Karnataka Times
Trending Stories, Viral News, Gossips & Everything in Kannada

H.D KumaraSwamy: ನಿಮ್ಮದು ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜಾ ಪ್ರಶ್ನೆಗೆ ಹೆಚ್‍ಡಿಕೆ ಕೊಟ್ಟ ಉತ್ತರ ಇಲ್ಲಿದೆ

Advertisement

ರಾಜ್ಯದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ(H.D KumarSwamy) ಅವರು ಇತ್ತೀಚೆಗೆ ಖಾಸಗಿ ವಾಹಿನಿ ಒಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದ ವೇಳೆ ತಮ್ಮ ವೈಯಕ್ತಿಕ ಜೀವನದ ಹಲವಾರು ಘಟನೆಗಳನ್ನ ಹೆಚ್ ಡಿ ಕುಮಾರಸ್ವಾಮಿ ಅವರು ಹಂಚಿಕೊಂಡಿದ್ದಾರೆ.ಎಚ್ ಡಿ ಕುಮಾರಸ್ವಾಮಿ ಅವರಿಗೆ 63 ವರ್ಷ ವಯಸ್ಸು. ಅವರ ಕುಟುಂಬವೇ ರಾಜಕೀಯದಲ್ಲಿ ಬಹಳ ವರ್ಷಗಳಿಂದಲೂ ಇರುವುದರಿಂದ ಸಹಜವಾಗಿಯೇ ಕುಮಾರ ಸ್ವಾಮಿ ಹಾಗೂ ಅವರ ಮಗ ಕೂಡ ರಾಜಕೀಯದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ.

ಎಚ್ ಡಿ ಕುಮಾರಸ್ವಾಮಿ ಅವರು, ರಾಜ್ಯದ 18ನೇ ಮುಖ್ಯಮಂತ್ರಿ ಆಗಿ ಒಂದು ವರ್ಷ ಅವಧಿಗೆ ಕಾರ್ಯನಿರ್ವಹಿಸಿದ್ದಾರೆ. ಈಗಲೂ ಚುನಾವಣೆ ಪ್ರಚಾರದ ಕಾರ್ಯದಲ್ಲಿ ತೊಡಗಿಕೊಂಡಿರುವ ಕುಮಾರಸ್ವಾಮಿ ತಮ್ಮ ಮದುವೆ ಹಾಗೂ ತಾಯಿಯ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಕೆಲವು ವಿಚಾರಗಳನ್ನ ಬಹಿರಂಗಪಡಿಸಿದ್ದಾರೆ.

ನೀವು ಮದುವೆಯಾದ ಮೇಲೆ ನಿಮ್ಮ ತಾಯಿಯ ಜೊತೆಗೆ ಸಂಬಂಧ ಹೇಗಿತ್ತು ಎಂದು ಕುಮಾರಸ್ವಾಮಿ ಅವರನ್ನ ಪ್ರಶ್ನೆ ಮಾಡಲಾಗಿತ್ತು. ನನ್ನದು ಗುರುಹಿರಿಯರು ನಿಶ್ಚಯಿಸಿ ಮಾಡಿದ ಮದುವೆ. ಹಾಗಾಗಿ ಮನೆಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ ತಾಯಿ ಯಾವತ್ತೂ ತನ್ನ ಸೊಸೆಯಂದಿರ ಮೇಲೆ ದಬ್ಬಾಳಿಕೆ ಮಾಡಿದವರಲ್ಲ. ತಾನು ಹೇಳಿದ ಹಾಗೆ ಆಗಬೇಕು ಎಂದು ನಡೆದುಕೊಂಡವರಲ್ಲ. ಈಗಲೂ ಹಾಗೆಯೇ ಇದ್ದಾರೆ. ನನ್ನ ಮದುವೆ ಆದ ನಂತರ ತಾಯಿಯ ಜೊತೆಗೆ ಭಾಂದವ್ಯ ಇನ್ನಷ್ಟು ಹೆಚ್ಚಾಯಿತು ಇನ್ನಷ್ಟು ಗಟ್ಟಿಯಾಯಿತು. ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದಾರೆ ತಾನು ಹೇಳಿದ ಹಾಗೆ ಕೇಳಬೇಕು ಎಂದು ಯಾವತ್ತೂ ಹೇಳಿದವರಲ್ಲ.

ಇನ್ನು ನನ್ನ ವಿಚಾರಕ್ಕೆ ಬಂದರೆ ತಾಯಿಗೆ ಇಷ್ಟೊಂದು ಕಷ್ಟ ಪಡುತ್ತಿರುವುದಕ್ಕೆ ಒಮ್ಮೊಮ್ಮೆ ಬೇಸರ ಎನಿಸುತ್ತೆ ನೀನು ನನ್ನ ಮನೆಯ ಮರ್ಯಾದೆ ಉಳಿಸಿದ್ದೀಯ, ಜನರ ಸೇವೆಯಲ್ಲಿ ತೊಡಗಿದ್ದೀಯಾ. ತುಂಬಾ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದೀಯಾ ಎಂದು ತಾಯಿ ಯಾವಾಗಲೂ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಅದರ ಜೊತೆಗೆ ಹೀಗೆ ಯಾವಾಗಲೂ ಓಡಾಟದಲ್ಲಿ ಇರುವ ನನ್ನ ಬಗ್ಗೆ ತಾಯಿಗೆ ಕಾಳಜಿ ಹೆಚ್ಚು. ಹಾಗಾಗಿ ಆಗಾಗ ಆರೋಗ್ಯ ಚೆನ್ನಾಗಿ ಇಟ್ಕೋ ಆರೋಗ್ಯ ನೋಡಿಕೋ ಎಂದು ಯಾವಾಗಲೂ ಹೇಳುತ್ತಿರುತ್ತಾರೆ”. ಎಂದು ಕುಮಾರಸ್ವಾಮಿ ತಾಯಿಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಎಚ್ ಡಿ ಕುಮಾರಸ್ವಾಮಿ ಅವರು ಅನಿತಾ ಕುಮಾರಸ್ವಾಮಿ ಅವರನ್ನು 1986 ರಲ್ಲಿ ವಿವಾಹವಾಗಿದ್ದಾರೆ. ಇವರಿಗೆ ನಿಖಿಲ್ ಕುಮಾರಸ್ವಾಮಿ ಎನ್ನುವ ಮಗ ಇದ್ದು, ಈಗಾಗಲೇ ನಿಖಿಲ್ ಕುಮಾರಸ್ವಾಮಿ ರಾಜಕೀಯದಲ್ಲಿ ಹಾಗೂ ಸಿನಿಮಾದಲ್ಲಿ ಗುರುತಿಸಿಕೊಂಡಿದ್ದಾರೆ.

Leave A Reply

Your email address will not be published.