Prakash Raj: ಅಪ್ಪುಗಾಗಿ ಅಂಬುಲೆನ್ಸ್ ಕೊಡುತ್ತೇನೆ ಎಂದಿದ್ದ ಯಶ್ ಈಗ ಮಾಡಿದ್ದೇನು! ಪ್ರಕಾಶ್ ರಾಜ್ ಹೇಳಿಕೆ ವೈರಲ್

Advertisement
ನಗುವಿನ ಒಡೆಯ, ಹೃದಯವಂತಿಕೆ ಹೊಂದಿದ್ದ ವ್ಯಕ್ತಿ ಪುನೀತ್ ರಾಜ್ ಕುಮಾರ್ ( Puneeth Raj Kumar ) ಇದೀಗ ನೆನಪು ಮಾತ್ರ. ಎಲ್ಲರೊಂದಿಗೆ ಸಾಮಾನ್ಯರಂತೆ ಇರುತ್ತಿದ್ದ ವ್ಯಕ್ತಿ, ಬೆಳೆದದ್ದು ಕೂಡ ಸಾಮಾನ್ಯರಂತೆ. ದೊಡ್ಮನೆಯ ಕೂಸದಾರೂ ಒಂದಷ್ಟು ಆದರ್ಶಗಳು, ಸಾಮಾಜಿಕ ಕಳಕಳಿಯ ಕೆಲಸಗಳಿಗೆ ಕೊರತೆ ಇರದಂತೆ ಬದುಕುತ್ತಿದ್ದರು.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ವೈಯುಕ್ತಿಕ ಬದುಕಿನಲ್ಲಿ ಹಾಗೂ ಸಿನಿಮಾ ಬದುಕಿನಲ್ಲಿ ಯಾರೊಂದಿಗೂ ಮನಸ್ತಾಪವನ್ನು ಮಾಡಿಕೊಳ್ಳದ ಮಹಾನುಭಾವ. ಅದರ ಜೊತೆಗೆ, ಸಮಾಜ ಮುಖಿ ಕೆಲಸಗಳನ್ನು ಮಾಡಿದರೂ ಎಂದಿಗೂ ಪ್ರಚಾರವನ್ನು ಇಷ್ಟ ಪಟ್ಟವರಲ್ಲ. ಯಾವುದೇ ಸ್ವಾರ್ಥವನ್ನು ಇಟ್ಟು ಕೊಳ್ಳದೇ ಮಾಡಿದ ಸೇವೆಗಳಿಂದ ಅಪ್ಪು ಮಾಡಿದ ಕೆಲಸಗಳು ಲೆಕ್ಕವಿಲ್ಲದಷ್ಟು.
ಇದೀಗ ಅಪ್ಪುವನ್ನು ದೇವರ ಸ್ಥಾನದಲ್ಲಿಟ್ಟು ಅಭಿಮಾನಿಗಳು ಪೂಜಿಸುತ್ತಿದ್ದಾರೆ. ಇವತ್ತಿಗೂ ಅಪ್ಪುವಿನ ಗುಣವನ್ನು ಹೊಗಳುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಅಪ್ಪು ಅಭಿಮಾನಿಗಳು ಅಪ್ಪುವಿನ ಹೆಸರಿನಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ. ಚಂದನವನದ ಸೇರಿದಂತೆ ಪರಭಾಷೆಯ ನಟ ನಟಿಯರು ಕೂಡ ಅಪ್ಪುವನ್ನು ಆದರ್ಶವಾಗಿ ತೆಗೆದುಕೊಂಡಿದ್ದಾರೆ.
ಕಳೆದ ವರ್ಷ ನಟ ಪ್ರಕಾಶ್ ರಾಜ್(Prakash Raj), ಹೊಸ ಕಾರ್ಯಕ್ಕೆ ಚಾಲನೆ ನೀಡಿದ್ದರು. ಅಷ್ಟೇ ಅಲ್ಲದೇ ಕಾರ್ಯಕ್ಕೆ ನಟ ಯಶ್(Yash) ಸಹ ಕೈ ಜೋಡಿಸಿದ್ದರು. ಹೌದು ತಮ್ಮ ಯಶೋಮಾರ್ಗದ ಮೂಲಕ ಆಂಬುಲೆನ್ಸ್ ನೀಡುವುದಾಗಿ ಹೇಳಿದ್ದರು. ಇದಕ್ಕೆ ಸಂಬಂಧಪಟ್ಟ ವಿಡಿಯೋವೊಂದನ್ನು ಖ್ಯಾತ ನಟ ಪ್ರಕಾಶ್ ರಾಜ್ ( Prakash Raj ) ಅವರು ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಖ್ಯಾತ ನಟ ಪ್ರಕಾಶ್ ರಾಜ್ ಹಂಚಿಕೊಂಡಿರುವ ವಿಡಿಯೋದಲ್ಲಿ ಏನಿದೆ?
ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ನಟ ಪ್ರಕಾಶ್ ರಾಜ್ ಅವರು ” ಸಜ್ಜನಿಕೆಯಿಂದ, ಧಾರಾಳ ಮನಸ್ಸಿನಿಂದ ಎಂದೆಂದಿಗೂ ಮರೆಯಲಾಗದ ನೆನಪಾಗಿರುವವರು ನಮ್ಮೆಲ್ಲರ ಕಣ್ಮಣಿ ಡಾ. ಪುನೀತ್ ರಾಜ್‌ಕುಮಾರ್. ಅವರು ಯಾವಾಗಲೂ ನಮ್ಮ ಜೊತೆಗೆ ಇರಬೇಕೆಂದರೆ, ಅವರು ಮಾಡುತ್ತಿದ್ದ ಒಳ್ಳೆಯ ಕೆಲಸಗಳನ್ನು ಮುಂದುವರಿಸುವುದರಿಂದ ಮಾತ್ರ ಸಾಧ್ಯ. ಆ ಕಾರಣಕ್ಕಾಗಿ ಆ ಕನಸಿನಂತೆ ಶುರುವಾಗಿದ್ದು, ಆ ಆಶಯದಂತೆ ಶುರುವಾಗಿದ್ದು ಅಪ್ಪು ಎಕ್ಸ್‌ಪ್ರೆಸ್ ಆಂಬುಲೆನ್ಸ್.
ಕರ್ನಾಟಕದ ಎಲ್ಲ ಜಿಲ್ಲೆಗಳಿಗೂ ಒಂದೊಂದು ಇರಬೇಕೆಂಬುದು, ನನ್ನ ಮತ್ತು ನನ್ನ ಪ್ರಕಾಶ್ ರಾಜ್ ಫೌಂಡೇಶನ್‌ನ ಕನಸು. ಮೈಸೂರಿನಲ್ಲಿ ಮೊದಲನೇ ಆಂಬುಲೆನ್ಸ್ ಶುರುವಾಯಿತು. ಈಗ ಐದು ಆಂಬುಲೆನ್ಸ್‌ಗಳು ನಮ್ಮ ಮುಂದಿವೆ. ಬೀದರ್, ಕಲಬುರ್ಗಿ, ಉಡುಪಿ, ಕೊಳ್ಳೆಗಾಲ ಮತ್ತು ಕೊಪ್ಪಳ ಜಿಲ್ಲೆ. ಆದರೆ ಈ ಸಲ ಈ ಕನಸು ನನಸಾಗಿಸಲು ನಾನೊಬ್ಬನೇ ಇಲ್ಲ. ನನಗೆ ಜತೆಯಾಗಿ ನಿಂತಿರುವವರು, ಮೆಗಾಸ್ಟಾರ್ ಚಿರಂಜೀವಿ, ತಮಿಳು ನಟ ಸೂರ್ಯ, ದೊಡ್ಡ ಮಟ್ಟದ ಬೆಂಬಲವಾಗಿ ನಿಂತಿರುವವರು ನಮ್ಮ ಪ್ರೀತಿಯ ಯಶ್. ಮತ್ತವರ ಸ್ನೇಹಿತ ವೆಂಕಟ್ ಅವರು.
ಪ್ರಕಾಶ್ ಸರ್ ಇದು ನಿಮ್ಮೊಬ್ಬರ ಕನಸಲ್ಲ. ಇನ್ಮೇಲೆ ಆ ಭಾರ ನಂದೂ ಕೂಡ ಎಂದು ದೊಡ್ಡ ಧಾರಾಳತನವನ್ನು ಮೆರೆದವರು ಯಶ್. ಮತ್ತವರ ಯಶೋಮಾರ್ಗ. ದೊಡ್ಡ ಸಮಾರಂಭ ಮಾಡಬಹುದಿತ್ತು. ಆದರೆ ಆ ಕಾರ್ಯಕ್ರಮಕ್ಕೆ ಆಗೋ ಖರ್ಚನ್ನ ಉಳಿಸಿದರೆ ಇನ್ನೊಂದು ಆಂಬುಲೆನ್ಸ್ ಆಗುತ್ತಲ್ಲ ಅಂತ ಎಂಬುದು ನನ್ನ ಮತ್ತು ಯಶ್ ಅವರ ಅನಿಸಿಕೆ. ಹಾಗಾಗಿ ಈ ಸುದ್ದಿಯನ್ನು ವಿಡಿಯೋ ಮೂಲಕ ಹಂಚಿಕೊಳ್ಳುತ್ತಿದ್ದೇವೆ.
ಇದರ ಹಿಂದೆ ರಾಜಕಾರಣ ಇದೆಯಾ ಎಂದು ಕುಹಕವಾಗಿ ಮಾತನಾಡುವವರು ಇರ್ತಾರೆ. ಇರಲಿ. ಇದು ನನ್ನ ಮತ್ತು ಯಶ್‌ನ ರಾಜಕಾರಣ. ಪ್ರೀತಿಯನ್ನು ಹಂಚುವ, ಮಾನವೀಯತೆಯನ್ನು ಮೆರೆಯುವ ಪುನೀತ್ ರಾಜ್‌ಕುಮಾರ್ ಅವರನ್ನು ಸಂಭ್ರಮಿಸುವ ರಾಜಕಾರಣ. ಎಲ್ಲರಿಗೂ ಒಳ್ಳೆಯದಾಗಲಿ” ಎಂದಿದ್ದಾರೆ. ಒಟ್ಟಿನಲ್ಲಿ ಅಭಿಮಾನಿಗಳು ಸೇರಿದಂತೆ ನಟ ನಟಿಯರು ಕೂಡ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರನ್ನು ಸಾಮಾಜಿಕ ಕೆಲಸ ಗಳಿಂದ ಜೀವಂತವಾಗಿರಿಸುವ ಪ್ರಯತ್ನದಲ್ಲಿದ್ದಾರೆ.