Actress Ramya: ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ತನ್ನ ಜೀವನದ ಟರ್ನಿಂಗ್ ಪಾಯಿಂಟ್ ಕೊಟ್ಟ ಆ ವ್ಯಕ್ತಿ ಹೆಸರು ಹೇಳಿದ ರಮ್ಯಾ
ಸಿನಿಮಾ ರಂಗದಲ್ಲಿ ಸಾಲು ಸಾಲು ಅವಕಾಶಗಳು ಬರುತ್ತಿರುವಾಗಲೇ ಸಿನಿ ಬದುಕಿನಿಂದ ದೂರ ಉಳಿದು ರಾಜಕೀಯದತ್ತ ಮುಖ ಮಾಡಿದವರು ಮೋಹಕ ತಾರೆ ರಮ್ಯಾ ( Ramya ). ಆದರೆ ನಟಿ ರಮ್ಯಾ ಪಾಲಿಗೆ ರಾಜಕೀಯ ರಂಗ ಕೈಹಿಡಿಯಲಿಲ್ಲ. ಸದ್ಯಕ್ಕೆ ಚಂದನವನಕ್ಕೆ ಕಮ್ ಬ್ಯಾಕ್ ಮಾಡಿದ್ದು ಎರಡನೇ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಇದೀಗ ವೀಕೆಂಡ್ ವಿತ್ ರಮೇಶ್ ಸೀಸನ್ 5 ( Weekend With Ramesh Sisan 5 ) ರಲ್ಲಿ ಮೊದಲ ಅತಿಥಿಯಾಗಿ ಆಗಮಿಸಿರುವ ರಮ್ಯಾ ರಾಜಕೀಯದಲ್ಲಿ ತನಗೆ ಸಹಾಯ ಮಾಡಿದ ರಾಹುಲ್ ಗಾಂಧಿ ( Rahul Gandhi ) ಯವರನ್ನು ನೆನಪು ಮಾಡಿಕೊಂಡಿದ್ದಾರೆ.
ವೀಕೆಂಡ್ ವಿತ್ ಶೋನಲ್ಲಿ ರಾಹುಲ್ ಗಾಂಧಿಯನ್ನು ನೆನಪಿಸಿಕೊಂಡ ನಟಿ ರಮ್ಯಾ
ರಾಜಕೀಯ ದಿನಗಳನ್ನು ನೆನಪಿಸಿಕೊಂಡ ನಟಿ ರಮ್ಯಾ ( Ramya ) , ” ತಾನು ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕವಾಗಿದ್ದು, ನಾನು ರಾಜಕೀಯಕ್ಕೆ ಎಂಟ್ರಿಯಾದ ಸಮಯದಲ್ಲಿಯೇ ನನ್ನ ತಂದೆ ತೀರಿಕೊಂಡರು. ಅದು ನನ್ನನ್ನು ಇನ್ನಿಲ್ಲದಂತೆ ಕಾಡಿತು. ಅದಾದ ಬಳಿಕ ನಾನು ಚುನಾವಣೆಯಲ್ಲಿ ಸೋತೆ ಅದು ನನ್ನ ಪಾಲಿಗೆ ಬಹಳ ಕಷ್ಟದ ಸಮಯ.
ನನ್ನ ತಂದೆ ಹೋದ ಸಮಯದಲ್ಲಿ ಅಂತೂ ನಾನು ಆತ್ಮಹತ್ಯೆಗೂ ಯತ್ನಿಸಿದ್ದೆ. ಆದರೆ ಆ ಸಮಯದಲ್ಲಿ ರಾಹುಲ್ ಗಾಂಧಿ ಜೀ ಅವರು ನನಗೆ ಬಹಳ ಸಹಾಯ ಮಾಡಿದರು. ನನ್ನಲ್ಲಿ ಹೊಸ ಚೈತನ್ಯ ತುಂಬುವ ಯತ್ನ ಮಾಡಿದರು. ಹುಟ್ಟು-ಸಾವುಗಳ ಬಗ್ಗೆ ತಿಳಿಸಿಕೊಟ್ಟರು. ನಮ್ಮ ಜೀವನದ ಉದ್ದೇಶದ ಬಗ್ಗೆ ಪಾಠ ಮಾಡಿದರು. ನನ್ನ ಜೀವನದಲ್ಲಿ ನನ್ನ ತಾಯಿ, ತಂದೆಯ ಬಳಿಕ ನನ್ನ ಮೇಲೆ ಅತಿಯಾಗಿ ಪ್ರಭಾವ ಬೀರಿದ ವ್ಯಕ್ತಿ ರಾಹುಲ್ ಗಾಂಧಿ” ಎಂದಿದ್ದಾರೆ.
ಮಾತು ಮುಂದುವರೆಸಿದ ಮೋಹಕ ತಾರೆ ರಮ್ಯಾ, “ನಾನು ಮೊದಲು ಪಾರ್ಲಿಮೆಂಟ್‌ಗೆ ಹೋದಾಗ ನನಗೆ ಏನೂ ಗೊತ್ತಿರಲಿಲ್ಲ. ನಾನು ಕಲಿತೆ, ಇದಕ್ಕೆ ಮಂಡ್ಯ ಜನತೆಗೆ ಥ್ಯಾಂಕ್ಸ್ ಹೇಳಬೇಕು. ಮಂಡ್ಯ ಜನರು ಇಲ್ಲ ಅಂದಿದ್ರೆ ನನಗೆ ಆ ಧೈರ್ಯ ಬರ್ತಿರಲಿಲ್ಲ. ಪೊಲಿಟಿಕಲ್ ಕಮ್ಯುನಿಕೇಶನ್ ತುಂಬಾ ಕಷ್ಟ. ಮನನರಂಜನೆ ತುಂಬಾ ಸುಲಭ. ನ್ಯೂಸ್ ಹಿಂದೆ ಬೀಳುವುದು ಕಷ್ಟ. ನಾವು 24*7 ನ್ಯೂಸ್ ಚಾನೆಲ್ ಥರಾ ಕೆಲಸ ಮಾಡುತ್ತಿದ್ದೆವು” ಆ ದಿನಗಳನ್ನು ನೆನಪಿಸಿಕೊಂಡು ಪಕ್ಷ ಹಾಗೂ ತಂಡಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ನಿರ್ಮಾಪಕಿಯಾಗಿ ಮತ್ತೆ ಸ್ಯಾಂಡಲ್ ವುಡ್ ಗೆ ಮೋಹಕತಾರೆ ರಮ್ಯಾ
ಇತ್ತ ನಟಿ ರಮ್ಯಾ ಸದ್ಯ ಅನೇಕ ವರ್ಷಗಳ ಬಳಿಕ ಮತ್ತೆ ಸಿನಿಮಾರಂಗಕ್ಕೆ ಮತ್ತೆ ಮರಳಿದ್ದಾರೆ. ಹೌದು, ನಟನೆ ಜೊತೆಗೆ ರಮ್ಯಾ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭ ಮಾಡಿದ್ದಾರೆ. ರಮ್ಯಾ ನಿರ್ಮಾಣದ ಆಪಲ್ ಬಾಕ್ಸ್ ಸಂಸ್ಥೆಯಿಂದ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ತೆರೆ ಕಾಣಲಿದೆ. ಮೋಹಕ ತಾರೆ ರಮ್ಯಾರವರು ನಟ ಧನಂಜಯ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ಮೋಹಕ ತಾರೆ ರಮ್ಯಾ ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ.