Dr Bro: ಈ ಕಾರಣಕ್ಕೆ Dr bro ನ ವಿಕೇಂಡ್ ಶೋ ಕರೆಸಲು ಸಾಧ್ಯವೇ ಇಲ್ಲ ಎಂದ ಜೀ ವಾಹಿನಿ.

Advertisement
ವಿಕೆಂಡ್ ವಿಧ್ ರಮೇಶ್ (Weekend With Ramesh) ಎಲ್ಲರ ನೆಚ್ಚಿನ ಕಾರ್ಯಕ್ರಮ, ರಮೇಶ್ (Ramesh) ನಿರೂಪಣೆ ಮಾಡುವ ಮೂಲಕ ಈ ಕಾರ್ಯಕ್ರಮ ಆರಂಭ ಗೊಳ್ಳುತ್ತೆ, ಈಗಾಗಲೇ ಈ ಕಾರ್ಯಕ್ರಮ ಆರಂಭ ಆಗುವ ಮೊದಲೇ ತಮ್ಮ ಬೇಡಿಕೆಯ ನಟರನ್ನು, ಸಾಧಕ ರನ್ನು ಕರೆಸಬೇಕೆಂದು ಕಾಮೆಂಟ್ ಮಾಡುತ್ತಿದ್ದಾರೆ, ರಿಷಭ್ ಬರ್ತಾರೆ ಡಾ.ಬ್ರೋ ಬರಲಿ ಹೀಗೆ ಕಾಮೆಂಟ್ ಮಾಡುತ್ತಾಲೆ ಇದ್ದಾರೆ, ಹೌದು, ಇದೀಗ ಮೋಹಕತಾರೆ ರಮ್ಯಾ ಈ ಬಾರಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮೊದಲ ಅತಿಥಿ ಎಂದು ಎಲ್ಲರಿಗೂ ತಿಳಿದಿದೆ
ರಾಘವೇಂದ್ರ ಹುಣಸೂರು ಹೇಳಿದ್ದೇನು
ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ನಿರೂಪಕ ರಮೇಶ್ ಅರವಿಂದ್ ಹಾಗೂ ಜೀ ವಾಹಿನಿಯ ಚೀಫ್ ಕಂಟೆಂಟ್ ಆಫೀಸರ್ ರಾಘವೇಂದ್ರ ಹುಣಸೂರು ಅವರು ಈ ಶೋ ಕುರಿತಾಗಿ ಮಾಹಿತಿ ನೀಡಿದ್ದರು, ಈ ಬಾರಿ 16 ಸೆಲೆಬ್ರಿಟಿಗಳು ಸಾಧಕರ ಸೀಟಿನಲ್ಲಿ ಕುಳಿತು ಕೊಳ್ಳದಿದ್ದಾರಂತೆ. ಈ ಬಾರಿಯ ಹದಿನಾರನೇ ಅಂದರೆ ಕೊನೆಯ ಸೆಲೆಬ್ರಿಟಿ ವೀಕೆಂಡ್ ವಿತ್ ರಮೇಶ್ (Weekend With Ramesh 5) ಕಾರ್ಯಕ್ರಮದ 100ನೇ ಸೆಲೆಬ್ರಿಟಿ ಆಗಿರಲಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಡ್ರಾ ಬ್ರೋ ಬಗ್ಗೆ ಹೇಳಿದ್ದೇನು
ಯೂ ಟ್ಯೂಬ್ ನೋಡುವವರಿಗೆ, ಸೋಶಿಯಲ್ ಮೀಡಿಯಾ ಹೆಚ್ಚಾಗಿ ಬಳಸುವವರಿಗೆ ಈ ಡಾ ಬ್ರೋ ಚಿರಪರಿಚಿತ. ದೇಶ ವಿದೇಶ ಸುತ್ತುವ ಈತನನ್ನು ಕಂಡರೆ ಎಲ್ಲರಿಗೂ ಇಷ್ಟ, ಆದರೆ ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಅಷ್ಟೆ ಗೊತ್ತು, ಈ ಸಂದರ್ಭದಲ್ಲಿ ಡಾ ಬ್ರೋ ಬರ್ತರಾ ಅಂದಾಗ ನಿಮ್ಮ ತಾಯಿಗೆ ಡಾ ಬ್ರೋ ಗೊತ್ತಾ, ನಿಮ್ಮ ಅಜ್ಜಿಗೆ ಡಾ ಬ್ರೋ ಗೊತ್ತಾ ರಾಘವೇಂದ್ರ ಹುಣಸೂರು ಪ್ರಶ್ನಿಸಿದರು. ಈ ಪ್ರಶ್ನೆಗೆ ಆ ನಿರೂಪಕ ಗೊತ್ತಿಲ್ಲ ಸರ್ ಎಂದು ಮರು ಉತ್ತರ ನೀಡಿದರು, ಟಿವಿ ಮಾಧ್ಯಮ ತುಂಬಾ ವಿಭಿನ್ನ. ನಾವೇನು ಟ್ರೆಂಡಿಂಗ್ ಹಾಗೂ ಟ್ರೋಲಿಂಗ್ ಅಂತ ಕರೆಯುತ್ತೇವೋ ಅದು ತುಂಬಾ ಚಿಕ್ಕ ಪ್ರಪಂಚ. ಟಿವಿ ಅನ್ನೋದು ಗ್ರಾಮೀಣ ಪ್ರದೇಶಗಳಿಗೆ ಒಂದು ದೊಡ್ಡ ಸಾಗರ ಎಂದು ಮಾತು ಆರಂಭಿಸಿದರು
ಡಾ ಬ್ರೋ ಅಭಿಮಾನಿಗಳಿಗೆ ನಿರಾಸೆ
ಡಾ ಬ್ರೋ ಖ್ಯಾತಿಯನ್ನು ಪಡೆದಿರುವ ಕನ್ನಡದ ಟ್ರಾವೆಲರ್ ಯುಟ್ಯೂಬರ್ ಗಗನ್ ಅವರನ್ನು ಸಹ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಅತಿಥಿಯನ್ನಾಗಿ ಕರೆಯಬೇಕು, ಎಂಬ ಬೇಡಿಕೆಯೂ ಸಹ ಹೆಚ್ಚಿತ್ತು. ಆದರೆ ಈ ವಿಷಯವನ್ನು ರಾಘವೇಂದ್ರ ಹುಣಸೂರು ನೀಡಿರುವ ಉತ್ತರ ಕಂಡು ಶಾಕ್ ಆಗಿದ್ದಾರೆ, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಮಾತುಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ನು ಡಾ ಬ್ರೋ ಬರ್ತರಾ ಕಾದು ನೋಡ್ಬೆಕು.