Karnataka Times
Trending Stories, Viral News, Gossips & Everything in Kannada

Abhishek Ambareesh: ಈಗಾಗಲೇ ಮದುವೆಯಾಗಿದ್ದ ಅವಿವಾ ಜೊತೆ ಪ್ರೀತಿ ಏಕೆ ಎಂದು ತಿಳಿಸಿದ ಅಭಿಷೇಕ್ ಅಂಬರೀಷ್

Advertisement

ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ (Abhishek Ambarish) ಅವರು ನಟಿಸಿದ್ದು ಕೆಲವೇ ಸಿನೆಮಾವಾದರೂ ಕೂಡ ಅವರಿಗೆ ಕೂಡ ಬಹುತೇಕ ಅಭಿಮಾನಿಗಳು ಇದ್ದಾರೆ, ಕಳೆದ ಕೆಲವು ದಿನಗಳಿಂದ ಅಭಿಷೇಕ್ ಅಂಬರೀಶ್ ಮದುವೆ ಬಗ್ಗೆ ಜೋರಾಗಿ ಸುದ್ದಿಯಾಗಿತ್ತು, ಆದರೆ ಆ ಸುದ್ದಿ ಗೆ ನಿಶ್ಚಿತಾರ್ಥ ಆಗುವ ಮೂಲಕ ಉತ್ತರ ನೀಡಿದ್ದಾರೆ, ಈ ಹಿಂದೆ ಮಧ್ಯಮದವರು ಹುಡುಗಿ ಯಾರೆಂದು ಕೇಳಿದಾಗ ಉತ್ತರಿಸಿದ ಅಭಿಷೇಕ್,

ಹುಡುಗಿ ಯಾರೂ ಅಂತಾನೆ ನಂಗೆ ಗೊತ್ತಿಲ್ಲ, ಪ್ರತಿ ವರ್ಷ ನನಗೆ ಎಂಗೇಜ್ ಮೆಂಟ್(Engagement) ಮಾಡಿಸ್ತೀರಾ, ನೀವು ಮಾಧ್ಯಮಗಳು ಹರಡಿಸುತ್ತಿರೋ ಸುದ್ದಿ ನಂಬಿ ಮುಂದೆ ನನಗೆ ಹೆಣ್ಣು ಸಿಗೋದು ಡೌಟ್ ಎಂದಿದ್ದರು, ಆದರೆ ಈಗ ಅವಿವಾ ಬಿದ್ದಪ್ಪ ಪ್ರೀತಿ ವಿಚಾರವಾಗಿ ಅಭಿಷೇಕ್ ಮಾಹಿತಿ ನೀಡಿದ್ದಾರೆ, ಇಬ್ಬರ ಪ್ರೀತಿಯನ್ನು ಮನೆಯಲ್ಲಿ ಗುರು-ಹಿರಿಯರು ಒಪ್ಪಿಕೊಂಡು ಮದುವೆ ಮಾಡಿಸಲು ಕೂಡ ಮುಂದಾಗಿದ್ದಾರೆ

ಅವಿವಾ ಜೊತೆ ಪ್ರೀತಿ ಆಗಿದ್ದು ಹೇಗೆ

ಇತ್ತೀಚೆಗಷ್ಟೇ ನಟ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ ಮಾಡಿಕೊಂಡಿದ್ದು ಮದುವೆನೆ ಆಗೊಲ್ಲ ಅಂದಿದ್ದೊರು ಸಡನ್ ಶಾಖ್ ನೀಡಿದ್ದರು, ಈ‌ ಬಗ್ಗೆ ಮಾತನಾಡಿದ ಇವರು ಒಂದಷ್ಟು ವರ್ಷಗಳ ಹಿಂದೆ ಒಂದು ಸ್ಥಳ ದಲ್ಲಿ ಅವಿವಾ ಅವರನ್ನು ನೋಡಿದ್ದೆ. ಸ್ನೇಹಿತರ ಮೂಲಕ ಅವರ ಪರಿಚಯವೂ ಆಯಿತು. ನಂತರ ಸ್ನೇಹಿತರಾಗಿ ಒಂದಷ್ಟು ವರ್ಷಗಳ ಕಾಲ ಇದ್ವಿ‌‌.. ಆ ಸ್ನೇಹ ಪ್ರೀತಿಯಾಗಿ ಈಗ ಮದುವೆ ಆಗ್ತಾ ಇದ್ದೀವಿ ಅಷ್ಟೇ ಎಂದಿದ್ದಾರೆ.

ನನಗೆ ಎಲ್ಲಾ ರೀತಿಯೂ ಬೆಂಬಲವಾಗಿ ನಿಂತಿದ್ದಾರೆ

ಎಲ್ಲಾ ವಿಚಾರದಲ್ಲಿಯೂ ಬೆಂಬಲವಾಗಿ ನಿಂತಿದ್ದಾರೆ, ಕೆಲಸದ ವಿಚಾರವಾಗಿ ಆಗಿರಬಹುದು ಅಥವಾ ಫ್ಯಾಮಿಲಿ ವಿಚಾರವಾಗಿ ಆಗಿರಬಹುದು ತುಂಬಾ ಸಪೋರ್ಟ್(Support) ಮಾಡ್ತಾರೆ,ಪ್ರೀತಿ ಅಂತ ಏನಿಲ್ಲಾ ಸ್ನೇಹಿತರಾಗಿ ಪರಿಚಯ ಇತ್ತಷ್ಟೆ ,ಈಗ ಮದುವೆ ಯಾಗೋಣ ಅನಿಸಿದೆ ಅಷ್ಟೆ, ಎಂದಿದ್ದಾರೆ

ಅವಿವಾ ಅವರಿಗೆ ಎರಡನೇ ಮದುವೆ ಎಂಬ ಸುದ್ದಿ

ಅವಿವಾ(Aviva) ಅವರಿಗೆ ಎರಡನೇ ಮದುವೆ ಎಂಬ ವಿಚಾರವೂ ಸುದ್ದಿಯೂ ಆಗಿತ್ತು. 32 ವರ್ಷದ ಅವಿವಾ ಅವರು ಫ್ಯಾಷನ್ ಡಿಸೈನರ್(Fashon Designer) ಆಗಿದ್ದಾರೆ, ಪ್ರಸಾದ್ ಬಿದ್ದಪ್ಪ ಅವರ ಮಗಳಾಗಿದ್ದು, ವರ್ಷಗಳ ಹಿಂದೆ ಉದ್ಯಮಿಯೊಬ್ಬರನ್ನು ಮದುವೆಯಾಗಿದ್ದರು. ನಂತರ 2016 ರಲ್ಲಿ ವ್ಯಯಕ್ತಿಕ ಕಾರಣಗಳಿಂದ ಅವರಿಂದ ದೂರವಾಗಿದ್ದರು.. ಇದೀಗ ಅಭಿಷೇಕ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.