Karnataka Times
Trending Stories, Viral News, Gossips & Everything in Kannada

Meghana Raj: ಎಲ್ಲರೂ ಕಾಯುತ್ತಿದ್ದ ಸಿಹಿಸುದ್ದಿ ಕೊಟ್ಟ ಮೇಘನಾ ರಾಜ್

ಕನ್ನಡದ ಖ್ಯಾತ ನಟಿ ಮೇಘನಾ ರಾಜ್(Meghana Raj) ಅವರು ತಾಯಿಯಾಗುತ್ತಿರುವ ಸಂಭ್ರಮದಲ್ಲಿರುವಾಗಲೇ ಅವರ ಪತಿ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾದರು. ಅದರ ನಂತರ ಮೇಘನ ಮೌನಕ್ಕೆ ಜಾರಿದ್ರು. ಆದ್ರೆ ಈದೀಗ ಆವರ ಪುತ್ರನೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಅದರೊಂದಿಗೆ ಸಿನೆಮಾ ಗೆ ಕಂಬ್ಯಾಕ್ ಮಾಡಿದ್ದಾರೆ.

Advertisement

ಈ ಕುರಿತಂತೆ ನಟಿ ಮೇಘನಾ ರಾಜ್ ಅವರು ಒಂದು ಪೋಸ್ಟ್ ಹಂಚಿಕೊಂಡಿದ್ದರು. 2020ರ ಆ ಭಾನುವಾರ ನನ್ನ ಬದುಕು ಸಂಪೂರ್ಣವಾಗಿ ಬದಲಾಯಿತು. ಅಂದಿನಿಂದಲೂ ನನಗೆ ಒಂದು ಪ್ರಶ್ನೆ ಎದುರಾಗುತ್ತಲೇ ಇತ್ತು. ಈಗ ನಾನು ಆ ಪ್ರಶ್ನೆಗೆ ಉತ್ತರ ಕೊಡುತ್ತೇನೆ ಎಂದಿದ್ರು.

Advertisement

ಇದೀಗ ಮೇಘನಾ ರಾಜ್ ಹಂಚಿಕೊಂಡಿರುವ ವಿಷಯ ಏನೆಂದು ಜನರಿಗೆ ಮೇಘನಾ ಸ್ಯಾಂಡಲ್ವುಡ್ಗೆ ಕಮ್ಬ್ಯಾಕ್ ಮಾಡಲಿದ್ದಾರೆ ಈ ಸಿನಿಮಾಗೆ ಟೈಟಲ್ ಫಿಕ್ಸ್ ಕೂಡಾ ಫಿಕ್ಸ್ ಆಗಿದೆ. ಚಿತ್ರಕ್ಕೆ ‘ತತ್ಸಮ ತದ್ಭವ'(Tatsama Tadbhava) ಎಂದು ಹೆಸರಿಡಲಾಗಿದೆ.ಇದು ಮಹಿಳಾ ಪ್ರಧಾನವಾದ ಚಿತ್ರವಾಗಿದೆ. ಈ ಕುರಿತಂತೆ ಮೆಘನಾ ಮಾತನಾಡಿ ಮಹಿಳಾ ಪ್ರಧಾನ ಸಿನಿಮಾಗಳನ್ನು ಜನರು ಅಷ್ಟಾಗಿ ಮೆಚ್ಚಿಕೊಳ್ಳದ ಕಾಲವೊಂದಿತ್ತು.

Advertisement

ನಟಿಯರು ಯಾವುದೇ ಕಥೆ ಸಿಗದೆ, ಎಲ್ಲವೂ ಮುಗಿದ ಮೇಲೆ ಮಹಿಳಾ ಪ್ರಧಾನ ಸಿನಿಮಾ ಮಾಡುತ್ತಾರೆ ಎನ್ನುತ್ತಿದ್ದರು. ಕಳೆದ 30 ವರ್ಷಗಳಿಂದ ಪುರುಷ ಪ್ರಧಾನ ಸಿನಿಮಾಗಳು ಇಂಡಸ್ಟ್ರಿ ಯಲ್ಲಿ ಹೆಚ್ಚಾಗಿತು. ಆದ್ರೆ ಈಗ ಈ ಟ್ರೆಂಡ್ ಬದಲಾಗುತ್ತಿದೆ. ಮಹಿಳಾ ಪ್ರಧಾನ ಸಿನಿಮಾಗಳಲ್ಲಿಯೂ ಹೊಸತನ ಕಾಣಸಿಗುತ್ತಿದೆ ಎಂದಿದ್ದಾರೆ.

Advertisement

ಈ ಸಿನಿಮಾದ ಕಥೆಯನ್ನು ನಿರ್ದೇಶಕ ವಿಶಾಲ್ ಹೇಳದ್ರು ಆಗ ನನಗೆ ಇದು ಇಷ್ಟವಾಯಿತು. ಸಿನಿಮಾ ನೋಡುವ ಪ್ರೇಕ್ಷಕ ಕಥೆಯೊಳಗೆ ತನ್ನನ್ನು ತಾನು ಕನೆಕ್ಟ್ ಮಾಡಿಕೊಳ್ಳುತ್ತಾನೆ. ಪ್ರತಿ ಸಾರಿ ಎದುರಾಗುವ ಪ್ರಶ್ನೆಗಳಿಗೆ ಅವನೇ ಉತ್ತರ ಕಂಡುಕೊಳ್ಳುತ್ತಾ ಸಿನಿಮಾ ನೋಡುತ್ತಾನೆ. ಈ ಪಾಯಿಂಟ್ ನನಗೆ ತುಂಬಾ ಇಷ್ಟವಾದ ಕಾರಣ ಈ ಸಿನೆಮಾಗೆ ಒಪ್ಪಿದೆ ಎಂದಿದ್ದಾರೆ.

Leave A Reply

Your email address will not be published.