Karnataka Times
Trending Stories, Viral News, Gossips & Everything in Kannada

Dr Vishnuvardhan: ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡುತ್ತೇನೆ ಎಂದರು ವಿಷ್ಣು ದಾದ ಏಕೆ ಚುನಾವಣೆಗೆ ನಿಲ್ಲಲಿಲ್ಲ ಗೊತ್ತೇ? ಸತ್ಯ ಇಲ್ಲಿದೆ

Advertisement

ನಮ್ಮೆಲ್ಲರ ನೆಚ್ಚಿನ ಸಾಹಸಸಿಂಹ ವಿಷ್ಣುವರ್ಧನ್ (Vishnu vardhan) ಅವರು ಅಭಿನಯಿಸಿದ್ದ ಸಿನೆಮಾ ಈಗಲೂ ಉತ್ತಮ ಸ್ಥಾನಮಾನವನ್ನು ಕಲ್ಪಿಸುತ್ತದೆ. ಅಭಿನಯ ಭಾರ್ಗವ ಎಂದೂ ಕರೆಯುವ ಡಾ.ವಿಷ್ಣುವರ್ಧನ್ ನಾಗರಹಾವು (Nagara Havu) ಚಿತ್ರದ ಮೂಲಕ ಯುವಕನಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ ಕನ್ನಡದ ಪ್ರೀತಿಯ ನಟ , ಮೊದಲಿಂದಲೂ ಫೇಮಸ್ ಆದ ನಟ, ಯಜಮಾನ (Yajamana) ಎಸ್ ನಾರಾಯಣ್ ನಿರ್ದೇಶನದಲ್ಲಿ ಮೂಡಿ ಬಂದ ಸೂರ್ಯವಂಶ ಹಾಗೂ ಸಿಂಹಾದ್ರಿಯ ಸಿಂಹ ಸಿನೆಮಾ ಹೀಗೆ ಹಲವಾರು ಚಿತ್ರ ಸೂಪರ್ ಹಿಟ್ ಆಗಿತ್ತು.

ಸಾಹಸ ಸಿಂಹ ಬಿರುದು

ಕನ್ನಡ ಚಿತ್ರರಂಗದಲ್ಲಿ ನಟಿಸಿದ ನಂತರ ಇವರಿಗೆ ವಿಷ್ಣುವರ್ಧನ್ ಎಂಬ ಹೆಸರು ಬಂತು. ಸಾಹಸಸಿಂಹ ಎಂಬ ಬಿರುದು ಪಡೆದ ಡಾ.ವಿಷ್ಣುವರ್ಧನ್ ಸುಮಾರು 200ಕ್ಕೂ ಅಧಿಕ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ ಪೇಮ್ ಕ್ರಿಯೇಟ್ ಮಾಡಿ ಕೊಂಡರು . ಭಗ್ನ ಪ್ರೇಮಿಯಾಗಿ, ರೋಷಭರಿತ ಖೈದಿಯಾಗಿ, ಖಡಕ್ ಪೋಲಿಸ್ ಅಧಿಕಾರಿಯಾಗಿ ಹೀಗೆ ಹಲವಾರು ಪಾತ್ರಗಳ ಮೂಲಕ ವಿಷ್ಣುವರ್ಧನ್ ಅಜರಾಮರವಾಗಿದ್ದಾರೆ.

ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡುತ್ತೇನೆ ಎಂದಾಗ ವಿಷ್ಣು ಹೇಳಿದ್ದೇನು

ಸಿನಿಮಾ ಕ್ಷೇತ್ರದಲ್ಲಿ ಫೇಮಸ್ಸ್ ಆಗಿದ್ದ ನಟನನ್ನು ರಾಜಕೀಯ ಪಕ್ಷಗಳು ವಿಷ್ಣುವರ್ಧನ್ ಅವರನ್ನು ರಾಜಕೀಯಕ್ಕೆ ಪ್ರವೇಶ ಮಾಡಲಿ ಎನ್ನುವ ಉದ್ದೇಶದಿಂದ ಪ್ರಯತ್ನಗಳನ್ನು ಮಾಡಿದ್ದಾರೆ, ಅಂಬರೀಶ್ ಅವರ ಮೂಲಕ ಆದರೂ ವಿಷ್ಣುವರ್ಧನ್ ಅವರನ್ನು ಕರೆತರಬೇಕು ಎಂದು ಬಹಳ ಪ್ರಯತ್ನ ಮಾಡಿದರು, ಕಾಂಗ್ರೇಸ್ ಪಕ್ಷದ ಮೂಲಕ ಟಿಕೆಟ್ ಕೊಡುತ್ತೇವೆ ಎಂದರೂ ವಿಷ್ಣುದಾದ ಅವರು ರಾಜಕೀಯಕ್ಕೆ ಬರಲು ಒಪ್ಪಲೇ ಇಲ್ಲ.

ರಾಜಕೀಯಕ್ಕೆ ಬರಲು ಆಸಕ್ತಿ ಇಲ್ಲ

ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ ಅಂತ ಅಲ್ಲ, ಆಸಕ್ತಿ ಇದೆ. ರಾಜಕೀಯದಲ್ಲಿ ಆಸಕ್ತಿ ಇದೆ ಹೊರತು ರಾಜಕೀಯಕ್ಕೆ ಬರಲು ಆಸಕ್ತಿ ಇಲ್ಲ ಎಂದೂ ಹೇಳಿಕೊಂಡಿದ್ದರು, ನನ್ನದು ಸಿನಿಮಾ ಕ್ಷೇತ್ರ, ನನ್ನ ವೃತ್ತಿ‌ ಇದೇ ಹೇಳಿಕೊಂಡಿದ್ದಾರೆ, ಈ ಕಾರಣಕ್ಕೆ ಅವರು ಟಿಕೆಟ್ ಪಡೆದುಕೊಂಡಿಲ್ಲ.

Leave A Reply

Your email address will not be published.