
Trending Stories, Viral News, Gossips & Everything in Kannada

Actress Malashree: ಮಾಲಾಶ್ರೀಯಂತೆ ಅವರ ತಂಗಿ ಶುಭಾಶ್ರೀ ಏಕೆ ಮಿಂಚಿಲ್ಲ, ಇಲ್ಲಿದೆ ಅಸಲಿ ಸತ್ಯ

Advertisement

ಚಂದನವನದಲ್ಲಿ ಕನಸಿನ ರಾಣಿಯಾಗಿ (Dream Girl) ಹಾಗೂ ಮೋಹಕ ನಟಿಯಾಗಿ ಮೆರೆದವರು ನಟಿ ಮಾಲಾಶ್ರೀ (Malashree) ಯವರು. 90 ರ ದಶಕದಲ್ಲಿ ಹೀರೋಗಳಿಗೆ (Hero) ಇದ್ದಷ್ಟೇ ಪ್ರಾಮುಖ್ಯತೆ ಮಾಲಾಶ್ರೀಯವರಿಗೂ ಇತ್ತು ಎಂದರೆ ಖಂಡಿತವಾಗಿಯೂ ತಾವು ನಂಬಲೇ ಬೇಕಾದ ವಿಚಾರವಾಗಿದೆ.

ಕನ್ನಡ (Kannada) ಚಿತ್ರರಂಗ ಮಾತ್ರವಲ್ಲದೆ ತಮಿಳು ಮತ್ತು ತೆಲುಗು (Tamil & Telugu) ಚಿತ್ರರಂಗದಲ್ಲಿಯೂ ಕೂಫ ಯಶಸ್ವಿ ನಟಿಯಾಗಿದ್ದ ಮಾಲಾಶ್ರೀ ಆಗಿನ ಕಾಲದ ಎಲ್ಲಾ ಹುಡುಗರ ಮೋಸ್ಟ್ ಫೇವರೆಟ್ ನಟಿ ಕೂಡ ಆಗಿದ್ದರು. ಇನ್ನು 90ರ ದಶಕದಲ್ಲಿ ಸಾಲುಸಾಲು ಹಿಟ್ ಸಿನಿಮಾಗಳನ್ನೇ ನೀಡುತ್ತಾ ಬಂದ ಮಾಲಾಶ್ರೀ ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್ ನಟರ ಜೊತೆ ನಟಿಸಿದ ಹೆಗ್ಗಳಿಕೆ ಇವರದ್ದಾಗಿದ್ದು ಅಲ್ಲದೇ ಇವರ ಕಾಲಿಶೀಟ್ ಗಾಗಿಯೂ ನಿರ್ಮಾಪಕ ನಿರ್ದೇಶಕರು (Producer & Director) ಕಾದು ಕುಳಿತಿರುತ್ತಿದ್ದರು.

ಇನ್ನು ಮಾಲಾಶ್ರೀ ಅವರಿಗೆ ಒಬ್ಬರು ತಂಗಿ ಸಹ ಇದ್ದು ಮಾಲಾಶ್ರೀ ಅವರ ತಂಗಿ ಕೂಡ ನಟಿಯಾಗಿದ್ದರು. ಆದರೆ ನಾಲ್ಕೇ ವರುಷಕ್ಕೆ ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಾರೆ. ಕನಸಿನ ರಾಣಿ ಮಾಲಾಶ್ರೀ ಅವರ ತಂಗಿಯ ಹೆಸರು ಶುಭಶ್ರೀ (Shubhasri) ಎಂಬುದಾಗಿದ್ದು ಇವರು ಕೂಡ ನಟಿಯಾಗಿ ಕೆಲವು ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ (KFI) ಕೆಲಸ ಮಾಡಿದ್ದಾರೆ. ಆದರೆ ವಿಪರ್ಯಾಸವೆಂದರೆ ಅಕ್ಕನ ಹಾಗೆ ಶುಭಶ್ರೀ ರವರು ಹೆಚ್ಚಿನ ಯಶಸ್ಸು ಕಾಣಲಿಲ್ಲ.

ಹೌದು ಶುಭ ಅವರು ಸಹ ಆಗಿನ ಕಾಲದ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದು ಸುಳಿ ಮಾವನ ಮಗಳು ಸೇರಿದಂತೆ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಅಕ್ಕನ ಹಾಗೆ ಇವರಲ್ಲಿ ಸಹ ಪ್ರತಿಭೆ ಇದ್ದರು ಕೂಡ ಯಶಸ್ಸು ಇವರ ಪಾಲಿಗೆ ಒಲಿಯಲಿಲ್ಲ. ಹಲವಾರು ಸಿನಿಮಾಗಳಲ್ಲಿ ನಟಿಸಿದರು ಸಹ ಇವರಿಗೆ ಜನಪ್ರಿಯತೆ ಸಿಕ್ಕಿದ್ದು ಒಂದು ಹಾಡಿನ ಮೂಲಕ. ನಟ ದೇವರಾಜ್ (Devraj) ಅಭಿನಯದ ಸರ್ಕಲ್ ಇನ್ಸ್ಪೆಕ್ಟರ್ (Circle Inspector) ಸಿನಿಮಾದ ಒಂದು ಹಾಡಿನಲ್ಲಿ ಶುಭ ಕಾಣಿಸಿಕೊಂಡಿದ್ದರು.

ಹೌದು ಊರ್ಮಿಳಾ (Urmila) ಎನ್ನುವ ಹಾಡು ನೆನಪಿದೆ ಅಲ್ಲವೇ ಇಂದಿಗು ಸಹ ಈ ಹಾಡು ಬಹಳ ಫೇಮಸ್ ಆಗಿದ್ದು ಹಲವಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ಈಗಲೂ ಕೂಡ ಈ ಹಾಡಿಗೆ ಹೆಜ್ಜೆ ಹಾಕುತ್ತಾರೆ. ಈ ಹಾಡಿನಲ್ಲಿ ಶುಭಶ್ರೀ ಅವರ ನೃತ್ಯವನ್ನು ಯಾರು ಮರೆಯಲು ಸಾಧ್ಯವಿಲ್ಲ.ಹೌದು ಟ್ಯಾಲೆಂಟ್ ಮತ್ತು ಲುಕ್ಸ್ ಎರಡು ಇದ್ದರು ಸಹ ಇವರಿಗೆ ಅಕ್ಕನಿಗೆ ಸಿಕ್ಕಷ್ಟು ಅದೃಷ್ಟ ಯಶಸ್ಸು ಸಿಗಲಿಲ್ಲ ಎಂಬುದು ಬೇಸರದ ಸಂಗತಿಯಾಗಿದ್ದು ಈ ಕಾರಣದಿಂದಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಾಲ್ಕೇ ವರುಷಕ್ಕೆ ಗುಡ್ ಬೈ ಹೇಳುತ್ತಾರೆ. ಅದೃಷ್ಟ ಎನ್ನುವುದು ಎಲ್ಲರಿಗೂ ಸಿಗುವುದಿಲ್ಲ ಎನ್ನುವುದಕ್ಕೆ ಶುಭ ಅವರು ಪ್ರತ್ಯಕ್ಷ ಸಾಕ್ಷಿಯಾಗಿದ್ದು ಮಾಲಾಶ್ರೀ ಅವರ ಪತಿ ಅಗಲಿದ ಸಮಯದಲ್ಲಿ ಶುಭಶ್ರೀ ಅವರು ಬೆಂಗಳೂರಿಗೆ ಬಂದು ಮಾಲಾಶ್ರೀ ಅವರಿಗೆ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದರು.

Leave A Reply

Your email address will not be published.