Ashwini PuneethRajkumar: ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬರದಿರಲು ಕೊನೆಗೂ ಗೊತ್ತಾಯ್ತು ಕಾರಣ

Advertisement
ಕನ್ನಡ ಚಿತ್ರರಂಗದ ಎವರ್ ಗ್ರೀನ್ ಸ್ಟಾರ್ ರಮೇಶ್ ಅರವಿಂದ್(Ramesh Aravind) ನಿರೂಪಣೆಯಲ್ಲಿ ಮೂಡಿಬರುವ ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮಕ್ಕೆ ಭಾರಿ ಅಭಿಮಾನಿ ಬೃಂದವೇ ಇದೆ. ಈ ಕಾರ್ಯಕ್ರಮನ್ನು ಚಿಕ್ಕವರಿಂದ ಹಿಡಿದು ದೊಡ್ಡವರತನಕ ಎಲ್ಲರೂ ಇಷ್ಟಪಡುತ್ತಾರೆ.ಈಗಾಗಲೇ ನಾಲ್ಕು ಸೀಸನ್ಗಳನ್ನು ಯಶಸ್ವಿಯಾಗಿ ಈಗ 5ನೇ ಸೀಸನ್ ಆರಂಭವಾಗಿದ್ದು ಮೊದಲ ಅಥಿತಿಯಾಗಿ ಮೋಹಕತಾರೆ ರಮ್ಯ ಆಗಮಿಸಿದ್ದಾರೆ.
ಇನ್ನು ಈ ಬಾರಿಯ ಶೋನಲ್ಲಿ ಯಾರೆಲ್ಲ ಸಾಧಕರು ಹಾಟ್ ಸೀಟ್ ಮೇಲೆ ಕುಳಿತುಕೊಳ್ಳಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.ಅದರ ನಡುವೆಯೇ ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಈ ವೀಕೆಂಡ್ ವಿತ್ ರಮೇಶ್ ಈ ಸೀಸನ್ ಅತಿಥಿಯಾಗಲಿದ್ದಾರೆ ಎಂಬ ಮಾತು ಕೂಡಾ ಕೇಳಿ ಬಂದಿತ್ತು. ಆದರೆ ಈ ಆಫರ್ ನ್ನು ಅಶ್ವಿನಿ ಅವರೆ ನಿರಾಕರಣೆ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ವೀಕೆಂಡ್ ವಿತ್ ರಮೇಶ್ನ ಮೊದಲ ಸೀಸನ್ನಲ್ಲಿ ಮೊದಲ ಅಥಿತಿಯಾಗಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್(Puneeth Rajkumar) ಆಗಮಿಸಿದ್ದರು. ಪುನೀತ್ ರಾಜ್ಕುಮಾರ್ ಶೋನಲ್ಲಿ ಭಾಗವಹಿಸಿದ್ದಕ್ಕೆ ಯಾವುದೇ ಸಂಭಾವನೆ ಪಡೆದಿಲ್ಲ ಹಾಗಾಗಿ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡ ಯಾವುದೇ ಸಂಭಾವನೆ ಪಡೆಯದೇ ಶೋನಲ್ಲಿ ಭಾಗವಹಿಸುತ್ತಿದ್ದಾರಂತೆ ಎಂಬ ಸುದ್ದಿಗಳಿಗೆ ಅಶ್ವಿನಿಯವರು ಬ್ರೇಕ್ ಹಾಕಿದ್ದಾರೆ.
ಹೌದು, ಈ ಆಫರ್ ನ್ನು ಅಶ್ವಿನಿ ಅವರು ತಿರಸ್ಕರಿಸಿದ್ದಾರೆ.ಈ ಕುರಿತಂತೆ ಅವರೇ ಮಾತನಾಡಿದ್ದು, ಪುನೀತ್ ರಾಜ್ ಕುಮಾರ್ ಸಾಧಕರು ಆದರೆ ನಾನು ಜನರಿಗೆ ಸ್ಪೋರ್ತಿ ನೀಡುವ ರೀತಿಯಲ್ಲಿ ಯಾವುದೇ ರೀತಿಯ ಸಾಧನೆ ಮಾಡಿಲ್ಲ, ನಾನು ಅಪ್ಪು ಪತ್ನಿ ಎಂಬೂದನ್ನು ಹೊರತು ಪಡಿಸಿ ಮತ್ತ್ಯಾವುದೇ ಸಾಧನೆ ಮಾಡಿಲ್ಲ, ಕೆಲವು ಸಿನೆಮಾಗಳನ್ನು ನಿರ್ಮಾಣ ಮಾಡಿದ್ದೇನೆ.ಅಪ್ಪು ಹಾಕಿಕೊಟ್ಟ್ ಹಾದಿಯಲ್ಲಿ ನಡೆಯುತ್ತಿದ್ದೆನೆ ಅಷ್ಟೆ ಎಂದು ವಿನಯವಾಗಿ ಈ ಆಫರ್ ನ್ನು ತಿಸ್ಕರಿಸಿದ್ದಾರಂತೆ.