ಕನ್ನಡದಲ್ಲಿ ತಯಾರಾದ ಕಾಂತಾರ ( Kantara ) ಸಿನಿಮಾವು ಸೃಷ್ಟಿಸಿದ ಹವಾ ಅಷ್ಟಿಷ್ಟಲ್ಲ. ಕಾಂತಾರ ಸಿನಿಮಾದ ಬಳಿಕ ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿಯವರ ( Rishab Shetty ) ಡಿಮ್ಯಾಂಡ್ ಕೂಡ ಹೆಚ್ಚಾಗಿದೆ. ಈ ಸಿನಿಮಾದ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ಕಾಂತಾರ 2 ( Kantara 2) ಸ್ಕ್ರಿಪ್ಟ್ ಬರೆಯುವ ಕೆಲಸ ಆರಂಭ ಮಾಡಿದ್ದಾರೆ. ಇದೇ ಮಳೆಗಾಲದಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭ ಆಗುವ ನಿರೀಕ್ಷೆಯಿದೆ ಎನ್ನಲಾಗಿತ್ತು. ಆದರೆ ಈ ಚಿತ್ರದ ಬಗ್ಗೆ ಮಾತ್ರ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿರಲಿಲ್ಲ. ಆದರೆ ಈ ಸಿನಿಮಾ ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್ ಅವರು ಕಾಂತಾರ ಸೆಕೆಂಡ್ ಪಾರ್ಟ್ ಬರಲಿದ್ದು ಬರವಣಿಗೆ ಆರಂಭವಾಗಿದೆ ಎನ್ನುವ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿದೆ.
ಕಾಂತಾರ 2 ಸಿನಿಮಾದ ಕಥೆ ಹೇಗಿರಲಿದೆ?
ಹೊಸ ವರ್ಷದ ದಿನ ಅಂದರೆ ಯುಗಾದಿ ಈ ಕುರಿತು ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿದ್ದು, ನಾವು ಹೊಸ ವರ್ಷ ಯುಗಾದಿಯ ಈ ಸಂಭ್ರಮದಲ್ಲಿ ಕಾಂತಾರ ಪಾರ್ಟ್ 2 ಸಿನಿಮಾಕ್ಕೆ ಬರವಣಿಗೆ ಆರಂಭವಾಗಿದೆ ಎಂದು ತಿಳಿಸಲು ಹರ್ಷವಾಗುತ್ತದೆ. ಪೃಕೃತಿ ಮಾನವ ಸಂಘರ್ಷದ ಕಥೆಯನ್ನು ಮತ್ತೊಂದು ರೂಪದಲ್ಲಿ ಹೊತ್ತು ತರಲಿದ್ದೇವೆ” ಎಂದು ಬರೆದುಕೊಂಡಿದೆ. ಕಾಂತಾರ 2 ಚಿತ್ರಕ್ಕೆ ರಿಷಬ್ ಶೆಟ್ಟಿಯವರೇ ಕಥೆ ಬರೆದು, ನಟಿಸಿ ನಿರ್ದೇಶಿಸಲಿದ್ದಾರೆ. ಈ ಸಿನಿಮಾವನ್ನು ಇಟಾಲಿಯನ್ ಹಾಗೂ ಸ್ಪ್ಯಾನಿಶ್ ಭಾಷೆಯಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದೆ.
ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡಿದ್ದ ಕಾಂತಾರ:
ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ತೆರಕಂಡ ‘ಕಾಂತಾರ’ ಚಿತ್ರಕ್ಕೆ ರಿಷಬ್ ಶೆಟ್ಟಿ ಅವರೇ ಕಥೆ, ಚಿತ್ರಕಥೆ ಬರೆದು, ನಿರ್ದೇಶಿಸಿ, ನಟಿಸಿದ್ದರು. ರಿಷಬ್ ಶೆಟ್ಟಿಯವರ ನಟನೆ ಹಾಗೂ ನಿರ್ದೇಶನಕ್ಕೆ ಸಿನಿ ಪ್ರಿಯರು ಫಿದಾ ಆಗಿದ್ದರು. ಕನ್ನಡದಲ್ಲಿ ತಯಾರಾದ ಕಾಂತಾರ ಸಿನಿಮಾ ವು ಪರಭಾಷೆಯಲ್ಲಿ ರಿಲೀಸ್ ಆಗಿ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿತ್ತು. ಅದಲ್ಲದೇ, 16 ಕೋಟಿ ಬಂಡವಾಳ ಹಾಕಿ ನಿರ್ಮಾಣ ಮಾಡಿದ್ದ ಸಿನಿಮಾ 400 ಕೋಟಿ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸುವಂತೆ ಆಗಿತ್ತು. ಅಷ್ಟೇ ಅಲ್ಲದೇ ಕನ್ನಡ ಚಿತ್ರರಂಗದವರು ಸೇರಿದಂತೆ ಪರಭಾಷೆಯವರು ಕೂಡ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರು.